ಶಿರ್ವ ಫಾದರ್ ಆತ್ಮಹತ್ಯೆ ಪ್ರಕರಣ । ಕಂಡೋರ ಹೆಂಡತಿಗೆ ಮೆಸೇಜು ಮಾಡಿದ್ದೇ ಪ್ರಾಣಕ್ಕೆ ಮುಳುವಾಯ್ತು ?!

ಶಿರ್ವದಲ್ಲಿ ಬಹುಚರ್ಚಿತ ಚರ್ಚ್ ಫಾದರ್ ಮಹೇಶ್ ಅವರ ಆತ್ಮಹತ್ಯೆ ಪ್ರಕರಣ ಒಂದು ತಾರ್ಕಿಕ ಅಂತ್ಯ ಕಾಣುವ ಎಲ್ಲ ಲಕ್ಷಣ ಕಂಡುಬರುತ್ತಿದೆ.

ಈ ಸಂಬಂಧ ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡೇವಿಡ್ ಡಿಸೋಜಾನನ್ನು ಪೊಲೀಸರು ಬಂಧಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಪ್ರಕರಣದ ವಿವರಣೆ :

ಶಿರ್ವದ ಡಾನ್ ಬಾಸ್ಕೋ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜ ಅವರು ಕಳೆದ ಅಕ್ಟೋಬರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಶುರುವಿಟ್ಟಿದ್ದರು. ಆದಿನ ಆತ್ಮಹತ್ಯೆ ಮಾಡಿಕೊಂಡಾಗ ಆಪಾದಿತನಾಗಿ ಡೇವಿಡ್ ಡಿಸೋಜಾರವರ ಮೇಲೆ ದೊಡ್ಡಮಟ್ಟದ ಅನುಮಾನ ವ್ಯಕ್ತವಾಗಿತ್ತು.

ಸೌಮ್ಯ ವ್ಯಕ್ತಿತ್ವದ ಪ್ರಾಂಶುಪಾಲರಾದ ಹಾಗೂ ಫಾದರ್ ಆಗಿದ್ದ ಮಹೇಶ್ ಡಿಸೋಜ ಅವರ ಸಾವಿನ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ದೊಡ್ಡಮಟ್ಟದ ಪ್ರತಿಭಟನೆ ಸ್ವಜಾತೀಯ ಭಾಂಧವರಿಂದಲೇ ಶಿರ್ವದಲ್ಲಿ ನಡೆದಿತ್ತು.

ಈ ಆತ್ಮಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡ ತನಿಖಾಧಿಕಾರಿಯಾಗಿ ಪೊಲೀಸ್ ವೃತ್ತನಿರೀಕ್ಷಕ ಮಹೇಶ್ ಪ್ರಸಾದ್ ಅವರು ಆರೋಪಿಗಳಿಂದ ಮತ್ತು ಆತ್ಮಹತ್ಯೆ ಮಾಡಿಕೊಂಡ ಫಾದರ್ ಮಹೇಶ್ ಡಿಸೋಜ ಅವರಿಂದ ಹಲವು ಸಾಕ್ಷಗಳನ್ನು ವಶಪಡಿಸಿಕೊಂಡಿದ್ದರು. ಆ ಸಾಕ್ಷಿಗಳಲ್ಲಿ ಅವರಿಬ್ಬರಿಂದ ಸಂಗ್ರಹಿಸಿದ ಮೊಬೈಲ್ ಫೋನ್ ಕೂಡ ಒಂದಾಗಿತ್ತು.

ಆ ದಿನ ಅಕ್ಟೋಬರ್ 11 ರ ರಾತ್ರಿ 8:30. ಆರೋಪಿ ಡೇವಿಡ್ ಡಿಸೋಜಾ ಅವರ ಪತ್ನಿ ಪ್ರಿಯಾ ಡಿಸೋಜ ಅವರು ತಮ್ಮ ಫೋನ್ನಲ್ಲಿ ಫಾದರ್ ಮಹೇಶ್ ಡಿಸೋಜ ಅವರಿಗೆ ಮೆಸೇಜ್ ಮಾಡಿದ್ದರು. ಅದೇನೋ ಮೆಸೇಜ್ ವಿನಿಮಯ ಮಾಡಿಕೊಂಡಿದ್ದಾರೆ ಎಂಬುದು ಹೊರ ಬಂದಿಲ್ಲವಾದರೂ, ಸಹಜವಾಗಿ ಪತ್ನಿ ಬೇರೊಬ್ಬರೊಂದಿಗೆ ಚಾಟ್ ಮಾಡಿದ್ದು ಡೇವಿಡ್ ಡಿಸೋಜಾ ಅವರಿಗೆ ಸರಿಯೆನಿಸಲಿಲ್ಲ. ಅದ ಬಗ್ಗೆ ಮನೆಯಲ್ಲಿ ದೊಡ್ಡಮಟ್ಟದ ಗಲಾಟೆಯಾಗಿತ್ತು.

ಆನಂತರ ಡೇವಿಡ್ ಡಿಸೋಜಾ ಅವರು ಫೋನ್ ಎತ್ತಿಕೊಂಡು ಫಾದರ್ ಮಹೇಶ್ ಡಿಸೋಜ ಅವರಿಗೆ ಫೋನಲ್ಲಿ ಯದ್ವಾತದ್ವಾ ಅವಾಚ್ಯ ಶಬ್ದಗಳಿಂದ ಬೈದು ಚರ್ಚೆ ನುಗ್ಗುತ್ತೇನೆ ಎಂದು ಹೆದರಿಸಿದ್ದರು. ಆ ದಿನ ಡೇವಿಡ್ ಡಿಸೋಜ ಅವರ ಬೆದರಿಕೆಗೆ ಹೆದರಿ ಮತ್ತು ಮಾನಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಈ ಅಂಶಗಳೆಲ್ಲ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಕಂಡವರ ಹೆಂಡತಿಗೆ ಮೆಸೇಜು ಮಾಡಿದ್ದು ತಪ್ಪಾ, ಮೆಸೇಜು ಮಾಡಿದ್ದನ್ನೇ ತಪ್ಪರ್ಥ ಮಾಡಿಕೊಂಡದ್ದು ತಪ್ಪಾ, ಮೆಸೇಜು ಮಾಡಿದ ಉದ್ದೇಶವೇ ತಪ್ಪಿತ್ತಾ ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭ್ಯವಾಗಿಲ್ಲ.

ಒಟ್ಟಾರೆ ಫಾದರ್ ಮತ್ತು ಪ್ರಾಂಶುಪಾಲ ಆಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡದ್ದು ತಪ್ಪು ಅನ್ನುವುದು ಜನಸಾಮಾನ್ಯರ ಅಭಿಪ್ರಾಯ.

ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಇನ್ನೂ ಹಲವೆಡೆ ಅನಿರೀಕ್ಷಿತ ಮಳೆ । ಇಂದೇಕೋ ಸ್ವಲ್ಪ ಹಿತವೆನಿಸಿದೆ !

0 thoughts on “ಶಿರ್ವ ಫಾದರ್ ಆತ್ಮಹತ್ಯೆ ಪ್ರಕರಣ । ಕಂಡೋರ ಹೆಂಡತಿಗೆ ಮೆಸೇಜು ಮಾಡಿದ್ದೇ ಪ್ರಾಣಕ್ಕೆ ಮುಳುವಾಯ್ತು ?!”

  1. Pingback: ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಇನ್ನೂ ಹಲವೆಡೆ ಅನಿರೀಕ್ಷಿತ ಮಳೆ । ಇಂದೇಕೋ ಸ್ವಲ್ಪ ಹಿತವೆನಿಸಿದೆ ! - ಹೊಸ ಕನ್ನ

error: Content is protected !!
Scroll to Top
%d bloggers like this: