ನಾಳೆ, ಫೆ.26 : ಹಿರೇಬಂಡಾಡಿಯ ಉಳ್ಳತ್ತೋಡಿ ಷಣ್ಮುಖ ದೇವರ ಸನ್ನಿಧಿಗೆ ಬರಲಿದ್ದಾರೆ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನಾಳೆ ಹಿರೇಬಂಡಾಡಿಯ ಉಳ್ಳತ್ತೋಡಿಯ ಷಣ್ಮುಖ ದೇವಾಲಯದಲ್ಲಿ ನವೀಕರಣ – ಪುನಃ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವದ ಸಮಾರಂಭಕ್ಕೆ ಸಂಭ್ರಮದ ಆರನೆಯ ದಿನ.
ಸ್ತಂಭ ಕಲಶ ತಳಿರು-ತೋರಣ ರಸ್ತೆಯ ಇಕ್ಕೆಲಗಳಲ್ಲೂ ಶುದ್ಧತೆಯ ಮೈಗೂಡಿಸಿಕೊಂಡ ಸ್ವಚ್ಛ ಬಂಡಾಡಿ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಹಿರೇಬಂಡಾಡಿ ಗ್ರಾಮದ ಪುರುಷರು ಬಿಳಿಯ ಪಂಚೆಯುಟ್ಟು ಕೇಸರಿ ಶಾಲಿನಲ್ಲಿ ನಿಮಗೆ ಸ್ವಾಗತ ಕೋರಿದರೆ, ಮಹಿಳೆಯರು ಕೇಸರಿ ಸೀರೆಯುಟ್ಟು ಬ್ರಹ್ಮಕಲಶೋತ್ಸವಕ್ಕೆ ಬರುವ ಭಕ್ತಾದಿಗಳ ಸ್ವಾಗತಕ್ಕೆ ನಿಲ್ಲುತ್ತಾರೆ.
ಬನ್ನಿ, ಶ್ರೀ ಕ್ಷೇತ್ರ ಉಳ್ಳತ್ತೋಡಿಯ ಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾಗಿ.
26/02/2020 ರ ಬುಧವಾರ : ಬೆಳಗಿನ ಕಾರ್ಯಕ್ರಮಗಳು
ಬೆಳಿಗ್ಗೆ ಗಂಟೆ 5.00 :
108 ತೆಂಗಿನ ಕಾಯಿ ಮಹಾಗಣಪತಿ ಹೋಮ, ಅಲ್ಪ ಪ್ರಾಸಾದ ಶುದ್ಧಿ, ಪ್ರಾಸಾದ ಪ್ರತಿಷ್ಠೆ, ನಾಂದೀ ಪುಣ್ಯಾಹ, ನಪುಂಸಕ ಶೀಲಾ ಪ್ರತಿಷ್ಠೆ, ರತ್ನ ನ್ಯಾಸಾದಿ ಪೀಠ ಪ್ರತಿಷ್ಠೆ, ಜೀವ ಕಲಶ, ಬಿಂಬ, ನಿದ್ರಾ ಕಲಶಾದಿ ಗರ್ಭಗುಡಿ ಪ್ರವೇಶ.
ಬೆಳಿಗ್ಗೆ ಗಂಟೆ 7.45 ರಿಂದ 8.20 ರ ವರೆಗೆ ನಡೆಯುವ ಮೀನ ಲಗ್ನದಲ್ಲಿ :
ಸುಬ್ರಮಣ್ಯ ದೇವರ ಪ್ರತಿಷ್ಠೆ, ಗಣಪತಿ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕುಂಭಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರ ಪ್ರತಿಷ್ಠೆ, ನಾಗ ಪ್ರತಿಷ್ಠಾ, ದೈವ ತಂಬಿಲ ಮತ್ತು ಆಶ್ಲೇಷಾಬಲಿ.
ಮಧ್ಯಾಹ್ನ ಗಂಟೆ 12.00 :
ಪ್ರತಿಷ್ಠಾ ಬಲಿ, ಬ್ರಾಹ್ಮಣ ಹಸ್ತಾವ್ವಕ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ
ಸಂಜೆ 4.00 ರಿಂದ 6.00 : ಭಜನಾ ಕಾರ್ಯಕ್ರಮ
ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪೆರಿಯಡ್ಕ ಮತ್ತು ಉಮಾ ಮಹೇಶ್ವರಿ ಭಜನಾ ಮಂಡಳಿ, ಬಲ್ಯ ಇವರಿಂದ
26/02/2020 ರ ಬುಧವಾರ : ಆಶೀರ್ವಚನ
ನಾಳೆ, 26/02/2020 ರ ಬುಧವಾರ ಸಂಜೆ 6.00 ಗಂಟೆಗೆ ಸಭಾ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.
ನಾಳಿನ ವಿಶೇಷ ಆರು ಗಂಟೆಗೆ ದೇವಾಲಯದ ಪ್ರಾಂಗಣದಲ್ಲಿ ಹಾಕಿದ ಬೃಹತ್ ಸಭಾಂಗಣದಲ್ಲಿ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ. ಮೊದಲಿಗೆ ಆಶೀರ್ವಚನ ಭಾಷಣವನ್ನುಶ್ರೀ ಡಿ ವೀರೇಂದ್ರ ಹೆಗ್ಗಡೆಯವರು ಭಕ್ತಾದಿಗಳನ್ನುದ್ದೇಶಿಸಿ ಮಾಡಲಿದ್ದಾರೆ.
26/02/2020 ರ ಬುಧವಾರ : ಅಧ್ಯಕ್ಷತೆ
ನಾಳಿನ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಡಿ ವಿ ಸದಾನಂದ ಗೌಡರು ವಹಿಸಿಕೊಳ್ಳಲಿದ್ದಾರೆ.
26/02/2020 ರ ಬುಧವಾರ : ಮುಖ್ಯ ಅತಿಥಿಗಳು
ಉಳಿದಂತೆ ಮುಖ್ಯ ಅತಿಥಿಗಳಾಗಿ ಶ್ರೀ. ಕೆ. ಏನ್ ಜಗನ್ನಿವಾಸ್ ರಾವ್, ಮಾಜಿ ಸದಸ್ಯರು, ಧಾರ್ಮಿಕ ಪರಿಷತ್, ಧಾರ್ಮಿಕ ದತ್ತಿ ಇಲಾಖೆ, ಪುತ್ತೂರಿನ ಸಹಾಯಕ ಕಮಿಷನರ್ ಆದ ಯತೀಶ್ ಉಳ್ಳಾಲ್ ಮತ್ತು ಪುತ್ತೂರಿನ ಭಜನಾ ಪರಿಷತ್ ನ ಗೌರವಾಧ್ಯಕ್ಷರಾದ ಶ್ರೀ ಧನ್ಯ ಕುಮಾರ್ ರೈ, ಬಿಳಿಯೂರು ಗುತ್ತು ಇವರು ಪಾಲ್ಗೊಳ್ಳಲಿದ್ದಾರೆ.
26/02/2020 ರ ಬುಧವಾರ : ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ 8.30 ರಿಂದ ಶ್ರೀ ವಿಠ್ಠಲ್ ನಾಯಕ್ ಕಲ್ಲಡ್ಕ ಅವರಿಂದ ‘ ಗೀತಾ ಸಾಹಿತ್ಯ ಸಂಭ್ರಮ ‘ ನಡೆಯಲಿದೆ.