Day: March 1, 2020

ಮುಕ್ಕೂರು : ಆಧಾರ್ ನೋಂದಣಿ ‌ಮತ್ತು‌ ತಿದ್ದುಪಡಿ ಶಿಬಿರ

ಮುಕ್ಕೂರು ‌: ಜನಪರ ಕಾಳಜಿಯ ಪರೋಪಕಾರಿ ಚಿಂತನೆಗಳು‌ ಸಂಘಟನೆಗಳ‌ ಜೀವಾಳ. ಈ ನಿಟ್ಟಿನಲ್ಲಿ‌ ಸಂಘ ಸಂಸ್ಥೆಗಳು ಗ್ರಾಮಾಂತರ ಪ್ರದೇಶದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಆಯೋಜನೆಗೆ ಮುಂದಡಿ ಇಟ್ಟಿರುವುದು ಮಹತ್ವದ ಸಂಗತಿ ಎಂದು ಕಾನಾವು ಕ್ಲಿನಿಕ್ ನ ಡಾ.ನರಸಿಂಹ ಶರ್ಮಾ ಹೇಳಿದರು. ಮುಕ್ಕೂರು ಕುಂಡಡ್ಕ ‌ನೇಸರ‌ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ‌ಸಹಯೋಗದಲ್ಲಿ‌ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮೂಲಕ ಮಾ.1 ರಂದು ಆಯೋಜಿಸಿದ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ …

ಮುಕ್ಕೂರು : ಆಧಾರ್ ನೋಂದಣಿ ‌ಮತ್ತು‌ ತಿದ್ದುಪಡಿ ಶಿಬಿರ Read More »

Big Twist ಮರ್ದಾಳ ಅಪಘಾತ: ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ

ಕಡಬ: ಗೂಡ್ಸ್ ಟೆಂಪೋ (407) ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ರಾಜಸ್ಥಾನ ಮೂಲದ ಮೇಘರಾಜ (32) ಎಂಬಾತ ಸ್ಥಳದಲ್ಲೆ ಮೃತಪಟ್ಟ ಘಟನೆ ಭಾನುವಾರ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ನಡೆದಿದೆ. ಮರಳು ಅಕ್ರಮ ಸಾಗಟ ಮಾಡುತ್ತಿದ್ದ ಮಿನಿ ಲಾರಿಯ ಹಿಂಬಂದಿ ಚಕ್ರ ಮೇಘರಾಜ ತಲೆಯ ಮೇಲೆ ಹರಿದು ತಲೆ ಪೂರ್ತಿ ಛಿದ್ರ್ರಗೊಂಡಿದೆ. ಕೋಡಿಂಬಾಳ ಗ್ರಾಮದ ಮುಳಿಯ ಎಂಬಲ್ಲಿ ಮನೆಯೊಂದರ ಟೈಲ್ಸ್ ಕೆಲಸ ಮಾಡುತ್ತಿದ್ದ ಮೇಘರಾಜ್ ಇದರ ಅಗತ್ಯ ವಸ್ತುಗಳನ್ನು ತರಲೆಂದು …

Big Twist ಮರ್ದಾಳ ಅಪಘಾತ: ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ Read More »

ಸವಣೂರು : ಶ್ರೀ.ಕ್ಷೇ.ಧ.ಗ್ರಾ.ಯೋ.ಯಿಂದ ಶ್ರದ್ದಾ ಕೇಂದ್ರಗಳಿಗೆ ಕಸದ ಬುಟ್ಟಿ ವಿತರಣೆ

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇದರ ವತಿಯಿಂದ ಶ್ರದ್ದಾ ಕೇಂದ್ರಗಳಿಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ,ಗ್ರಾಮಾಭಿವೃದ್ದಿಯೋಜನೆಯಿಂದ ಸ್ವಚ್ಚತೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.ಅದರಂತೆ ಯೋಜನೆಯ ಸದಸ್ಯರಿಂದ ಶ್ರದ್ದಾ ಕೇಂದ್ರಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಗುತ್ತಿದೆ.ಇದರ ಮುಂದುವರಿದ ಭಾಗವಾಗಿ ಶ್ರದ್ದಾ ಕೇಂದ್ರಗಳಿಗೆ ಹಸಿ-ಕಸ,ಒಣ-ಕಸ ಸಂಗ್ರಹಣೆಗಾಗಿ ಒಂದು ಕೇಂದ್ರಕ್ಕೆ ೨ ಬುಟ್ಟಿಗಳನ್ನು ನೀಡಲಾಗುತ್ತಿದೆ ಎಂದರು. ಸವಣೂರು …

ಸವಣೂರು : ಶ್ರೀ.ಕ್ಷೇ.ಧ.ಗ್ರಾ.ಯೋ.ಯಿಂದ ಶ್ರದ್ದಾ ಕೇಂದ್ರಗಳಿಗೆ ಕಸದ ಬುಟ್ಟಿ ವಿತರಣೆ Read More »

ಸವಣೂರು : ವಿದ್ಯಾರ್ಥಿಗಳಿಗೆ ಸತ್ಯಸಾಯಿ ಸೇವಾ ಟ್ರಸ್ಟಿನಿಂದ ಉಚಿತ ಪಾದರಕ್ಷೆ ವಿತರಣೆ

ಸವಣೂರು : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿನ 107 ವಿದ್ಯಾರ್ಥಿನಿಯರಿಗೆ  ಸತ್ಯಸಾಯಿ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಉಚಿತವಾಗಿ ಕೊಡಮಾಡಲಾದ ಶೂ ಗಳನ್ನು ವಿತರಿಸಲಾಯಿತು. ಸವಣೂರು ಗ್ರಾ.ಪಂ.ಅದ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯ ಸತೀಶ್ ಬಲ್ಯಾಯ,ಸವಣೂರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ,ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಹನೀಫ್, ಸದಸ್ಯರಾದ ಚಂದ್ರ ತೆಕ್ಕಿತ್ತಡಿ,ವಿಶ್ವನಾಥ ಗೌಡ ಪೂವ,ವಿಜಯ ಗೌಡ ಚೌಕಿಮಠ,ಚಂದ್ರಶೇಖರ ಮೆದು,ಬೇಬಿ,ಜಮೀಳಾ,ಯಶೋದಾ,ಅಂಗನವಾಡಿ ಕಾರ್ಯಕರ್ತೆ ಮಮತಾ ಜಿ.ಬಿ ವಿದ್ಯಾರ್ಥಿಗಳಿಗೆ ಶೂ ವಿತರಿಸಿದರು. ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರ …

ಸವಣೂರು : ವಿದ್ಯಾರ್ಥಿಗಳಿಗೆ ಸತ್ಯಸಾಯಿ ಸೇವಾ ಟ್ರಸ್ಟಿನಿಂದ ಉಚಿತ ಪಾದರಕ್ಷೆ ವಿತರಣೆ Read More »

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

ಸವಣೂರು : ನಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಗೌರವ ಸಿಗುವ ವ್ಯಕ್ತಿಗಳಾಗಿ ಬೆಳೆಯುತ್ತೇವೆ.   ಜೀವನದಲ್ಲಿ ಸಾಧನೆಯನ್ನು ಮಾಡುವಂತಹ ಸಂದರ್ಭದಲ್ಲಿ ಏನನ್ನಾದರೂ ಕಳೆದುಕೊಳ್ಳುವುದು ಸಹಜ.  ಆದರೆ ಪ್ರತಿಫಲ ಸಿಕ್ಕಾಗ ಸಿಗುವಂತಹ ಸಂತೋಷಕ್ಕೆ ಮೌಲ್ಯವನ್ನು ಕಟ್ಟಲು ಸಾಧ್ಯವಿಲ್ಲ.ಶ್ರಮಕ್ಕೆ ಸಿಕ್ಕ ಫಲ ಅಮೂಲ್ಯ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಽಕ್ಷಕ ಶ್ರೀಹರ್ಷ ಎನ್ ಹೇಳಿದರು. ಅವರು ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್  ಪ್ರವರ್ತಿತ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡು …

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ Read More »

