ಶ್ರೀಕ್ಷೇತ್ರ ಕೆಮ್ಮಲೆ |ಕೋಟಿ-ಚೆನ್ನಯರ ಆರಾಧ್ಯ ಮೂರ್ತಿ ನಾಗಬ್ರಹ್ಮರ ಸನ್ನಿಧಿ| ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ ಬ್ರಹ್ಮಕಲಶೋತ್ಸವಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ

ಕಾಣಿಯೂರು ; ಕೋಟಿ-ಚೆನ್ನಯರ ಆರಾಧ್ಯ ದೇವರಾದ ಎಣ್ಮೂರು ಗ್ರಾಮದ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ ,ಕೆಮ್ಮಲೆ ಬ್ರಹ್ಮರ ಮೂಲ ಸ್ಥಾನ ಹಾಗೂ ಉಳ್ಳಾಕುಲು,ಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಎ.1ರಿಂದ 3ರವರೆಗೆ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಹೇಮಳ ಶಾಲಾ ವಠಾರದಲ್ಲಿ ನಡೆಯಿತು


Ad Widget

Ad Widget

ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ,ಕಾರಣಿಕ ಕ್ಷೇತ್ರ ಹಾಗೂ ಪುರಾತನ ಐತಿಹ್ಯವಿರುವ ಶ್ರೀಕ್ಷೇತ್ರ ಕೆಮ್ಮಲೆಯ ಬ್ರಹ್ಮಕಲಶೋತ್ಸವದ ಕಾರ್ಯದಲ್ಲಿ ತೊಡಿಗಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ದೈವಲೀಲೆ ಎಂದು ಭಾವಿಸಿದ್ದೇನೆ.


Ad Widget

ಶ್ರೀ ಕ್ಷೇತ್ರದ ಪರಂಪರೆ ಹಾಗೂ ಸಾನಿಧ್ಯವನ್ನು ಉಳಿಸಿಕೊಂಡು,ಬೆಳೆಸಿಕೊಂಡು ಹೋಗಿರುವುದು ಈ ಊರಿನವರು.ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ.ಕ್ಷೇತ್ರದ ಬ್ರಹ್ಮಕಲಶದ ಜತೆ ಸಂಪರ್ಕ ರಸ್ತೆಗಳ ಅಭಿವೃದ್ದಿ,ಮೂಲಭೂತ ವ್ಯವಸ್ಥೆಗಳು ಆಗಬೇಕಿದೆ.ಇವುಗಳ ಈಡೇರಿಕೆಗೆ ಶ್ರಮಿಸಲಾಗುವುದು.ಈಗಾಗಲೇ ಕ್ಷೇತ್ರಕ್ಕೆ ರಾಜ್ಯ ಸರಕಾರದಿಂದ 45 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.ಮುಂದಿನ ಯೋಜನೆಗಳ ಈಡೇರಿಕೆಗಾಗಿ ಶ್ರಮಿಸಲಾಗುವುದು ಎಂದರು.

ನಾಗಬ್ರಹ್ಮ ಸನ್ನಿಧಿಯಲ್ಲಿ ಕೋಟಿ ಚೆನ್ನಯರು

ಬ್ರಹ್ಮಕಲಶೋತ್ಸವಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ

Ad Widget

Ad Widget

Ad Widget

ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಧನಂಜಯ ಕೇನಾಜೆ ಮಾತನಾಡಿ, ಶೋಭ ಕರಂದ್ಲಾಜೆಯವರ ನೇತೃತ್ವದಲ್ಲಿ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಅಂಗಾರ ಅವರ ಸಹಕಾರದಲ್ಲಿ ಕ್ಷೇತ್ರಕ್ಕೆ 45 ಲಕ್ಷ ರೂ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.ಈ ನಿಮಿತ್ತ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಬಿ.ಎಸ್.ಯಡಿಯೂರಪ್ಪ ಅವರನ್ನು ಆಮಂತ್ರಿಸಲಾಗಿದೆ.ಬರಲು ಅವರು ಒಪ್ಪಿಕೊಂಡಿದ್ದಾರೆ.ಎ.3ರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದರು.

ಸಭೆಯಲ್ಲಿ ದೇವಸ್ಥಾನ ಹಾಗೂ ಜೀರ್ಣೋದ್ದಾರ ಕಾರ್ಯ,ಬ್ರಹ್ಮಕಲಶೋತ್ಸವ ಕಾರ್ಯಗಳ ಕುರಿತು ಶೋಭ ಕರಂದ್ಲಾಜೆಯವರೊಂದಿಗೆ ಸಮಿತಿ ಪದಾ„ಕಾರಿಗಳು ಮಾಹಿತಿ ವಿನಿಮಯ ಮಾಡಿಕೊಂಡರು.ಕ್ಷೇತ್ರದ ಚಟುವಟಿಕೆಗಳಲ್ಲಿ ಯಾವುದೇ ಲೋಪಗಳಾಗದೆ ಯಶಸ್ವಿಯಾಗಿ ನಡೆಯಬೇಕೆಂದು ಶೋಭ ಕರಂದ್ಲಾಜೆ ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಎನ್ ರಘುನಾಥ ರೈ ಕಟ್ಟಬೀಡು ಎಣ್ಮೂರು, ಎಣ್ಮೂರು ಗ್ರಾ.ಪಂ.ಉಪಾಧ್ಯಕ್ಷ ಕರುಣಾಕರ ಹುದೇರಿ,ಕಾಣಿಯೂರು ಗ್ರಾ.ಪಂ.ಸದಸ್ಯ ಕೆ.ಎಸ್ ಗಣೇಶ್ ಉದನಡ್ಕ, ಸ್ವಾಗತ ಸಮಿತಿಯ ಲಕ್ಷ್ಮಣ ಕರಂದ್ಲಾಜೆ,ಕೆಮ್ಮಲೆ ಶ್ರೀನಾಗಬ್ರಹ್ಮ ದೇವಸ್ಥಾನ ಹಾಗೂ ಬ್ರಹ್ಮರು ಉಳ್ಳಾಕುಲು ಸೇವಾ ಟ್ರಸ್ಟ್‍ನ ಅಧ್ಯಕ್ಷ ನಾರಾಯಣ ಕೋರ್ಜೆ,ಕಾರ್ಯದರ್ಶಿ ಬಾಲಕೃಷ್ಣ ಕೆ,ಕೋಶಾಧಿಕಾರಿ ಪ್ರವೀಣ ಹೇಮಳ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಹೇಮಳ,ಕಾರ್ಯದರ್ಶಿ ಜಯರಾಮ ಐಪಳ,ಉಪಾಧ್ಯಕ್ಷ ಗೋಪಾಲಕೃಷ್ಣ ಕೆ,ಕೋಶಾ„ಕಾರಿ ಮೋನಪ್ಪ ಗೌಡ ಹೆಚ್,ಜತೆ ಕಾರ್ಯದರ್ಶಿ ಪ್ರವೀಣ್ ಹೇಮಳ,ಮಿಥುನ್ ಕೆ, ಕೆಮ್ಮಲೆ ಶ್ರೀನಾಗಬ್ರಹ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಯಾನಂದ ಕೆ,ಕಾರ್ಯದರ್ಶಿ ಜಯರಾಮ ಐಪಳ,ಬ್ರಹ್ಮರು ಉಳ್ಳಾಕ್ಲು ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಎ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಐಪಳ,ಕಾರ್ಯದರ್ಶಿ ಹರ್ಷಿತ್ ಹೇಮಳ,ಕೋಶಾ„ಕಾರಿ ಗೋಪಲಾಕೃಷ್ಣ ಐಪಳ,ಉಪಾಧ್ಯಕ್ಷ ಗಣೇಶ್ ಎ ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top
%d bloggers like this: