ಇವರೇ ನೋಡಿ ಜಗತ್ತಿನ ಅತ್ಯಂತ ಹಿರಿಯ ಪುರುಷ । ಜಪಾನಿನ ಇವರ ವಯಸ್ಸು ಕೇವಲ 112 ವರ್ಷ !

ಜಗತ್ತಿನ ದೀರ್ಘಾಯುಷ್ಮಾನ್ ದೇಶ ಜಪಾನಿನ 112 ವರ್ಷ ವಯಸ್ಸಿನ ಚಿಟೆತ್ಸು ವತನಾಬೆ ಎಂಬವರು ಜಗತ್ತಿನಲ್ಲಿರುವ ಅತ್ಯಂತ ಹಿರಿಯ ಪುರುಷ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಹೆಸರೀಗ ಗಿನ್ನೆಸ್ ಪುಸ್ತಕ ಸೇರಿದೆ.

 

1907 ರ ಮಾರ್ಚ್ 5 ರಂದು ಜನಿಸಿದ ವತನಾಬೆ ಸುದೀರ್ಘ ಜೀವನದ ರಹಸ್ಯ ಬಲ್ಲಿರಾ ?
ಏನೆಂದು ಟೆನ್ಶನ್ ಮಾಡಿಕೊಳ್ಳದೆ ಸದಾ ನಗುತ್ತಾ ಇರುವುದೇ ಅವರ ಆಯುರ್ ರಹಸ್ಯ. ಅಲ್ಲದೆ ಅವರು ಜೀವನ ಪೂರ್ತಿ ಏನಾದರೂ ಕೆಲಸ ಮಾಡುತ್ತಾ ಸದಾ ಆಕ್ಟಿವ್ ಆಗಿದ್ದಾರೆ. ಸಿಹಿಯನ್ನು ಬಹುವಾಗಿ ಇಷ್ಟ ಇಷ್ಟಪಟ್ಟು ತಿನ್ನುತ್ತಿದ್ದರು ಈ ಅಜ್ಜ. ಆದರೆ ಸಿಹಿ ತನ್ನ ಪಾಲಿಗೆ ಯಾವ ತೊಂದರೆಯನ್ನು ಕೊಟ್ಟಿಲ್ಲ ಎನ್ನುತ್ತಾ ತನ್ನ ಬೊಚ್ಚು ಬಾಯಿ ಬಿಟ್ಟುಕೊಂಡು ಅವರು ನಗುತ್ತಾರೆ.

ಜಪಾನ್ ದೇಶವೇ ಜಗತ್ತಿನಲ್ಲಿ ಅತ್ಯಂತ ಸುದೀರ್ಘ ಬದುಕುವ ಜನರ ದೇಶ. ಜಪಾನಿನ ಸರಿ ಸಾಮಾನ್ಯ ವ್ಯಕ್ತಿಯಾ ಲೈಫ್ ಎಕ್ಸ್ಪೆಕ್ಟನ್ಸಿ 84 ವರ್ಷಗಳು. ಇದಕ್ಕೆ ಹೋಲಿಸಿದರೆ ಭಾರತದ ನಾಗರಿಕರ ಲೈಫ್ ಎಕ್ಸ್ಪೆಕ್ಟನ್ಸಿ ತುಂಬಾ ಕಮ್ಮಿ( ಪಟ್ಟಿ ನೋಡಿ ). ಇವತ್ತಿಗೂ ಜಪಾನಿನಲ್ಲಿ ಹೆಚ್ಚು ಮಂದಿ ಶತಾಯುಷಿಗಳಿದ್ದಾರೆ.

ಜಪಾನಿನವರೇ ಆಗಿದ್ದ 112 ವರ್ಷ 266 ದಿನಗಳ ಮಸಜೋ ನೊನಾಕ ಎಂಬವರ ಹೆಸರಲ್ಲಿ ಗಿನ್ನೆಸ್ ದಾಖಲೆ ಇತ್ತು.

ಇನ್ನೊಬ್ಬ ಅಜ್ಜರಿದ್ದರು. 2013 ರಲ್ಲಿ ತೀರಿ ಕೊಂಡ ಅವರು ಬದುಕಿನಲ್ಲಿ ಒಟ್ಟು 116 ಬಾರಿ ಕೇಕ್ ಕಟ್ ಮಾಡಿಕೊಂಡಿದ್ದರು. ಅವರೇ ಜಪಾನಿನ ಜೀರೋಮನ್ ಕಿಮೂರ. ಬದುಕಿದ್ದ ವ್ಯಕ್ತಿಗಳಲ್ಲಿ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೆ ದಾಖಲಾಗಿದ್ದಾರೆ.

ಆದರೆ ಅವರೊಬ್ಬರಿದ್ದರು : ಫ್ರಾನ್ಸ್ ನ ಲೂಯಿಸ್ ಕಾಲ್ಮೆಂಟ್ ! ಆತ 1997 ರಲ್ಲಿ ಸಾಯುವ ಮೊದಲು ಬರೋಬ್ಬರಿ 122 ಸಂವತ್ಸರಗಳ ತುಂಬು ಜೀವನ ನಡೆಸಿದ್ದರು.

  • ಜಪಾನ್ : 83.98 ವರ್ಷ ( ಅತ್ಯಧಿಕ )
  • ಅಮೆರಿಕಾ : 78.69 ವರ್ಷ
  • ಚೀನಾ : 76.25 ವರ್ಷ
  • ಭಾರತ : 68.56 ವರ್ಷ
  • ನೈಜೀರಿಯಾ : 54 ವರ್ಷ
  • ಮಧ್ಯ ಆಫ್ರಿಕಾ : 53 ವರ್ಷ
  • ಸಿಯೆರ ಲಿಯೋನ್ : 52 ವರ್ಷ ( ಅತ್ಯ೦ತ ಕಮ್ಮಿ )

ಎಲ್ಲ ಆದ ಮೇಲೆ ಒಂದು ದೇಶದ ಜೀವನಾವಧಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದೇ ಇದೆ. ಯೆಸ್, ಇಟ್ಸ್ ಪಾಕಿಸ್ತಾನ್ ! ಪಾಕಿಸ್ತಾನ್ ನ ಜನರ ಸರಾಸರಿ ಆಯಸ್ಸು 66.48 ವರ್ಷಗಳು !!

Leave A Reply

Your email address will not be published.