ಶಾಂತಿಗೋಡು | ಕೆರೆಗೆ ಬಿದ್ದು ಸಾವು | ಕೆರೆಗೆ ಪಂಪ್ ಇಳಿಸುವ ವೇಳೆ ಅವಘಡ ನಡೆದ ಶಂಕೆ

ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕ ಕಾಯರಪ್ಪು ತೋಟದ ಕೆರೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಫೆ. 12 ರಂದು ಬೆಳಕಿಗೆ ಬಂದಿದ್ದು, ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು ಕೆರೆಗೆ ಪಂಪ್‌ನ ಪೈಪ್ ಇಳಿಸುವ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಶಾಂತಿಗೋಡು ಗ್ರಾಮದ ದಿ.ಬಾಬು ನಾಯ್ಕ ಎಂಬವರ ಪುತ್ರ ಅವಿವಾಹಿತ ವಿಶ್ವನಾಥ ನಾಯ್ಕ(39 ವ)ರವರು ಕೆರೆಗೆ ಬಿದ್ದು ಮೃತಪಟ್ಟವರು. ಅವರು ತೋಟದದಲ್ಲಿರುವ ಸುರಂಗದಂತ್ತಿರುವ ಕೆರೆ ಬಳಿ ಇದ್ದ ಪಂಪ್‌ನಿಂದ ಕೆರೆಗೆ ಪೈಪ್ ಇಳಿಸುವ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರು ಕಾಲು ಜಾರಿ ಕೆರೆಗೆ ಬಿದ್ದರಬಹುದು ಎಂದು ಸಂಶಯಿಸಲಾಗಿದೆ.

ಫೆ. 12 ರಂದು ಆನಡ್ಕ ವ್ಯಾಪ್ತಿಯ ಮೆಸ್ಕಾಂ ಪವರ್‌ಮ್ಯಾನ್ ಅವರು ಮನೆಗೆ ಬಂದಾಗ ಮನೆ ಪರಿಸರದಲ್ಲಿ ದುರ್ವಾಸನೆ ಬರುತ್ತಿರುವುದುನ್ನು ಗಮನಿಸಿ ಕೆರೆಯನ್ನು ನೋಡಿದಾಗ ವಿಶ್ವನಾಥ ನಾಯ್ಕ ಅವರ ಮೃತದೇಹ ಪತ್ತೆಯಾಗಿದೆ.

ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಅಗ್ನಿಶಾಮಕ ದಳ, ಪುತ್ತೂರು ನಗರ ಠಾಣೆಯ ಪೊಲೀಸರು ಮತ್ತು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರು ಮೃತ ದೇಹವನ್ನು ಮೇಲಕ್ಕೆ ಎತ್ತಿದ್ದಾರೆ.

ಮೃತ ದೇಹವನ್ನು ಪುತ್ತೂರು ಸರಕಾರಿ ಅಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ. ಮೃತರ ಸಹೋದರ ರೋಹಿತಾಕ್ಷ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಸಿಗೆ ಶುರುವಾಗಿದ್ದು ಜನರು ನೀರು ತರಲು, ತೋಟಕ್ಕೆ ನೀರು ಹಾಕಲು, ಪಂಪ್ ಗೆ ನೀರು ತುಂಬಿಸಲು ಪದೇ ಪದೇ ಕೆರೆ ಕಟ್ಟೆಗಳಿಗೆ ಹೋಗುತ್ತಿರುವುದು ಸಾಮಾನ್ಯವಾಗುತ್ತಿದೆ. ರಾತ್ರಿಯ ಹೊತ್ತು ತೋಟದ ಕಡೆ ಹೋದಾಗ ಜನರು ಜಾಗ್ರತೆ ವಹಿಸಬೇಕು. ಕೆರೆಗೆ ಇಳಿಯುವ ಮೊದಲು ಇತರನ್ನು ಸಹಾಯಕ್ಕೆ ತೆಗೆದುಕೊಳ್ಳಿ.

Leave A Reply

Your email address will not be published.