ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ
ಸುಳ್ಯ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ.17ರ ವರೆಗೆ ನಡೆಯಲಿದೆ. ಫೆ.13 ರಂದು ಉಗ್ರಾಣ ಮುಹೂರ್ತ, ತಂತ್ರಿಗಳ ಆಗಮನ,ಸ್ವಾಗತ, ಪ್ರಾರ್ಥನೆ, ದೀಪಾರಾಧನೆ ಯ ಬಳಿಕ ಧ್ವಜಾರೋಹಣ, ಬಯನ ಬಲಿ ,ರಾತ್ರಿ ಪೂಜೆ,ನೃತ್ಯ ಬಲಿ ನಡೆಯಿತು.
ಫೆ.14 ರಂದು ಬೆಳಿಗ್ಗೆ ಗಣಪತಿ ಹೋಮ,ಉಷಾ ಪೂಜೆ, ಶಿವೇಲಿ, ನವಕ ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ,ಶಿವೇಲಿ,ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದಿಂದ ದಾಸ ಭಕ್ತಿ ಗಾನಾಮೃತ ನಡೆಯಿತು. ರಾತ್ರಿ ಶಿವೇಲಿ,ದರ್ಶನ ಬಲಿ ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.
ಫೆ.15ರಂದು ಬೆಳಿಗ್ಗೆ ಗಣಪತಿ ಹೋಮ,ಉಷಾ ಪೂಜೆ,ಶಿವೇಲಿ ನವಕ ಕಲಶಾಭಿಷೇಕ,ಮದ್ಯಾಹ್ನ ಮಹಾಪೂಜೆ,ಶಿವೇಲಿ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಅರ್ಚಕ ಉದಯಕುಮಾರ್ ಕೆ.ಟಿ. ಪೂಜಾಕಾರ್ಯ ನೆರವೇರಿಸಿದರು.
ಸಂಜೆ ಗಂಟೆ 5.30 ಕ್ಕೆ ತಂತ್ರಿಗಳ ಆಗಮನ, ಸ್ವಾಗತ,ಪ್ರಾರ್ಥನೆ,ದೀಪಾರಾಧನೆ ನಡೆಯಿತು. ರಾತ್ರಿ ಗಂಟೆ 7.00 ಕ್ಕೆ ಧ್ವಜಾರೋಹಣ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ,ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ವಿಠಲದಾಸ್ ಎನ್.ಎಸ್.ಡಿ, ಜಯರಾಮ ಉಮಿಕ್ಕಳ,ಜನಾರ್ಧನ ಗೌರಿಹೊಳೆ,ನಾಗೇಶ್ ಕುಲಾಲ್ ತಡಗಜೆ,ಗುಣವತಿ ಶೆಟ್ಟಿ ಮಂಡೆಪು,ಶಶಿಕಲಾ ರೈ ಚಾವಡಿಬಾಗಿಲು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು. ಸಮಿತಿ ಸದಸ್ಯರು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.