ಅಕ್ರಮ ಮರಳು ಸಾಗಾಟದ ಮೊದಲ ಚಿತ್ರಸಮೇತ ತನಿಖಾ ವರದಿ ನೀಡಿದ್ದೇ ಹೊಸಕನ್ನಡ : ಸ್ಪಂದಿಸಿದೆ ಪೊಲೀಸ್ ಇಲಾಖೆ !

ಮರಳು ಸಾಗಾಟ ಲಾರಿಗೆ ರಾಜಸ್ಥಾನ ಮೂಲದ ಕಾರ್ಮಿಕ ಮೇಘರಾಜ್ ಬಲಿಯಾದ ಸುದ್ದಿಯ ಹಿಂದಿನ ಸತ್ಯವನ್ನು ಬೆನ್ನಟ್ಟಿ ಹೋದ ಹೊಸಕನ್ನಡಕ್ಕೆ ಎಲ್ಲರಿಗಿಂತ ಮೊದಲು ಸಿಕ್ಕಿತ್ತು ಅಕ್ರಮ ಮರಳು ದಂಧೆಯ ವಾಸನೆ.

ಘಟನೆಯ ಜಾಡನ್ನು ಬೆನ್ನು ಹಿಡಿದು ಹೋದ ನಾವು ” Big twist ಮರ್ದಾಳ ಅಪಘಾತ : ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ “ ಎಂದು ನಿನ್ನೆ ರಾತ್ರಿ 8.30 ರ ಸುಮಾರಿಗೇ ಚಿತ್ರ ಸಮೇತವಾಗಿ ಪ್ರಕಟಿಸಿದ್ದೆವು.

ನಾವು ನಿನ್ನೆ ರಾತ್ರಿ ಪ್ರಕಟಿಸಿದ ಸುದ್ದಿ ವೈರಲ್ ಆಗುತ್ತಿದ್ದಂತೆ ತಕ್ಷಣ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಸ್ಪಂದಿಸಿದೆ. ಕಡಬ ಪೊಲೀಸ್ ಠಾಣೆಗೆ ಎಸ್ಪಿ ಲಕ್ಷ್ಮೀಪ್ರಸಾದ್ ಡಿವೈಎಸ್ಪಿ ದಿನಕರ್ ಶೆಟ್ಟಿ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಅವರು ಭೇಟಿ ನೀಡಿದ್ದಾರೆ.

ಮೇಲ್ನೋಟಕ್ಕೆ ಲಾರಿಯಲ್ಲಿ ಮರಳು ಸಾಗಾಟ ನಡೆದಿದೆಯೆಂದು ಕಂಡುಬರುತ್ತಿದೆ ಎಂದು ಎಸ್ಪಿ ಯವರು ಕೂಡ ಹೇಳಿದ್ದಾರೆ.

ನಾವು ನಿನ್ನೆಯೇ, ಲಾರಿಯಿಂದ ಅನ್ ಲೋಡ್ ಮಾಡಲ್ಪಟ್ಟ ಮರಳಿನ ಚಿತ್ರವನ್ನು ಪ್ರಕಟಿಸಿದ್ದೆವು. ನಿನ್ನೆಯ ನಮ್ಮ ಈ ಕುರಿತಾದ ಸುದ್ದಿ ಓದಲು ಇದನ್ನು ಕ್ಲಿಕ್ ಮಾಡಿರಿ.

ಹೊಸಕನ್ನಡ.ಕಾಂ ಫಲಶ್ರುತಿ

Leave A Reply

Your email address will not be published.