ನರಿಮೊಗರು ಸಾಂದೀಪನಿಯಲ್ಲಿ ಚಿನ್ನದ ಹುಡುಗಿ ಸಿಂಧೂರ ಸರಸ್ವತಿ ಗೆ ಅಭಿನಂದನೆ

ನರಿಮೊಗರು . ಫೆ. 11. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2019ನೇ ಸಾಲಿನ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಹಾಗು ಆರು ಚಿನ್ನದ ಪದಕಗಳನ್ನು ಪಡೆದ ಕು. ಸಿಂಧೂರ ಸರಸ್ವತಿ ಇವರನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಇವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ ಆಚಾರ್ ಹಿಂದಾರ್, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಹರೀಶ್ ಪುತ್ತೂರಾಯ , ಶ್ರೀ ಪ್ರಸನ್ನ ಕುಮಾರ್ ಎನ್. ಭಟ್, ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಜಯಮಾಲಾ ವಿ.ಎನ್. ಸನ್ಮಾನ ಸ್ವೀಕರಿಸಿದ ಪ್ರತಿಭಾನ್ವಿತೆಯ ತಂದೆ ಶ್ರೀ ಮುರಳೀಧರ ಭಟ್ ಬಂಗಾರಡ್ಕ ಹಾಗು ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

Leave a Reply

error: Content is protected !!
Scroll to Top
%d bloggers like this: