ಬೆಳ್ತಂಗಡಿ ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸಂಗಡಿಯ ಪಡ್ಯಾರಬೆಟ್ಟುವಿನಲ್ಲಿ | ಮಾ. 24 ರಂದು

ಬೆಳ್ತಂಗಡಿ :  ಬೆಳ್ತಂಗಡಿ ತಾಲೂಕಿನ 17 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸಂಗಡಿ ಪಡ್ಯಾರಬೆಟ್ಟು ಸಂತೃಪ್ತಿ ಸಭಾಭವನದಲ್ಲಿ 2020 ಮಾರ್ಚ್ 24 ನೇ ಮಂಗಳವಾರ ನಡೆಸುವುದೆಂದು ತೀರ್ಮಾನಿಸಲಾಗಿದೆ.

 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ ಪ್ರದೀಪ ಕುಮಾರ ಕಲ್ಕೂರ, ತಾ| ಅಧ್ಯಕ್ಷ ಡಾ. ಬಿ ಯಶೋವರ್ಮ, ಸಮ್ಮೇಳನ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಜೀವಂಧರ ಕುಮಾರ್, ಅಧ್ಯಕ್ಷ ಜಯರಾಜ್ ಕಂಬಳಿ, ಕಾರ್ಯದರ್ಶಿ ಪಿ ಧರಣೇಂದ್ರ ಕುಮಾರ್ ಇವರು ಈ ಬಗ್ಗೆ ತಿಳಿಸಿರುತ್ತಾರೆ.

ಈ ಬಗ್ಗೆ ಪ್ರಥಮ ಹಂತದ ಸಮಾಲೋಚನೆ ಇತ್ತೀಚೆಗೆ ನಡೆದಿದ್ದು, ಮುಂದಕ್ಕೆ ವಿವಿಧ ಸಮಿತಿಗಳ ಆಯ್ಕೆ, ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ, ಉದ್ಘಾಟನೆ- ಸಮಾರೋಪದ ಅತಿಥಿಗಳ ಆಯ್ಕೆ, ಗೋಷ್ಠಿಗಳ ಬಗ್ಗೆ ವಿಚಾರ ವಿಮರ್ಷೆ, ಸನ್ಮಾನ, ಸ್ಮರಣ ಸಂಚಿಕೆ ಇತ್ಯಾಧಿ ಬಗ್ಗೆ ಮುಂದಿನ ಸಭೆಯಲ್ಲಿ ವಿವಿರವಾಗಿ ಚರ್ಚಿಸುವುದೆಂದು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಎಂ.ಪಿ ಶ್ರೀನಾಥ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು ಮತ್ತು ಅಚ್ಚು ಮುಂಡಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.