ನಾಳೆ ಉಜಿರೆಯಲ್ಲಿ ‘ ಮುಳಿಯ ಗಾನ ರಥ ‘ : ಹೊರಬರಲಿ ನಿಮ್ಮಲ್ಲಿರುವ ಸುಪ್ತ ಗಾಯನ ಪ್ರತಿಭೆ
ನಾಳೆ ಬೆಳ್ತಂಗಡಿಯ ಮುಳಿಯ ಚಿನ್ನದಂಗಡಿಯ ಪ್ರಾಯೋಜಕತ್ವದಲ್ಲಿ ‘ ಮುಳಿಯ ಗಾನ ರಥ ‘ ಕರೋಕೆ ಹಾಡುಗಳ ಗಾಯನ ಸ್ಪರ್ಧಾ ಸಂಭ್ರಮ. ಹಾಡು ಸ್ಪರ್ಧೆಯು ಉಜಿರೆಯ ಅರಿಪ್ಪಾಡಿ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಆಯೋಜಿಸಲ್ಪಟ್ಟಿದೆ.
ಸ್ಪರ್ಧೆಯಲ್ಲಿ ಒಟ್ಟು ಎರಡು ಭಾಗಗಳಿದ್ದು, 12 ವರ್ಷದಿಂದ 21 ವರ್ಷದವರೆಗೆ ಮೊದಲ ವಿಭಾಗವಿರುತ್ತದೆ. 21 ವರ್ಷದಿಂದ ಮೇಲ್ಪಟ್ಟು ಸಾರ್ವಜನಿಕರಿಗಾಗಿ ಇನ್ನೊಂದು ವಿಭಾಗವಿದೆ. ಕನ್ನಡ, ತುಳು ಮತ್ತು ಹಿಂದಿ ಭಾಷೆಯಲ್ಲಿ ಹಾಡುಗಾರರು/ಹಾಡುಗಾರ್ತಿಯರು ತಮ್ಮ ಮನದ ಭಾವಕ್ಕೆ ಜೀವ ತುಂಬಿ ಹಾಡಬಹುದು. ನಿಮ್ಮಲ್ಲಿ ಸುಪ್ತವಾಗಿರುವ ಹಾಡಿನ ಪ್ರತಿಭೆಯನ್ನು ಪರೀಕ್ಷೆಗೆ ಒಡ್ಡಬಹುದು.
ಯಾರಿಗೆ ಗೊತ್ತು ಒಂದು ದೊಡ್ಡ ಗೆಲುವು ನಿಮಗಾಗಿ ಕಾಯುತ್ತಿರಬಹುದು ?!
ಹಾಡು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮುಳಿಯ ಗಾನಕೋಗಿಲೆ – ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ಸ್ಥಳ : ಉಜಿರೆಯ ಅರಿಪ್ಪಾಡಿ ವಾಣಿಜ್ಯ ಸಂಕೀರ್ಣದ ಮುಂಭಾಗ
ದಿನಾಂಕ : 1.3.2020, ಭಾನುವಾರ
ಸಮಯ : ಸಂಜೆ 3.30
ನೊಂದಣಿಗಾಗಿ ಈ ಕೆಳಗಿನ ನಂಬರ್ ಗೆ ಕರೆ ಮಾಡಿ : 9686502916 ಅಥವಾ 7899137644
ಹೆಚ್ಚಿನ ಮಾಹಿತಿಗಾಗಿ ‘ ಮುಳಿಯ ಗಾನರಥ ‘ ಕರಪತ್ರ ಇಲ್ಲಿದೆ ಓದಿ.