ಕಾಣಿಯೂರು ವಿಶ್ವಜ್ಞ ಯುವಕ ಮಂಡಲದಿಂದ ಕೇಂದ್ರ ಯೋಜನೆಗಳ ತರಬೇತಿ ಕಾರ್ಯಗಾರ

ಕಾಣಿಯೂರು: ಯುವ ಶಕ್ತಿಯೇ ನಮ್ಮ ದೇಶದ ಸಂಪತ್ತು. ಆ ಯುವ ಶಕ್ತಿಯ ಸದ್ಬಳಕೆವಾದಾಗ ನಮ್ಮ ದೇಶದ ಸಂಸ್ಕøತಿಯ ಜೊತೆಗೆ ಸಂಪತ್ತನ್ನು ಉಳಿಸಲು ಸಾಧ್ಯ. ನಮ್ಮ ಜೀವನ ರೂಪಿಸುವಾಗ ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳು ಮಾದರಿಯಾಗಬೇಕು ಎಂದು ಬೆಳಂದೂರು ಜಿ.ಪಂ, ಕ್ಷೇತ್ರದ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು.

ಅವರು ಭಾರತ ಸರಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕøತ ವಿಶ್ವಜ್ಞ ಯುವಕ ಮಂಡಲ ಕಾಣಿಯೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಮಾ 2ರಂದು ನಡೆದ ನೆರೆಹೊರೆ- ಯುವ ಸಂಸತ್ತು ಕಾರ್ಯಕ್ರಮದಡಿಯಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳು ಹಾಗೂ ಅನುಷ್ಠಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರಗಳ ಕುರಿತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಭೂಮಿ ಪ್ರಕೃತಿ ನಮಗೆ ಎಲ್ಲವನ್ನು ಕೊಟ್ಟಿದೆ. ಆದರೆ ನಾವು ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಸಾಗುತ್ತಾ ಇದ್ದೇವೆ. ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾವಲಂಬಿ ಬದುಕನ್ನು ರೂಪಿಸುತ್ತಾ ಆರ್ಥಿಕವಾಗಿ ಸಬಲರಾಗಿ ಆರೋಗ್ಯವಂತ ಜೀವನ ನಡೆಸೋಣ ಎಂದವರು ಸರಕಾರ ರೂಪಿಸುವ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕಾದರೆ, ಅನುಷ್ಠಾನವಾಗುವ ಸಂದರ್ಭದಲ್ಲಿ ಸಮುದಾಯದ ಪಾತ್ರವು ಅತೀ ಅಗತ್ಯವಾಗಿದೆ. ಇಂತಹ ಉತ್ತಮ ಚಿಂತನೆಯ ಯುವಕ ಮಂಡಲಗಳು ಬೆಳೆಯಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಮಾತನಾಡಿ, ಯುವಕರು ನಾಳೆಯ ದಿನ ಉತ್ತಮ ಭವಿಷ್ಯದ ದೃಷ್ಠಿಯನ್ನು ಇಟ್ಟುಕೊಂಡು ಇವತ್ತಿನ ಜೀವನ ನಿರ್ವಹಣೆ ಮಾಡಬೇಕಾಗಿದೆ. ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಟ್ಟು ಜಲ ಸರಂಕ್ಷಣೆಯ ವಿಚಾರದಲ್ಲಿ ಆದ್ಯತೆ ನೀಡದೇ ಹೋದರೆ ಮುಂದೊಂದುದಿನ ಕುಡಿಯುವ ನೀರಿಗೂ ಸಂಕಷ್ಠದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದರು.

ಕಾಣಿಯೂರು ಗ್ರಾ.ಪಂ, ಅಧ್ಯಕ್ಷೆ ಮಾಧವಿ ಕೋಡಂದೂರು ಮಾತನಾಡಿ, ಯುವಜನತೆ ತಾನು ಬೆರೆಯುವುದರೊಂದಿಗೆ ತಮ್ಮವರನ್ನು ಬೆಳೆಸುವ ನಿಟ್ಟಿನಲ್ಲಿ ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸರಕಾರ ರೂಪಿಸುವ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕಾದರೆ ಜನತೆಯ ಸಹಕಾರ ಅಗತ್ಯ. ಇಂತಹ ಹಲವಾರು ಯೋಜನೆಗಳು ಅನುಷ್ಠಾನವಾಗುವ ಸಂದರ್ಭದಲ್ಲಿ ಯುವಕ ಮಂಡಲಗಳು ತಾವು ತೊಡಗಿಸಿಕೊಂಡಾಗ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದಂತಾಗಿದೆ ಎಂದರು.

ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಯಂತಿ, ಪ್ರೌಢ ಶಾಲಾ ವಿಭಾಗದ ಮುಖ್ಯಗುರು ಕಾಂಚನಾ ಶುಭಹಾರೈಸಿದರು.

ಯುವಕ ಮಂಡಲದ ಸದಸ್ಯರಾದ ಜಿತೇಶ್ ಬೈತಡ್ಕ, ಚಂದ್ರಶೇಖರ ಬನಾರಿ, ಬಾಲಚಂದ್ರ ಬರೆಪ್ಪಾಡಿ, ಸುಧಾಕರ್ ಕಾಣಿಯೂರು, ವಿದ್ಯಾರ್ಥಿಗಳಾದ ಮಹಮ್ಮದ್ ಅಸ್ಫಕ್, ಮೋಕ್ಷಾ, ಮಧುಶ್ರೀ ಅತಿಥಿಗಳಿಗೆ ತಾಂಬೂಲ, ಸ್ಮರಣೆಕೆ ನೀಡಿ ಗೌರವಿಸಿದರು. ವಿದ್ಯಾರ್ಥಿನಿ ಪೃಥ್ವಿ ಪ್ರಾರ್ಥಿಸಿದರು. ವಿಶ್ವಜ್ಞ ಯುವಕ ಮಂಡಲದ ಅಧ್ಯಕ್ಷ ರಂಜಿತ್ ಹೊಸೊಕ್ಲು ಸ್ವಾಗತಿಸಿದರು. ಸದಸ್ಯರಾದ ಪುರುಷೋತ್ತಮ ಗೌಡ ಬೈತಡ್ಕ ಕಾರ್ಯಕ್ರಮ ನಿರೂಪಿಸಿ, ಮಧುಸೂಧನ್ ಪುಣ್ಚತ್ತಾರು ವಂದಿಸಿದರು.

[ಕೇಂದ್ರ ಪುರಸ್ಕøತ ಯೋಜನೆಗಳ ತರಬೇತಿ ಕಾರ್ಯಗಾರ: ತರಬೇತಿ ಕಾರ್ಯಗಾರದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳಾದ ಪ್ರಧಾನ ಮಂತ್ರಿ ಜನಧನ ಯೋಜನೆ, ಸುಕನ್ಯ ಸಮೃದ್ಧಿ ಯೋಜನೆ, ಸ್ವಚ್ಚ ಭಾರತ ಆಂದೋಲನ, ಜಲಜಾಗೃತಿ, ನಿರ್ಮಲ ಭಾರತ ಆಂದೋಲನ, ಸ್ವ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಬಗ್ಗೆ ಮಾಹಿತಿ ನೀಡಲಾಯಿತು. ಕಾಣಿಯೂರು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಪ್ರಬಂಧಕರಾದ ಗೌತಮ್, ಪುತ್ತೂರು ಪ್ರಧಾನ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕರಾದ ಲೋಕನಾಥ್, ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಅವರು ವಿವಿಧ ಯೋಜನೆಗಳ ಬಗ್ಗೆ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು.]

Leave A Reply

Your email address will not be published.