ಸವಣೂರು ; ವಿದ್ಯಾರಶ್ಮಿಯಲ್ಲಿ ಕೊನ್ವೋಕೇಶನ್-ಚಿಣ್ಣರ ಹಬ್ಬ -2020

ಸವಣೂರು : ಇಲ್ಲಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ೨೦೧೯-೨೦ನೇ ಸಾಲಿನ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕೊನ್ವೋಕೇಶನ್ ಮತ್ತು ಚಿಣ್ಣರ ಹಬ್ಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಸ್ತೂರಿಕಲಾ ಎಸ್. ರೈಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಿಕಟಪೂರ್ವ ಪ್ರಾಂಶುಪಾಲೆ ಮಿಥಾಲಿ ಪಿ. ರೈ ಮಾತನಾಡಿ ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆಯಿದೆ. ಮನೆಯಲ್ಲಿ ಪಾಲಕರು ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಶಾಲೆಯಲ್ಲಿ ಶಿಕ್ಷಕರು ಅದಕ್ಕೆ ಸೂಕ್ತ ಬೆಂಬಲ ನೀಡುತ್ತಾರೆ ಎಂದರು. ಅಧ್ಯಕ್ಷತೆ ವಹಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ …

ಸವಣೂರು ; ವಿದ್ಯಾರಶ್ಮಿಯಲ್ಲಿ ಕೊನ್ವೋಕೇಶನ್-ಚಿಣ್ಣರ ಹಬ್ಬ -2020 Read More »

ಶಾಸಕರಾದ ಸಂಜೀವ ಮಠ0ದೂರು ಅವರಿಂದ ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ 275 ಲಕ್ಷ ರೂ.ಗಳ ಕಾಮಗಾರಿಗಳ ಶಿಲಾನ್ಯಾಸ-ಉದ್ಘಾಟನೆ

ಇಂದು ಭಾನುವಾರ ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 2 ಕೋಟಿ 75 ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠ0ದೂರು ಅವರು ನೇರವೇರಿಸಿದರು. ಅಭಿವೃದ್ಧಿಿ ಕಾರ್ಯಗಳ ವಿವರ : ಪಂಚಲಿಂಗೇಶ್ವರ ದೇವಸ್ಥಾನದ ರಸ್ತೆ,ಸುರಳಿ ಮೂಲೆಯಿಂದ ಕಾಮಟ ರಸ್ತೆ ಅಭಿವೃದ್ಧಿ,ಸುರಳಿ ಮೂಲೆಯಿಂದ ಕೈಂತಿಲ ರಸ್ತೆ ಅಭಿವೃದ್ಧಿ, ಪ್ರಿಂಟ್ ಪಾಯಿಂಟ್ ಬಳಿಯಿಂದ ಮಾರ್ನೆಮಿ ಗುಡ್ಡಕ್ಕೆ ರಸ್ತೆ,ಓಕ್ಕೆತ್ತೂರು ಪಾಂಡೇಲು ರಸ್ತೆ ಅಭಿವೃದ್ಧಿ,ಉಕ್ಕುಡ ಪಾಂಡೇಲು ರಸ್ತೆ ಮತ್ತು ಅಶೋಕ್ ಮನೆಯಿಂದ ಬಾಲಕೃಷ್ಣ ಅವರ ಮನೆಯವರೆಗೆ,ಕೂಡೂರು …

ಶಾಸಕರಾದ ಸಂಜೀವ ಮಠ0ದೂರು ಅವರಿಂದ ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ 275 ಲಕ್ಷ ರೂ.ಗಳ ಕಾಮಗಾರಿಗಳ ಶಿಲಾನ್ಯಾಸ-ಉದ್ಘಾಟನೆ Read More »

ನೆಕ್ಕಿಲಾಡಿ ಬೊಳ್ಳೂರಿನಲ್ಲಿ ಲಾರಿ- ಸ್ಕೂಟಿ ಡಿಕ್ಕಿ ,ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

ಕಡಬ :102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರಿನಲ್ಲಿ ಲಾರಿ ಸ್ಕೂಟಿ ಡಿಕ್ಕಿ.. ಸ್ಕೂಟಿ ಸವಾರ ರಾಜಸ್ತಾನ್ ನಿವಾಸಿ ಸ್ಥಳದಲ್ಲೇ ಸಾವುಗೀಡಾದ ಘಟನೆ ನಡೆದಿದೆ. ಮೃತ ಸವಾರನನ್ನು ರಾಜಸ್ತಾನ ಮೂಲದ ಮೇಘರಾಜ್ ಎಂದು ಗುರುತಿಸಲಾಗಿದೆ. ಬೊಳ್ಳೂರು ದೇವಸ್ಥಾನದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ 407 ಟೆಂಪೋ ಹಾಗೂ ದ್ವಿಚಕ್ರ ವಾಹನದ ನಡುವೆ ಬೊಳ್ಳೂರು ದೇವಸ್ಥಾನದ ಮುಂದಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ ಮೇಘರಾಜ್ ಕಡಬಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಡಬ ಪೊಲೀಸರು …

