ಕಡಬ | ಅಕ್ರಮ ಮರಳು ಸಾಗಾಟ ವಾಹನ ಡಿಕ್ಕಿ ಕೂಲಿ ಕಾರ್ಮಿಕ ಸಾವು ಪ್ರಕರಣ ಆರೋಪಿ ಚಾಲಕನಿಗೆ 15 ದಿನ ನ್ಯಾಯಾಂಗ ಬಂಧನ

ಕಡಬ : ಕಡಬ ಸಮೀಪದ ಬೊಳ್ಳೂರು ಎಂಬಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳನಿಗೆ ಸೇರಿದ ಅಕ್ರಮ ಮರಳು ಸಾಗಾಟ ಲಾರಿ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಕೂಲಿ ಕಾರ್ಮಿಕ ಸಾವುಗಿಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಲತೀಫ್ ಎಂಬರ ಇಂದು ಕಡಬ ಪೊಲೀಸರು ಕೋರ್ಟಿಗೆ ಹಾಜರು ಪಡಿಸಿದ್ದು ವಿಚಾರಣೆ ನಡೆಸಿದ ACJ ಹಾಗೂ JMFC ನ್ಯಾಯಾಲಯ ಆರೋಪಿಯನ್ನು ಮಾರ್ಚ್ 16ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.


Ad Widget

Ad Widget

ಪ್ರಕರಣ :


Ad Widget

ಕಳೆದ ಭಾನುವಾರದಂದು ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಬೊಳ್ಳೂರಿನಲ್ಲಿ ಅಪಘಾತ ಸಂಭವಿಸಿತ್ತು

ಆದ್ರೆ ಚಾಲಕ ಅಕ್ರಮ ಮರಳು ಸಾಗಾಟ ತಿಳಿಯಬಾರದೆಂದು ಅಪಘಾತ ನಡೆದ ಸ್ಥಳದ ಅನತಿ ದೂರದಲ್ಲಿರುವ ಮನೆಯ ಅಂಗಳದಲ್ಲಿ ಮರಳು ಖಾಲಿ ಮಾಡಿ ಪುನಃ ಲಾರಿಯನ್ನು ಅಪಘಾತವಾದ ಸ್ಥಳಕ್ಕೆ ನಿಲ್ಲಿ ಸಿದ್ದ.

Ad Widget

Ad Widget

Ad Widget

ಈ ಬಗ್ಗೆ ಹೊಸ ಕನ್ನಡ ಸ್ಫೋಟಕ ತನಿಖಾ ವರದಿ ಪ್ರಕಟಿಸಿತ್ತು. ಆನಂತರ ಉಳಿದ ಮಾಧ್ಯಮಗಳಲ್ಲಿ ಕೂಡ ವರದಿ ಪ್ರಕಟವಾಗಿತ್ತು. ನಮ್ಮ ವರದಿಯ ಫಲಶ್ರುತಿಯಾಗಿ ಎಸ್.ಪಿ ಲಕ್ಷ್ಮಿಪ್ರಸಾದ್ ಅವರು ಕಡಬ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದು ಬಳಿಕ ಸಾಕ್ಷಿ ನಾಶ ಪಡಿಸಿದಕ್ಕೆ ಐ.ಪಿ.ಸಿ ಸೆಕ್ಷನ್ 201 ಹಾಗೂ ಅಕ್ರಮ ಮರಳು ಸಾಗಾಟಕ್ಕೆ ಐ.ಪಿ.ಸಿ ಸೆಕ್ಷನ್ 379 ಅಡಿಯಲ್ಲಿ ಕೇಸ್ ದಾಖಲಿಸಿದ್ದರು.

error: Content is protected !!
Scroll to Top
%d bloggers like this: