ಸವಣೂರು : ವಿದ್ಯಾರ್ಥಿಗಳಿಗೆ ಸತ್ಯಸಾಯಿ ಸೇವಾ ಟ್ರಸ್ಟಿನಿಂದ ಉಚಿತ ಪಾದರಕ್ಷೆ ವಿತರಣೆ
ಸವಣೂರು : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿನ 107 ವಿದ್ಯಾರ್ಥಿನಿಯರಿಗೆ ಸತ್ಯಸಾಯಿ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಉಚಿತವಾಗಿ ಕೊಡಮಾಡಲಾದ ಶೂ ಗಳನ್ನು ವಿತರಿಸಲಾಯಿತು.
ಸವಣೂರು ಗ್ರಾ.ಪಂ.ಅದ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯ ಸತೀಶ್ ಬಲ್ಯಾಯ,ಸವಣೂರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ,ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಹನೀಫ್, ಸದಸ್ಯರಾದ ಚಂದ್ರ ತೆಕ್ಕಿತ್ತಡಿ,ವಿಶ್ವನಾಥ ಗೌಡ ಪೂವ,ವಿಜಯ ಗೌಡ ಚೌಕಿಮಠ,ಚಂದ್ರಶೇಖರ ಮೆದು,ಬೇಬಿ,ಜಮೀಳಾ,ಯಶೋದಾ,ಅಂಗನವಾಡಿ ಕಾರ್ಯಕರ್ತೆ ಮಮತಾ ಜಿ.ಬಿ ವಿದ್ಯಾರ್ಥಿಗಳಿಗೆ ಶೂ ವಿತರಿಸಿದರು.
ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರ ಮುತುವರ್ಜಿಯಿಂದ ಸತ್ಯಸಾಯಿ ಸೇವಾ ಟ್ರಸ್ಟ್ ಮೂಲಕ ಶೂ ನೀಡಲಾಗಿತ್ತು.
ಈ ಸಂದರ್ಭ ಶಾಲಾ ಮುಖ್ಯಗುರು ಹರಿಶಂಕರ್ ಭಟ್,ಶಿಕ್ಷಕರಾದ ಕುಶಾಲಪ್ಪ ಬಿ,ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ,ಛತ್ರ ಕುಮಾರ್,ತುಳಸಿ ಹೆಚ್,ಮೆಬಲ್ ರೋಡ್ರಿಗಸ್,ಆಶಾಲತಾ ಅಂಬುಲ,ಮಲ್ಲಿಕಾ ಬಿ,ಆಶಾ ಎಂ,ಸರಿತಾ ಉಪಸ್ಥಿತರಿದ್ದರು.