ಮಾಡನ್ನೂರು ಉವೈಸ್ ಸಖಾಫಿ ನಿಧನ

ಪುತ್ತೂರು : ಮಾಡನ್ನೂರು ಗ್ರಾಮದ ನಡುವಡ್ಕ ದಿ.ಅಬ್ಬಾಸ್ ಅವರ ಪುತ್ರ ಉವೈಸ್ ಸಖಾಫಿ ಹೃದಯಾಘಾತದಿಂದ ಫೆ.16ರಂದು ರಾತ್ರಿ ನಿಧನರಾದರು.

 

ಇಸ್ಲಾಂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಇವರು ಎಲ್ಲರೊಂದಿಗೂ ಅತ್ಮೀಯತೆಯಿಂದ ಇರುತ್ತಿದ್ದರು.

ಇವರ ಅಕಾಲಿಕ ನಿಧನದಿಂದ ಒಬ್ಬ ಮುಸ್ಲಿಂ ಧಾರ್ಮಿಕ ಗುರುವನ್ನು ಕಳೆದು ಕೊಂಡಂತಾಗಿದೆ. ಕುಂದಾಪುರ ತಾಲೂಕಿನ ಹಾಲಾಡಿ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕುಂದಾಪುರ ವಲಯದ ತರಬೇತಿ ವಿಭಾಗದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಫೆ.16ರಂದು ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಎದೆ ನೋವು ಕಾಣಿಸಿಕೊಂಡ ಉವೈಸ್ ಸಖಾಫಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಕೊನೆಯುಸಿರೆಳೆದಿದ್ದಾರೆ.

Leave A Reply

Your email address will not be published.