ಎಡಮಂಗಲ ಜಾತ್ರೆ : ಶ್ರೀ ಪಂಚಲಿಂಗೇಶ್ವರ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ

ಎಡಮಂಗಲ ಜಾತ್ರೆ : ಶ್ರೀ ಪಂಚಲಿಂಗೇಶ್ವರ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ

ಕಾಣಿಯೂರು : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.13ರಂದು ಜಾತ್ರೋತ್ಸವ ಆರಂಭವಾಗಿದ್ದು ಫೆ. 19 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ೫ ದಿನಗಳ ಉತ್ಸವಾದಿಗಳು ನಡೆಯಲಿದೆ. ಫೆ.13 ರಂದು ರಾತ್ರಿ ಧ್ವಜಾರೋಹಣ ,ಬಲಿಹೊರಟು ಉತ್ಸವ ,ಶ್ರೀ ರಂಗಪೂಜೆ ,ಮಹಾಪೂಜೆ ,ಪ್ರಸಾದ ವಿತರಣೆ ನಡೆಯಿತು

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಫೆ.14 ರಂದು ರಾತ್ರಿ ಬಲಿ ಹೊರಟು ಉತ್ಸವ ,ಹೊಸಮಜಲು ಕಟ್ಟೆಪೂಜೆ .ಭೂತ ಬಲಿ ,ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ದೈವದ ಓಲೆ ಸವಾರಿ ಯ ಬಳಿಕ ರಾತ್ರಿ ಶ್ರೀ ನೇಲ್ಯಾರು ನೇಮ ಹಾಗೂ ಉಳ್ಳಾಲ್ತಿ ನೇಮ ನಡೆಯಿತು.ಫೆ.15ರಂದು ಬೆಳಗ್ಗೆ ಬಲಿ ಹೊರಟು ಉತ್ಸವ ,ಶ್ರೀ ದೇವರ ದರ್ಶನ ಬಲಿ ,ಬಟ್ಟಲು ಕಾಣಿಕೆ ,ಮಹಾ ಪೂಜೆ ನಡೆಯಿತು.

ಫೆ.16 ಬೆಳಗ್ಗೆ ಬಲಿ ಹೂರಟು ದೇವರ ಉತ್ಸವ ಬಲಿ,ಮಹಾರಥೋತ್ಸವ ,ಪಾಟಾಳಿ ಕಟ್ಟೆ ಪೂಜೆ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆ ಪೂಜೆ ನಂತರ ಮರೋಳಿ ಶ್ರೀ ಶಿರಾಡಿ ದೈವ ಮತ್ತು ಉದ್ರಾಂಡಿ ದೈವಗಳ ಓಲೆಸವಾರಿ ,ಮಹಾಪೂಜೆ ,ಪ್ರಸಾದ ವಿತರಣೆ,ಶ್ರೀ ಭೂತ ಬಲಿ ಮತ್ತು ಶ್ರೀ ದೇವರ ಶಯನೋತ್ಸವ ನಡೆಯಲಿದೆ.

ಫೆ.17 ರಂದು ಬೆಳಗ್ಗೆ ಕವಾಟೋದ್ಘಾಟನೆ ತೈಲಾಭಿಷೇಕ ,ಪಂಚಾಮೃತಾಭಿಷೇಕ ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ ಮಿತ್ತೂರು ನಾಯರ್ ದೈವದ ನೇಮ ನಡೆಯಲಿದೆ.ರಾತ್ರಿ ಶ್ರೀದೇವರ ಉತ್ಸವ, ಕುಮಾರಧಾರ ಭಂಡಾರಗಯದಲ್ಲಿ ಅವಭೃತ ಸ್ನಾನ ಧ್ವಜಾವರೋಹಣ ನಡೆಯಲಿದೆ.

ಫೆ.18 ರಂದು ಮಹಾಪೂಜೆ ,ಮಂತ್ರಾಕ್ಷತೆ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.ಫೆ.19ರಂದು ಬೆಳಗ್ಗೆ ಮರೋಳಿ ಶಿರಾಡಿ ರಾಜನ್ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೊಜೆ ನಡೆಯಲಿದೆ

Leave a Reply

error: Content is protected !!
Scroll to Top
%d bloggers like this: