ನರಿಮೊಗರು ಸಾಂದೀಪನಿ | ಬೆಳಗಿತು ಬಾಂಧವ್ಯ- 20

ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹಾಗೂ ಹೆತ್ತವರ ಸಹಭಾಗಿತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಬಾಂಧವ್ಯ20 ಎಂಬ ಹೊಸ ಕಾನ್ಸೆಪ್ಟ್ ನ ಕಾರ್ಯಕ್ರಮ ನಡೆಯಿತು.

ಶಿಕ್ಷಣ ಸಂಸ್ಥೆ ಆರಂಭವಾಗಿ 20 ವರ್ಷಗಳ ಸಂಭ್ರಮದಲ್ಲಿರುವ ಸಾಂದೀಪನಿ ಶಿಕ್ಷಣ ಸಂಸ್ಥೆಯು ತನ್ನದೇ ಆದ ವಿಶಿಷ್ಟ ಯೋಚನೆ-ಯೋಜನೆಗಳೊಂದಿಗೆ ಮುನ್ನಡೆಯುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂಸ್ಕಾರ ನೀಡಿ ಮಾನವೀಯ ಮೌಲ್ಯಗಳ ಧಾರೆಯೆರೆದು ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವಾರು ಧನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ.

ಬಾಂಧವ್ಯ

ಆಧುನಿಕ ಹಾಗೂ ಸಾಂಪ್ರದಾಯಿಕ ಶೈಕ್ಷಣಿಕ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳ ಪ್ರಗತಿಗಾಗಿ ವಿಷಯಗಳ ವಿಚಾರ ವಿನಿಮಯಕ್ಕಾಗಿ ನಡೆಸಿದ ಬಾಂಧವ್ಯ20 ಹೊಸ ಸಾಧ್ಯತೆ ತೆರೆದಿಟ್ಟಿತು.

ಸಂಸ್ಥೆಯ ಅಂಗಳದಲ್ಲಿ 10 ಪೋಷಕರ (10+10 ) ತಂಡಗಳಾಗಿ‌ ಮಾಡಿ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ಸಲಹೆ ಸೂಚನೆಗಳನ್ನು ನೀಡುವ ಕಾರ್ಯಕ್ರಮವಾಗಿತ್ತು. ಪ್ರತೀ ತಂಡದಲ್ಲೂ ಒಬ್ಬೊಬ್ಬ ಶಿಕ್ಷಕರನ್ನೊಳಗೊಂಡಿತು. ಪೋಷಕರು ಹಾಗೂ ಶಿಕ್ಷಕರೊಳಗೆ ಸಂಸ್ಥೆಯ ಬೆಳವಣಿಗೆಗೆ ಏನೆಲ್ಲಾ ಮಾಡಬಹುದು.

ಆಶಯ ಮಾತು

ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಹೇಗೆ ಹೆಜ್ಜೆ ಹಾಕಬಹುದು ಎಂಬುದನ್ನು ಈ ಬಾಂಧವ್ಯ 20 ತೆರೆದಿಟ್ಟಿತು.

ಗುಂಪು ಚರ್ಚೆ

ಜೆಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಪಿ.ಎಸ್ ಆಶಯ ಮಾತುಗಳನ್ನಾಡಿದರು.ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ,ಸಂಚಾಲಕ ಭಾಸ್ಕರ ಆಚಾರ್ ಹಿಂದಾರು,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕಲ್ಕಾರು,ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಆಡಳಿತ ಮಂಡಳಿ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಜಯಮಾಲಾ ವಿ.ಎನ್ ನಿರೂಪಿಸಿದರು.

Leave A Reply

Your email address will not be published.