ನೆಕ್ಕಿಲಾಡಿ ಬೊಳ್ಳೂರಿನಲ್ಲಿ ಲಾರಿ- ಸ್ಕೂಟಿ ಡಿಕ್ಕಿ ,ಸ್ಕೂಟಿ ಸವಾರ ಸ್ಥಳದಲ್ಲೇ ಸಾವು Read More »

ಮಿನಿಬಸ್ ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನ, ಬೆನ್ನಟ್ಟಿ ಹಿಡಿದ ಗ್ರಾಮಸ್ಥರು : ಮಹಿಳೆ ಗಂಭೀರ

ಕಡಬ : ಇಂದು ಮುಂಜಾನೆ ಮಿನಿಬಸ್ ಒಂದು ಬೈಕಿಗೆ ಢಿಕ್ಕಿ ಹೊಡೆದು ಬೈಕಿನಲ್ಲಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡ  ಘಟನೆ ನಡೆದಿದೆ. ಧರ್ಮಸ್ಥಳ  ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ಈ  ಅಪಘಾತ ನಡೆದಿದ್ದು, ಮೀನಾಡಿ‌ ನಿವಾಸಿ  ಕುಟ್ರುಪ್ಪಾಡಿ ಪಂಚಾಯತ್ ಸದಸ್ಯೆ ಕುಸುಮಾ ಅವರು ಮೀನಾಡಿಯಿಂದ ಮರ್ಧಾಳ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದರು.  ಆಗ ವೇಗವಾಗಿ ಹಿಂದಿನಿಂದ ಬಂದ ಮಿನಿ ಬಸ್ಸು ಓವರ್ಟೇಕ್ ಮಾಡುವ ಭರದಲ್ಲಿ ಬೈಕ್ ಗೆ ಢಿಕ್ಕಿ  ಹೊಡೆದಿದೆ. ಕುಸುಮಾ ಅವರು ಬೈಕ್ ಸಮೇತ …

ಮಿನಿಬಸ್ ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನ, ಬೆನ್ನಟ್ಟಿ ಹಿಡಿದ ಗ್ರಾಮಸ್ಥರು : ಮಹಿಳೆ ಗಂಭೀರ Read More »

ಕಂಬಳಕ್ಕೆ ವಿಶ್ವ ಮಾನ್ಯತೆ ಸಿಗಲಿ-ರಾಹುಲ್ ಶಿಂಧೆ

ಉಪ್ಪಿನಂಗಡಿ: ಈ ಭಾಗದಲ್ಲಿ ಜನಪ್ರಿಯವಾಗಿರುವ ಜಾನಪದ ಕ್ರೀಡೆ ಕಂಬಳ ಕರಾವಳಿಯಿಂದ ದೇಶವ್ಯಾಪಿ ಪಸರಿಸುವಂತಾಗಲಿ ಎಂದು ಐ.ಎ.ಎಸ್. ಅಧಿಕಾರಿ, ಪುತ್ತೂರು ತಹಸೀಲ್ದಾರ್ ರಾಹುಲ್ ಶಿಂಧೆ ಹೇಳಿದರು. ಅವರು ಫೆ. 29ರಂದು ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯಲ್ಲಿ 2 ದಿನಗಳ ಕಾಲ ನಡೆಯುವ ವಿಜಯ-ವಿಕ್ರಮ ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು. ಕಂಬಳ ಎಂಬ ಕ್ರೀಡೆ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ, ಕಳೆದ 8 ತಿಂಗಳಿನಿಂದ ದ.ಕ. ಜಿಲ್ಲೆಯಲ್ಲಿ ಇದ್ದು, 3 ಕಂಬಳ ನೋಡುವ ಅವಕಾಶ ದೊರೆತಿದೆ, ನಾನು ತಿಳಿದುಕೊಂಡ ಪ್ರಕಾರ ಇದೊಂದು ಅದ್ಬುತ …

ಕಂಬಳಕ್ಕೆ ವಿಶ್ವ ಮಾನ್ಯತೆ ಸಿಗಲಿ-ರಾಹುಲ್ ಶಿಂಧೆ Read More »

error: Content is protected !!
Scroll to Top