ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮ | ಮಾರಕಾಸ್ತ್ರದಿಂದ ಹಲ್ಲೆ, ಕೆಳೆಂಜಿನೋಡಿ ಗಿರೀಶ ಗೌಡ ಆಸ್ಪತ್ರೆಗೆ
ಬೆಳ್ತಂಗಡಿ, ಫೆ.26 : ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.
ಹಲ್ಲೆಗೊಳಗಾದ ಯುವಕ ರೆಖ್ಯಾ ಗ್ರಾಮದ ಕೆಳೆಂಜಿನೋಡಿ ನಿವಾಸಿ ಗಿರೀಶ್ ಗೌಡ (25) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರು.
ರೆಖ್ಯಾ ಗ್ರಾಮದ ಕೆಡಂಬಲ ಸಮೀಪದ ಗುಂಡ್ಯದ ಹೊಳೆಯಲ್ಲಿ ರೆಖ್ಯಾದ ಯುವಕರ ಗುಂಪೊಂದು ತನ್ನ ಪಾಡಿಗೆ ತಾನು ನೀರಿನಲ್ಲಿ ಆಟ ಆಡುತ್ತಾ ಸ್ನಾನ ಮಾಡುತ್ತಿತ್ತು.
ಆಗ ಅಲ್ಲಿಗೆ ಅದೇ ಗ್ರಾಮದ ಕಟ್ಟೆ ನಿವಾಸಿಗಳಾದ ವಿಶ್ವನಾಥ ಕೆ.ಎಸ್ ಅಲಿಯಾಸ್ ಚಡ್ಡಿ ಬಾಲ ಮತ್ತು ರಮೇಶ್ ಆಚಾರಿ ಎಂಬವರು ಕ್ಯಾತೆ ತೆಗೆದಿದ್ದಾರೆ. ಆ ಸಂದರ್ಭದಲ್ಲಿ ಇವರನ್ನು ತಡೆಯಲು ಬಂದ ಸ್ಥಳೀಯರೇ ಆದ ಗಿರೀಶ್ ಗೌಡರು ತಡೆದಿದ್ದಾರೆ. ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವರ ನೆರವಿಗೆ ಧಾವಸಿದ್ದಾರೆ.
ಆಗ ಗಿರೀಶ್ ಗೌಡರ ಮೇಲೆ ಚಡ್ಡಿ ಬಾಲ ಮತ್ತು ರಮೇಶ್ ಆಚಾರಿ ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ಮಾಡಿದ ಆರೋಪಿಗಳು ಕಂಠ ಮಟ್ಟ ಕುಡಿದಿದ್ದು, ಅ ನಶೆಯಲ್ಲಿಯೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಿರೀಶ ಗೌಡರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಕೊಳ್ತಿಗೆ | ಮದುವೆ ದಿನ ಮದುಮಗಳು ಪನಂದೆ ಪದ್ರಾಡ್ | ಮದುವೆ ರದ್ದು !