ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

ಸವಣೂರು : ನಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಗೌರವ ಸಿಗುವ ವ್ಯಕ್ತಿಗಳಾಗಿ ಬೆಳೆಯುತ್ತೇವೆ.   ಜೀವನದಲ್ಲಿ ಸಾಧನೆಯನ್ನು ಮಾಡುವಂತಹ ಸಂದರ್ಭದಲ್ಲಿ ಏನನ್ನಾದರೂ ಕಳೆದುಕೊಳ್ಳುವುದು ಸಹಜ.  ಆದರೆ ಪ್ರತಿಫಲ ಸಿಕ್ಕಾಗ ಸಿಗುವಂತಹ ಸಂತೋಷಕ್ಕೆ ಮೌಲ್ಯವನ್ನು ಕಟ್ಟಲು ಸಾಧ್ಯವಿಲ್ಲ.ಶ್ರಮಕ್ಕೆ ಸಿಕ್ಕ ಫಲ ಅಮೂಲ್ಯ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಽಕ್ಷಕ ಶ್ರೀಹರ್ಷ ಎನ್ ಹೇಳಿದರು.


Ad Widget

Ad Widget


Ad Widget

ಅವರು ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್  ಪ್ರವರ್ತಿತ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

Ad Widget

Ad Widget

Ad Widget

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇರುತ್ತದೆ ನಮ್ಮ ಮುಂದೆ ಅರ್ಥಪೂರ್ಣವಾದ ಗುರಿಯನ್ನು ಇಟ್ಟುಕೊಂಡು ನಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದಾಗ ಜೀವನದಲ್ಲಿ ನಾವು ಏನನ್ನಾದರೂ ಸಾಽಸಲು ಸಾಧ್ಯವಾಗುತ್ತದೆ ಎಂದರು.

ನಿಂತಿಕಲ್ ಕೆ.ಎಸ್.ಗೌಡ ಪಿ.ಯು ಕಾಲೇಜಿನ ಪ್ರಾಂಶುಪಾಲ ಸಧಾನಂದ ರೈ ಕೊವೆಂಜ ಮಾತನಾಡಿ, ದೇಶದಲ್ಲಿ   ಯುವಜನರೇ ಅತ್ಯಽಕ ಸಂಖ್ಯೆಯಲ್ಲಿ ಇರುವುದರಿಂದ ಭಾರತವನ್ನು ಯುವರಾಷ್ಟ್ರ ಎಂಬುದಾಗಿ ಕರೆಯುತ್ತೇವೆ.  ವಿದ್ಯಾರ್ಥಿಗಳಂತಹ ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದಾಗ ನಮ್ಮ ರಾಷ್ಟ್ರವು ಬೆಳೆಯಲು ಸಾಧ್ಯ ಎಂದರು.

ಸಂಸ್ಥೆಯ ಆಡಳಿತಾಽಕಾರಿ ಆಶ್ವಿನ್ ಶೆಟ್ಟಿ. ಟ್ರಸ್ಟಿ  ಎನ್.ಸವಣೂರು ಸುಂದರ ರೈ. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಶೆಟ್ಟಿ. ಉಪ ಪ್ರಾಶಂಪಾಲ ಶೇಷಗಿರಿ. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷೆ ನಿವೇದಿತಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ,ಉಪನ್ಯಾಸಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: Content is protected !!
Scroll to Top
%d bloggers like this: