ಫೆ.19-27 :ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ

ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.19ರಿಂದ ಫೆ.27ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ. ಫೆ.18ರಂದು ಹಸಿರುವಾಣಿ ಹೊರೆಕಾಣಿಕೆ ನಡೆದು ಸಂಜೆ 6.30ಕ್ಕೆ ಉಗ್ರಾಣ ತುಂಬುವುದು, ರಾತ್ರಿ 7ಕ್ಕೆ ಶ್ರೀ ದುರ್ಗಾ ಪೂಜೆ ನಡೆಯಲಿದೆ. ಫೆ.19ರಂದು ಬೆಳಿಗ್ಗೆ ಗಣಪತಿ ಹೋಮ, 9ಕ್ಕೆ ಧ್ವಜಾರೋಹಣ, ಬಲಿವಾಡು ಶೇಖರಣೆ, ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಆನಂದ ಗೌಡ ದೊಡ್ಡಮನೆ ಇವರು ಉದ್ಘಾಟಿಸಲಿದ್ದಾರೆ.

ನಂತರ ಯಕ್ಷಗಾನ ತಾಳಮದ್ದಳೆ ಪ್ರಸಂಗ “ಭಕ್ತ ಸುಧನ್ವ”(ಪೌರಾಣಿಕ ಪ್ರಸಂಗ), ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ದೇವರ ಬಲಿ, ಮಹಾ ಅನ್ನಸಂತರ್ಪಣೆ, ನಿತ್ಯಬಲಿ, ಸಂಜೆ 6.30ರಿಂದಹನುಮಗಿರಿ ಸಾಂಸ್ಕೃತಿಕ ವೇದಿಕೆ ಈಶ್ವರಮಂಗಲ ಇವರಿಂದ ಸಮರ್ಥ ಭಾರತ ದೇಶಭಕ್ತಿ ಆಧಾರಿತ “ನೃತ್ಯ ವೈವಿಧ್ಯ” ರಾತ್ರಿ 8ರಿಂದ ಹೈಂದವಿ ಕಲಾವಿದರು ಈಶ್ವರಮಂಗಲ ಅರ್ಪಿಸುವ ಕೇಶವ ಮಚ್ಚಿಮಲೆ ನಿರ್ದೇಶನದ ತುಳು ಹಾಸ್ಯಮಯ ನಾಟಕ “ಮುಕ್ಕಾಲ್ ಮೂಜಿ ಗಳಿಗೆ” ನಡೆಯಲಿದೆ.

ಫೆ.20ರಂದು ಹಗಲು ಮತ್ತು ರಾತ್ರಿ ನಿತ್ಯಬಲಿ, ಸಂಜೆ ಅಂಗನವಾಡಿ ಮಕ್ಕಳಿಂದ “ಸಾಂಸ್ಕೃತಿಕ ವೈಭವ”, ರಾತ್ರಿ 9ರಿಂದ “ಎಂಕ್ಲು ತುಳುವೆರ್” ಕಲಾ ಬಳಗ ಈಶ್ವರಮಂಗಲ ಇವರಿಂದ ಯಂ. ರಾಮ ಈಶ್ವರಮಂಗಲ ವಿರಚಿತ “ಪನಂದೆ ಪೋವಡೆ” ತುಳು ಹಾಸ್ಯಮಯ ನಾಟಕ ನಡೆಯಲಿದೆ. ಫೆ.21ರಂದು ಹಗಲು ನಿತ್ಯಬಲಿ, ಮಧ್ಯಾಹ್ನ ಏಕದಶಾ ರುದ್ರಾಭಿಷೇಕ, ಮಹಾಪೂಜೆ, ರಾತ್ರಿ 8.30ಕ್ಕೆ ಉತ್ಸವ ಬಲಿ, ಮಹಾಶಿವರಾತ್ರಿ ಮಹೋತ್ಸವ, ಅರ್ಧ ಏಕಾಹ ಭಜನೆಯು ಸೂರ್ಯಾಸ್ತದಿಂದ ಪ್ರಾರಂಭಗೊಂಡು ಮರುದಿನ ಸೂರ್ಯೋದಯದ ತನಕ ನಡೆಯಲಿದೆ. ಫೆ. 22ರಂದು ಹಗಲು 8.30ಕ್ಕೆ ಉತ್ಸವ ಬಲಿ, ಸಂಜೆ 7ರಿಂದ ಶ್ರೀ ಕುಮಾರ್ ಪೆರ್ನಾಜೆ ಇವರ ನಿರ್ದೇಶನದಲ್ಲಿ “ಸ್ವರಸಿಂಚನ” ಸಂಗೀತ ಶಾಲಾ ಶಿಕ್ಷಕಿ ಸವಿತಾ ಕೋಡಂದೂರು ಮತ್ತು ಬಳಗದವರಿಂದ “ನವಮಾತೃಕೆಯರ ಗೀತ ಗಾಯನ”, ಜೊತೆಜೊತೆಯಲಿ ಪಟ್ಟಾಭಿರಾಮ ಸುಳ್ಯ ಇವರಿಂದ” ನಗೆಹಬ್ಬ”, “ಪೆರ್ನಾಜೆ ಪ್ರಶಸ್ತಿ” ಪ್ರಧಾನ, ರಾತ್ರಿ 7.30ಕ್ಕೆ ಉತ್ಸವ ಬಲಿ, 9ಕ್ಕೆ ಅನ್ನಸಂತರ್ಪಣೆ, ರಾತ್ರಿ 10.30ಕ್ಕೆ ಚಿತ್ತಾರ ಕಲಾವಿದರು ಕರ್ನೂರು ಅರ್ಪಿಸುವ ನಾಟಕ “ಗುರ್ಕಾರೆ ಗುವೆಲ್ಡ್” ನಡೆಲಿದೆ. ಫೆ.23ರಂದು ಬೆಳಿಗ್ಗೆ 8.30ಕ್ಕೆ ಉತ್ಸವ ಬಲಿ, ರಾತ್ರಿ 7ರಿಂದ ‘ವಿಶ್ವ ಮಾನ್ಯ ಕನ್ನಡಿಗ’ ಪ್ರಶಸ್ತಿ ಪುರಸ್ಕೃತರು ಡಾ.ಕಿರಣ್ ಕುಮಾರ್ ಪುತ್ತೂರು ನಿರ್ದೇಶನದ ‘ಗಾನಸಿರಿ’ಕಲಾ ಕೇಂದ್ರ ಈಶ್ವರಮಂಗಲ ಶಾಖೆಯ ಉದಯೋನ್ಮುಖ ಹಾಡು ಹಕ್ಕಿಗಳು ಪ್ರಸ್ತುತ ಪಡಿಸುವ “ಮಧುರ ಗೀತಾಂಜಲಿ” ಎಂದು ಮರೆಯದ ಅತಿಮಧುರ ಗೀತೆಗಳ ಸಂಭ್ರಮ, ರಾತ್ರಿ 8ರಿಂದ ಉತ್ಸವ ಬಲಿ, ನಡುದೀಪೋತ್ಸವ, ರಾತ್ರಿ ಶ್ರೀ ಗಂಗಾಧರ ಮಾರಾರ್ ಮತ್ತು ಬಳಗ ನೀಲೇಶ್ವರ ಇವರಿಂದ ತಾಯಂಬಕ, ಸದಾಶಿವ ವೇದಪಾಠ ಶಾಲೆ ಬೆಳ್ಳಾರೆ ಇವರಿಂದ ವೇದಘೋಷ ಪುರಸ್ಸರ ಬಲಿ ನಡೆಯಲಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಫೆ.24ರಂದು ಬೆಳಿಗ್ಗೆ 9ಕ್ಕೆ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಂಗಣ ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 7ರಿಂದ ಶ್ರೀ.ಕ್ಷೇ.ಧ.ಗ್ರಾ.ಯೋ.(ರಿ) ನ.ಮುಡ್ನೂರು ಒಕ್ಕೂಟ ಮತ್ತು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಈಶ್ವರಮಂಗಲ ಇವರಿಂದ “ಸಾಂಸ್ಕೃತಿಕ ವೈಭವ” ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8ರಿಂದ ಧಾರ್ಮಿಕ ಸಭಾ ಕಾರ್ಯಕರ್‍ಮ ನಡೆಯಲಿದ್ದು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವಾಸುದೇವತಂತ್ರಿ ಕುಂಟಾರು ಇವರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಕುಂಜತ್ತಾಯ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದು ಬದಿಯಡ್ಕ ಉದ್ಯಮಿಗಳಾದ ಬಿ.ವಸಂತ ಪೈ ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮಂಗಳೂರು ದ.ಕ.ಜಿ.ಪಂ.ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೊಡು ಇವರು ಅತಿಥಿಗಳಾಗಿ ಆಗಮಿಲಿದ್ದಾರೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಜಲಧರ ಶೆಟ್ಟಿ ಮೇನಾಲ, ನೆ.ಮುಡ್ನೂರು ಗ್ರಾ.ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಂಕರಿ ಆರ್.ಭಂಡಾರಿ ಸರ್ವತ್ತೋಡಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷರಾದ ಸದಾಶಿವ ರೈ ನಡುಬೈಲು, ನೆ,ಮುಡ್ನೂರು ಗ್ರಾ.ಪಂಚಾಯತ್ ಉಪಾಧ್ಯಕ್ಷರಾದ ಶ್ರೀರಾಮ್ ಪಕ್ಕಳ ಇವರು ಗೌರವ ಉಪಸ್ಥಿತಿಯಲ್ಲಿರುವರು. ರಾತ್ರಿ 8.30ರಿಂದ ಕುತ್ಯಾಳ ಶ್ರೀ ಮಹಾವಿಷ್ಣು ದೇವರ ಸನ್ನಿಧಿಗೆ ಶ್ರೀ ದೇವರ ಸವಾರಿ, ಕಟ್ಟೆಪೂಜೆ, ಮರಳಿ ಬಂದು ಶಯನೋತ್ಸವ, ರಾತ್ರಿ 9ರಿಂದ ಅನ್ನಸಂತರ್ಪಣೆ ನಡೆಯಲಿದೆ. ಫೆ.25ರಂದು ಬೆಳಿಗ್ಗೆ 9ಕ್ಕೆ ಕವಾಟೋದ್ಘಾಟನೆ, ಸೀಯಾಳ ಅಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8.30ರಿಂದ ಉತ್ಸವ ಬಲಿ, ಅವಭೃತ ಸ್ನಾನಕ್ಕೆ ಸಡ್ಫೇಟಿಗೆ ಶ್ರೀ ದೇವರ ಸವಾರಿ, ಕಟ್ಟೆಪೂಜೆ, ಅವಭೃತ ಸ್ನಾನ, ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ಭಗವತೀ ಮಹಾತ್ಮೆ” ,ಅನ್ನಸಂತರ್ಪಣೆ ನಡೆಯಲಿದೆ. ಫೆ.26ರಂದು ಬೆಳಿಗ್ಗೆ 5ಕ್ಕೆ ಬೆಡಿಸೇವೆ, 6ಕ್ಕೆ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ, ಮಂತ್ರಾಕ್ಷತೆ, ಮಧ್ಯಾಹ್ನ ಸಂಪ್ರೋಕ್ಷಣೆ ಮಹಾಪೂಜೆ, ಮಹಾಪೂಜೆ, ರಾತ್ರಿ 8ಕ್ಕೆ ಶ್ರೀ ಕ್ಷೇತದ ದೈವಗಳ ಸ್ಥಾನದಿಂದ ದೈವಗಳ ಭಂಡಾರ ಹೊರಟು ಮಾಡದ ಗುಡ್ಡೆ ದೈವಗಳ ಚಾವಡಿ ಏರುವುದು.

ಫೆ.27ರಂದು ಬೆಳಿಗ್ಗೆ 9ಕ್ಕೆ ಶ್ರೀ ಕ್ಷೇತ್ರದಲ್ಲಿ ಕಿನ್ನಿಮಾಣಿ ದೈವ ಶ್ರಿಮುಡಿ ಧರಿಸಿ ಹೊರಟು ಮಾಡದ ಗುಡ್ಡೆ ಚಾವಡಿಯಲ್ಲಿ ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಮಾಡದ ಗುಡ್ಡೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಮರಳಿ ಬರುವುರು, ರಾತ್ರಿ 7ಕ್ಕೆ ಶ್ರೀ ಕ್ಷೇತ್ರದಲ್ಲಿ ಗುಳಿಗ ಕೋಲ ನಡೆಯಲಿದೆ.

Leave a Reply

error: Content is protected !!
Scroll to Top
%d bloggers like this: