ಸುಳ್ಯ-ಸುಬ್ರಹ್ಮಣ್ಯ ಅಪ್ರಾಪ್ತ ಬಾಲಕಿಯ ಗರ್ಭಕ್ಕೆ ಕಾರಣರಾದ ನಾಲ್ವರು ಆರೋಪಿಗಳ ಬಂಧನ

ಇತ್ತೀಚೆಗೆ ಸುಳ್ಯದಲ್ಲಿ ಅಪ್ರಾಪ್ತ ಬಾಲಕಿ ಗರ್ಭ ಧರಿಸಿ ಆಸ್ಪತ್ರೆ ಸೇರಿದ ಸುದ್ದಿಯನ್ನು ನಾವು ವರದಿ ಮಾಡಿ ದ್ದೆವು.

ಸುಬ್ರಹ್ಮಣ್ಯದ ಈ ಹದಿನೇಳು ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಮಾಡಿ ಆಕೆಗೆ ಗರ್ಭ ಕಟ್ಟಿಕೊಳ್ಳದಂತೆ ಹಲವು ಮಾತ್ರೆಗಳನ್ನು ಆರೋಪಿಗಳು ಆಕೆಗೆ ನೀಡಿದ್ದರು. ಇದರಿಂದಾಗಿ ಆಕೆ ತೀವ್ರವಾಗಿ ರಕ್ತಸ್ರಾವಕ್ಕೆ ಈಡಾದಾಗ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು.

ಆಸ್ಪತ್ರೆಯಲ್ಲಿ ನಡೆದ ಪ್ರಾಥಮಿಕ ತನಿಖೆಯ ಪರಿಣಾಮವಾಗಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು.
ಈಗ ಅತ್ಯಾಚಾರ ಪ್ರಕರಣದ ಆರೋಪಿಗಳಾದ ದುರ್ಗಾಪ್ರಸಾದ್, ಚಂದ್ರಶೇಖರ್, ಸಂಕೇತ್ ಮತ್ತು ಅಶೋಕ್ ಎಂಬ ಈ ನಾಲ್ವರನ್ನು ಬಂಧಿಸಲಾಗಿದೆ.

ಅಪ್ರಾಪ್ತ ಬಾಲಕಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾಳೆ.

Leave A Reply