ಸವಣೂರು : ಶ್ರೀ.ಕ್ಷೇ.ಧ.ಗ್ರಾ.ಯೋ.ಯಿಂದ ಶ್ರದ್ದಾ ಕೇಂದ್ರಗಳಿಗೆ ಕಸದ ಬುಟ್ಟಿ ವಿತರಣೆ


Ad Widget

Ad Widget

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇದರ ವತಿಯಿಂದ ಶ್ರದ್ದಾ ಕೇಂದ್ರಗಳಿಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.


Ad Widget

ಕಾರ್ಯಕ್ರಮದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ,ಗ್ರಾಮಾಭಿವೃದ್ದಿಯೋಜನೆಯಿಂದ ಸ್ವಚ್ಚತೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.ಅದರಂತೆ ಯೋಜನೆಯ ಸದಸ್ಯರಿಂದ ಶ್ರದ್ದಾ ಕೇಂದ್ರಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಗುತ್ತಿದೆ.ಇದರ ಮುಂದುವರಿದ ಭಾಗವಾಗಿ ಶ್ರದ್ದಾ ಕೇಂದ್ರಗಳಿಗೆ ಹಸಿ-ಕಸ,ಒಣ-ಕಸ ಸಂಗ್ರಹಣೆಗಾಗಿ ಒಂದು ಕೇಂದ್ರಕ್ಕೆ ೨ ಬುಟ್ಟಿಗಳನ್ನು ನೀಡಲಾಗುತ್ತಿದೆ ಎಂದರು.

ಸವಣೂರು ಗ್ರಾ.ಪಂ.ಅಭಿವೃzದಿ ಅಽಕಾರಿ ನಾರಾಯಣ ಬಟ್ಟೋಡಿ ಮಾತನಾಡಿ,ಸ್ವಚ್ಚತೆಯ ಹಿನ್ನೆಲೆಯಲ್ಲಿ ಗ್ರಾ.ಪಂ.ವತಿಯಿಂದ ನಿರಂತರವಾಗಿ ಸ್ವಚ್ಚತ ಕಾರ್ಯ ನಡೆಸಲಾಗುತ್ತಿದೆ.ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರೂ ಪಾಲ್ಗೊಳ್ಳುತ್ತಿದ್ದಾರೆ.ಎಲ್ಲರಿಗೂ ಸ್ವಚ್ಚತೆಯ ಅರಿವು ಮೂಡಿದರೆ ಸ್ವಚ್ಚ ಪರಿಸರ ನಿರ್ಮಾಣ ಸಾಧ್ಯ ಎಂದರು.

Ad Widget

Ad Widget

Ad Widget

ವೇದಿಕೆಯಲ್ಲಿ ಯೋಜನೆಯ ತಾಲೂಕು ಯೋಜನಾಽಕಾರಿ ಜನಾರ್ದನ್ ಎಸ್,ಸವಣೂರು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು,ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಬಲ್ಯಾಯ,ಸತೀಶ್ ಅಂಗಡಿಮೂಲೆ ,ಯೋಜನೆಯ ಸವಣೂರು ವಲಯದ ಅಧ್ಯಕ್ಷ ರಾಧಾಕೃಷ್ಣ ರೈ ಸೊರಕೆ ಮೊದಲಾದವರಿದ್ದರು.

ಸವಣೂರು ವಲಯದ ಎಲ್ಲಾ ಶ್ರದ್ದಾ ಕೇಂದ್ರಗಳಿಗೆ ಈ ಸಂದರ್ಭದಲ್ಲಿ ಕಸದ ಬುಟ್ಟಿಗಳನ್ನು ದೇವಸ್ಥಾನದ ಪ್ರತಿನಿಽಗಳಿಗೆ ಹಸ್ತಾಂತರಿಸಿದರು.

ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಅಶ್ವಿನಿ ಎಂ.ಜಿ.ಸ್ವಾಗತಿಸಿ,ಸೇವಾ ಪ್ರತಿನಿಽ ಪ್ರವೀಣ್ ರೈ ಕುಮೇರು ವಂದಿಸಿದರು.

error: Content is protected !!
Scroll to Top
%d bloggers like this: