ಜಿಲ್ಲಾ ಖಾಝಿ ಅಹ್ಮದ್ ಮುಸ್ಲಿಯಾರ್ ಗೆ ವಿದೇಶದಿಂದ ಬೆದರಿಕೆ ಕರೆ | ಪೋಲೀಸ್ ಆಯುಕ್ತರಿಗೆ ಮೊರೆ

ದಕ್ಷಿಣ ಕನ್ನಡದ ಜಿಲ್ಲಾ ಖಾಝಿಯವರಾದ ಅಹ್ಮದ್ ಮುಸ್ಲಿಯಾರ್ ಅವರಿಗೆ ಕೊಲೆಮಾಡುವುದಾಗಿ ವಿದೇಶದಿಂದ ಕೊಲೆ ಬೆದರಿಕೆ ಬಂದಿದೆ. ಬೆದರಿಕೆಯ ಹಿನ್ನೆಲೆಯಲ್ಲಿ ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ದಾಖಲಿಸಿದ್ದಾರೆ.

ಮಂಗಳೂರಿನ ನಿಕಟ ಪೂರ್ವ ಖಾಝಿಯಾಗಿದ್ದ ಚೆಂಬರಿಕ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ ರು ನಿಗೂಢವಾಗಿ ತೀರಿಕೊಂಡಿದ್ದರು. ಅವರ ಸಾವಿಗೆ ಕಾರಣರಾದವರ ಪತ್ತೆಗಾಗಿ ಅಥವಾ ಕಾರಣ ಹುಡುಕಬೇಕೆಂದು ತ್ವಾಕ ಅಹ್ಮದ್ ಮುಸ್ಲಿಯಾರ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಖಾಝಿ ಅವರಿಗೆ ವಿದೇಶದಿಂದ ಫೋನ್ ಕರೆಗಳು ಬಂದಿದ್ದು ದುಸ್ಕರ್ಮಿಗಳು ಕೊಲೆ ಬೆದರಿಕೆ ಬಂದಿದ್ದವು. ಈ ಸಂದರ್ಭದಲ್ಲಿ ಈ ಹಿಂದೆ ಕೂಡ ಎರಡು ಬಾರಿ ತನ್ನ ಕೊಲೆಗೆ ವಿಫಲ ಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ ಮತ್ತು ಪೊಲೀಸರು ಸೂಕ್ತ ತನಿಖೆ ಮಾಡುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಖಾಝಿ ಕೊಲೆ ಬೆದರಿಕೆ ಪ್ರಕರಣವನ್ನು ಪೊಲೀಸರು ತನಿಖೆ ಮಾಡಬೇಕು ಮತ್ತು ಅದರ ಹಿಂದಿನ ಅದೃಶ್ಯ ಕೈಗಳನ್ನು ಪಟೇ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು.

ಅವರು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ ನನಗೆ ಜೀವ ಬೆದರಿಕೆ ಬಂದಾಗಲೂ ಪೊಲೀಸರು ಭದ್ರತೆ ಒದಗಿಸಿದ್ದರು. ಆದರೆ ನಾನುಭದ್ರತೆ ಪಡೆದಿರಲಿಲ್ಲ. ಆದರೆ ಖಾಜಿಯವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅವರು ಹೇಳಿದರು. ಸಮಾಜ ವಿರೋಧಿ ಅಥವಾ ಅಪರಾಧ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾಗಿರಲಿ, ಯಾರಿಗಾದರೂ ಸರಿ ಶಿಕ್ಷೆ ಆಗಲೇ ಬೇಕು.

ಮಂಗಳೂರು ಹಿಂಸಾಚಾರದಲ್ಲಿ ನಾವು ನ್ಯಾಯಾಂಗ ವಿಚಾರಣೆಗೆ ಕೇಳಿದ್ದರೂ ಸಿಐಡಿ ತನಿಖೆಯನ್ನು ಮಾತ್ರ ಮಾಡುತ್ತಿದ್ದಾರೆ. ಅದನ್ನು ಸರ್ಕಾರದ ಅಧೀನ ಪೊಲೀಸರು ಸ್ವತಃ ಮಾಡುತ್ತಾರೆ ಮತ್ತು ಜನರು ಅವರನ್ನು ನಂಬುವುದಿಲ್ಲ. ಮಂಗಳೂರು ಹಿಂಸಾಚಾರ ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ನೀಡಲು ಸರ್ಕಾರಕ್ಕೆ ಮನಸ್ಸಿಲ್ಲ. ಅಲ್ಲದೆ ರಕ್ಷಿಸಿಕೊಳ್ಳಲು ಪೊಲೀಸರು ಮೃತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ನ್ಯಾಯಾಂಗ ತನಿಖೆಯಿಂದ ಪೊಲೀಸರು ಅಮಾಯಕರನ್ನು ಕೊಂದಿದ್ದಾರೆ ಎಂಬುದು ಸಾಬೀತಾಗುತ್ತದೆ. ಅಪರಾಧದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಈ ಸಂದರ್ಭದಲ್ಲಿ ಮಂಗಳೂರು ಗಲಭೆಯನ್ನು ಪ್ರಸ್ತಾಪಿಸಿ ಅವರು ನುಡಿದರು.

1 Comment
  1. Jacinto-E says

    Very interesting info!Perfect just what I was looking for!Blog monry

Leave A Reply

Your email address will not be published.