ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ | ಬದ್ರುದ್ದೀನ್ ಕೆ. ಮಾಣಿಯವರಿಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ
ಮಾಣಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಜೀವಮಾನದ ವೃತ್ತಿ ಸೇವೆ/ ಸಾಧನೆಗಾಗಿ ಮತ್ತು ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಪಬ್ಲಿಕ್ ಟಿವಿಯ ಮುಖ್ಯ ವರದಿಗಾರ ಬದ್ರುದ್ದೀನ್.ಕೆ ಮಾಣಿಯವರು “ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ” ಗೆ ಆಯ್ಕೆಗೊಂಡಿದ್ದಾರೆ.
ಮಂಗಳೂರಿನಲ್ಲಿ ಮಾ.7 ಮತ್ತು 8ರಂದು ನಡೆಯುವ 35ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.