ಶಾಂತಿಮೊಗರು: ದೇವಸ್ಥಾನಕ್ಕೆ ಶೋಭಾ ಕರಂದ್ಲಾಜೆ ಬೇಟಿ:ತಡೆಗೋಡೆ ನಿರ್ಮಾಣಕ್ಕೆ ಮನವಿ

ಕಾಣಿಯೂರು :ಎಪ್ರಿಲ್‍ನಲ್ಲಿಬ್ರಹ್ಮಕಲಶೋತ್ಸವ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಬೇಟಿ ನೀಡಿ ದೇವಸ್ಥಾನದಅಭಿವೃದ್ದಿ ಕಾರ್ಯ ವೀಕ್ಷಿಸಿದರು.ದೇವಸ್ಥಾನದ ಆಡಳಿತ ಸಮಿತಿಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳ ಕುರಿತುಮಾಹಿತಿ ನೀಡಿದರು.

ಈ ಸಂದರ್ಭ ದೇವಸ್ಥಾನವುಕುಮಾರಧಾರ ನದಿ ತಟದಲ್ಲಿರುವುದರಿಂದ ತಡೆಗೋಡೆ ನಿರ್ಮಾಣಕ್ಕೆ 2 ಕೋಟಿ ಅನುದಾನಹಾಗೂ ಮೇಲ್ಛಾವಣಿ ಕಾಮಗಾರಿಗೆ 20 ಲಕ್ಷ ರೂ.ಗಳ ಬೇಡಿಕೆ ಸಲ್ಲಿಸಲಾಯಿತು.ಈ ಕುರಿತುಪ್ರಯತ್ನಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಅವರು ಭರವಸೆನೀಡಿದರು.ಬ್ರಹ್ಮಕಲಶೋತ್ಸವಕ್ಕೆ ಸಹಕಾರ ನೀಡಲಾಗುವುದು ಎಂದರು.


Ad Widget

Ad Widget

Ad Widget

Ad Widget

Ad Widget

Ad Widget

ಈ ಸಂದರ್ಭ ದೇವಸ್ಥಾನದಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾದ ಚಂದ್ರಶೇಖರ್ ಬರೆಪ್ಪಾಡಿ,ನರಸಿಂಹ ಪ್ರಸಾದ್‍ಪಾಂಗಾಣ್ಣಾಯ,ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ,ಪ್ರಮುಖರಾದ ನಾಗೇಶ್‍ಕೆಡೆಂಜಿ,ಭರತ್ ನಡುಮನೆ,ಸೂರಪ್ಪ ಗೌಡ ಪಟ್ಟೆತ್ತಾನ,ಸುರೇಶ್ ರೈ ಸೂಡಿಮುಳ್ಳು,ಲೋಕೇಶ್‍ಬಿ.ಎನ್,ಚಾರ್ವಾಕಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ,ಕಾಣಿಯೂರುಗ್ರಾ.ಪಂ.ಸದಸ್ಯ ಗಣೇಶ್ ಉದನಡ್ಕ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top
%d bloggers like this: