ಸವಣೂರು: ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ,ಮಾಹಿತಿ ಕಾರ್ಯಗಾರ

ಸವಣೂರು: ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ,ಮಾಹಿತಿ ಕಾರ್ಯಗಾರ

ಉದ್ಘಾಟನೆ

ಸವಣೂರು: ಸವಣೂರು ಗ್ರಾಮ ಪಂಚಾಯತ್ ನ ಕುಮಾರದಾರ ಸಭಾಂಗಣದಲ್ಲಿ ಪಂಚಾಯತ್ ರಾಜ್ ಸಂಸ್ಥೆ-ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆ ದೃಷ್ಟಿಯಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಗ್ರಾ.ಪಂ.ಸದಸ್ಯರಿಗೆ ಒಂದು ದಿನದ ಮುಖಾಮುಖಿ ತರಬೇತಿ ಕಾರ್ಯಕ್ರಮ ಫೆ.8ರಂದು ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ ಅವರು ಉದ್ಘಾಟಿಸಿ,ಗ್ರಾ.ಪಂ ಸಾರ್ವಜನಿಕರೊಂದಿಗೆ ಬೆರೆತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಇಂತಹ ತರಬೇತಿ ಕಾರ್ಯಗಳು ಪೂರಕ ಎಂದರು. ತಾ.ಪಂ.ಸದಸ್ಯೆ ರಾಜೇಶ್ವರಿ ಕನ್ಯಾಮಂಗಲ ಸಂಧರ್ಬೋಚಿತವಾಗಿ ಮಾತನಾಡಿದರು. ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನ ರಾಜ್ಯ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಬಡಗನ್ನೂರು ತರಬೇತಿ ಕಾರ್ಯಗಾರ ನಡೆಸಿಕೊಟ್ಟರು. ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಗ್ರಾ.ಪಂ.ಸದಸ್ಯರಾದ ಅಬ್ದುಲ್ ರಜಾಕ್ ಕೆನರಾ,ಚೆನ್ನು ಮಾಂತೂರು, ಸತೀಶ್ ಅಂಗಡಿಮೂಲೆ, ಸುಧಾ ನಿಡ್ವಣ್ಣಾಯ,ಮೀನಾಕ್ಷಿ ಬಂಬಿಲ,ದಿವಾಕರ ಬಂಗೇರ ಬೊಳಿಯಾಲ,ವೇದಾವತಿ ಅಂಜಯ ಮೊದಲಾದವರಿದ್ದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ ಸ್ವಾಗತಿಸಿ, ಲೆಕ್ಕ ಸಹಾಯಕ ಎ.ಮನ್ಮಥ ವಂದಿಸಿದರು.ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ಜಯಾ ಕೆ.,ಜಯ ಶ್ರೀ, ವಿಶ್ವಜಿತ್ ಸಹಕರಿಸಿದರು.

Leave A Reply

Your email address will not be published.