ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ: ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನದ ಬ್ರಹ್ಮಕಲಶ
ಪುತ್ತೂರು: ಮುಂಬರುವ ಎಪ್ರಿಲ್ ತಿಂಗಳ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಕ್ತರ ಮಹಾದಾಸೆಯಂತೆ ತರಕಾರಿ ಬೆಳೆಯುವ ಮಹತ್ವಾಕಾಂಕ್ಷೆಯ ಯೋಜನೆಯಾದ ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ ಪೂರ್ವ ತಯಾರಿ ಎಂಬ ಶೀರ್ಷಿಕೆಯಡಿ ತರಕಾರಿ ಬೆಳೆಯುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮ,ಶ್ರಮದಾನ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 16.02.2020 ರಂದು ಬೆಳಿಗ್ಗೆ ಮಠಂತಬೆಟ್ಟು ಪಾಲ್ತಿಮಾರು ಗದ್ದೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಾವಯವ ಗೊಬ್ಬರ ಇದರ ವಲಯ ವ್ಯವಸ್ಥಾಪಕರಾದ ಪಾಲಾಕ್ಷ ರೈ,ಕೃಷಿ ಅಧಿಕಾರಿ ಟಿ ಭರಮಣ್ಣ,ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯನಂದ.ಕೆ,ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು,ದೇವಳದ ಅರ್ಚಕ ರಾಮಕೃಷ್ಣ ಭಟ್,ಮುರಳೀಧರ ರೈ ಮಠಂತಬೆಟ್ಟು,ಗಂಗಾಧರ ಶೆಟ್ಟಿ ಮಠಂತಬೆಟ್ಟು,ಜಯಪ್ರಕಾಶ್ ಬದಿನಾರು,ದಾಮೋದರ ಶೆಟ್ಟಿ ಮಠಂತಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸದಾಶಿವ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು,ಶೇಖರ ಡೆಕ್ಕಾಜೆ,ಶಿವಪ್ರಸಾದ್ ರೈ,ದೇವದಾಸ್ ಗೌಡ, ನ್ಯಾಯವಾದಿ ಕುಮಾರನಾಥ್ ಎಸ್ ಪಲ್ಲತ್ತಾರು ಬಾಲಕೃಷ್ಣ ಶೆಟ್ಟಿ,ಚಂದ್ರಶೇಖರ ಸಾಮಾನಿ, ರುಕ್ಮಯ ಪೂಜಾರಿ,ಉಮೇಶ್ ನಾಯ್ಕ್,ಪ್ರೀತಮ್ ಶೆಟ್ಟಿ ಕೇದಗೆ,ಸದಾಶಿವ ರೈ,ರಾಮಣ್ಣ ಶೆಟ್ಟಿ,ಪ್ರಭಾಕರ್ ಸಾಮಾನಿ, ಡಾ.ಶಿವಪ್ರಕಾಶ್ ಕೋಡಿ,ವಿಕ್ರಮ್ ಶೆಟ್ಟಿ ಅಂತರ,ಸಂತೋಷ್ ರೈ ಕೆದಿಕಂಡೆ ಗುತ್ತು,ಪ್ರಜೀತ್ ಸಾಮಾನಿ ಉಪಸ್ಥಿತರಿದ್ದರು.ಮಹಿಳಾ ಸಮಿತಿ, ಚಿಣ್ಣರ ಸಮಿತಿ,ವಿವಿಧ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಇತರ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು,ರೈತಾಪಿ ಬಂಧುಗಳು, ಭಕ್ತಾದಿಗಳು ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ಗಣ್ಯರನ್ನು ರೈತಾಪಿ ವರ್ಗದ ಸಂಕೇತವಾದ ಹಸಿರು ಶಾಲನ್ನು ನೀಡಿ ಸ್ವಾಗತಿಸಲಾಯಿತು.ಸಮಿತಿಯ ಪದಾಧಿಕಾರಿಗಳಾದ ರಾಜೀವ ಶೆಟ್ಟಿ ಕೇದಗೆ ಸ್ವಾಗತಿಸಿ,ಮುರಳೀಧರ ರೈ ಮಠಂತಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ,ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರೂಪಿಸಿದರು.