ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಜೆಟ್ ಇಂಪ್ಲಿಕೇಷನ್ಸ್ ಮತ್ತು ಕನ್ಸರ್ನ್ಸ್ ಕಾರ್ಯಾಗಾರ

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಬಜೆಟ್ ಇಂಪ್ಲಿಕೇಷನ್ಸ್ ಮತ್ತು ಕನ್ಸರ್ನ್ಸ್  ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ,ಒಂದು ದೇಶದ ಅಭಿವೃದ್ಧಿಯಲ್ಲಿ ಆ ದೇಶದ ಬಜೆಟ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸರ್ಕಾರಕ್ಕೆ ಸಲ್ಲಿಸುವ ತೆರಿಗೆ, ಸರ್ಕಾರ ಅದನ್ನು ವಿನಿಯೋಗಿಸುವ ರೀತಿ ಇವೆಲ್ಲವನ್ನೂ ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದರು.

 ಸಂಪನ್ಮೂಲ ವ್ಯಕ್ತಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಅಕ್ಷತಾ ಎಂ. ಮತ್ತು ಸುಮಾ ಅವರು ಈಗಾಗಲೇ ಮಂಡಿಸಲ್ಪಟ್ಟಿರುವ ಬಜೆಟಿನ ವಿಷಯಗಳನ್ನು ಸ್ಥೂಲವಾಗಿ ವಿವರಿಸಿದರು.

ವೇದಿಕೆಯಲ್ಲಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿ ಅಶ್ವಿನ್ ಎಲ್.ಶೆಟ್ಟಿ, ಪ್ರಾಂಶುಪಾಲೆ ರಾಜಲಕ್ಷ್ಮಿಎಸ್. ರೈ, ಉಪಪ್ರಾಂಶುಪಾಲ ಶೇಷಗಿರಿ ಎಂ ಉಪಸ್ಥಿತರಿದ್ದರು.

ಆಂಗ್ಲ ಭಾಷಾ ಉಪನ್ಯಾಸಕಿ ರಶ್ಮಿ ಕೆ ಸ್ವಾಗತಿಸಿ ವಂದಿಸಿದರು.

Leave A Reply

Your email address will not be published.