ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ : ಅವಿಭಜಿತ ದಕ್ಷಿಣಕನ್ನಡ ಮುಂಚೂಣಿಯಲ್ಲಿ

ಕೋಲಾರನಗರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ 2ನೇ ದಿನ ವಿವಿಧ 17 ಸ್ಪರ್ಧೆಗಳ ವಿಜೇತರಾದವರ ಹೆಸರು ಪ್ರಕಟಿಸಲಾಯಿತು. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಅವಿಭಜಿತ ದಕ್ಷಿಣಕನ್ನಡ 9 ಪಂದ್ಯಗಳಲ್ಲಿ ಮುಂಚೂಣಿ ಯನ್ನು ಕಾಯ್ದುಕೊಂಡಿದೆ.

ಕನ್ನಡ ಭಾಷಣ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆಯ ದೀಪಾ ಕಾಳಗಿ ಪ್ರಥಮ, ಚಿಕ್ಕಮಗಳೂರು ಜಿಲ್ಲೆಯ ಯು.ಕೆ.ಸುಶ್ಮಿತಾ ದ್ವಿತೀಯ ಹಾಗೂ ರಾಮನಗರ ಜಿಲ್ಲೆಯ ಬಿ.ಎಸ್.ಅರ್ಚನಾ ತೃತೀಯ ಸ್ಥಾನ ಪಡೆದರು.

ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಧಾರವಾಡ ಜಿಲೆಯ ಶಾರದಾ ಶಿಗ್ಗಾವಿ ಪ್ರಥಮ, ಉಡುಪಿ ಜಿಲ್ಲೆಯ ಲೆಜ್ವಿತಾ ರೆಬೀಕಾ ಡಿಸೋಜಾ ದ್ವಿತೀಯ ಹಾಗೂ ಕೊಡಗು ಜಿಲ್ಲೆಯ ದಿಶಾ ತಂಗಮ್ಮ ತೃತೀಯ ಸ್ಥಾನ ಗಳಿಸಿದರು. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಜನನಿ ಪ್ರಥಮ, ಕೊಪ್ಪಳ ಜಿಲ್ಲೆಯ ರಜ್ಮಾ ದ್ವಿತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪವನ್ ಗುರುರಾಜ್ ಕುಲಕರ್ಣಿ ತೃತೀಯ ಸ್ಥಾನ ,ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಕೆ.ಕಾರ್ತಿಕ್ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಯ ದೀಪಶ್ರೀ ದ್ವಿತೀಯ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಶ್ರೇಯಾ ಗಣಪತಿ ಹೆಗಡೆ ತೃತೀಯ ಸ್ಥಾನ ಗಳಿಸಿದರು. ಉರ್ದು ಭಾಷಣ ಸ್ಪರ್ಧೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಖುಂದ ಮೀರ್‍ಮೋಮಿನ್ ಪ್ರಥಮ, ಹಾವೇರಿ ಜಿಲ್ಲೆಯ ಮಿಸ್ಬಾ ಬಲ್ಲಾರಿ ದ್ವಿತೀಯ ಮತ್ತು ಬಾಗಲಕೋಟೆ ಜಿಲ್ಲೆಯ ಝಿಯಾ ಮಾಕಂದಾರ್ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಮರಾಠಿ ಭಾಷಣ ಸ್ಪರ್ಧೆಯಲ್ಲಿ ಚಿಕ್ಕೋಡಿಯ ಶ್ವೇತಾ ಮಾಲಿ ಪ್ರಥಮ, ಶಿರಸಿ ಜಿಲ್ಲೆಯ ವಿಶಾಖಾ ವಿಜಯ್ ದ್ವಿತೀಯ ಮತ್ತು ಬೆಳಗಾವಿ ಜಿಲ್ಲೆಯ ರೇವತಿ ಪಾಟೀಲ್ ತೃತೀಯ ಸ್ಥಾನ ಪಡೆದರು. ತೆಲುಗು ಭಾಷಣ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೋಹಿತ್ ವಶಿಷ್ಠ ಪ್ರಥಮ, ರಾಯಚೂರು ಜಿಲ್ಲೆಯ ದಿವಿತಾ ದ್ವಿತೀಯ ಹಾಗೂ ಬಳ್ಳಾರಿ ಜಿಲ್ಲೆಯ ಜಿ.ಮಹಾಲಕ್ಷ್ಮೀ ತೃತೀಯ ಸ್ಥಾನ ಗಳಿಸಿದರು. ತಮಿಳು ಭಾಷಣ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರಣಿಶ್ರೀ ಪ್ರಥಮ, ಚಾಮರಾಜನಗರ ಜಿಲ್ಲೆಯ ಡಿ.ವಿ.ರಕ್ಷಿತ್ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಆರ್.ಸಾಧನಾ ತೃತೀಯ ಸ್ಥಾನ ಗಳಿಸಿದರು.

ತುಳು ಭಾಷಣ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತಶ್ರೀ ಪ್ರಥಮ, ಉಡುಪಿ ಜಿಲ್ಲೆಯ ಯಶಸ್ವಿನಿ ದ್ವಿತೀಯ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶ್ರೇಯಾ ಕೊಠಾರಿ ತೃತೀಯ ಸ್ಥಾನ ಪಡೆದಿದ್ದಾರೆ. ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀಕ್ಷಾ ಮಹೇಶ್ ಪ್ರಥಮ, ಉಡುಪಿ ಜಿಲ್ಲೆಯ ಸತ್ಯೇಂದ್ರ ಭಟ್ ದ್ವಿತೀಯ ಹಾಗೂ ಶಿರಸಿ ಜಿಲ್ಲೆಯ ಸಾಕ್ಷಿ ದೀಪಕ್ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.

ಧಾರ್ಮಿಕ ಪಠಣ: ಧಾರವಾಡ ಜಿಲ್ಲೆಯ ದೀಪಾ ಕೆ.ಹೆಗಡೆ ಪ್ರಥಮ, ಕೋಲಾರ ಜಿಲ್ಲೆಯ ಚಿನ್ಮಯ ವಿದ್ಯಾಲಯದ ಅಶ್ರಿತ್‌ ರಾವ್ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ನಂದಿತಾ ಸುರೇಶ್ ಭಟ್ ತೃತೀಯ ಸ್ಥಾನ ಗಳಿಸಿದ್ದಾರೆ. ಅರೇಬಿಕ್ ಧಾರ್ಮಿಕ ಪಠಣದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಮಹಮ್ಮದ್ ಇನಾಮುಲ್ ಹಸನ್ ಪ್ರಥಮ, ಉಡುಪಿ ಜಿಲ್ಲೆಯ ಝಿಯಾ ಮೀವೀಶ್ ದ್ವಿತೀಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಸಯ್ಯದ್‍ ಉರ್ ರೆಹಮಾನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಜನಪದ ಗೀತೆ: ಚಿಕ್ಕಬಳ್ಳಾಪುರ ಜಲ್ಲೆಯ ಬಿ.ಜೆ.ಸೈಪುಲ್ಲಾ ಪ್ರಥಮ, ಧಾರವಾಡ ಜಿಲ್ಲೆಯ ಲಕ್ಷ್ಮಿರಾಯಕೊಪ್ಪ ದ್ವಿತೀಯ ಹಾಗೂ ರಾಮನಗರ ಜಿಲ್ಲೆಯ ಕೀರ್ತಿ ನಾಯಕ್ ತೃತೀಯ ಸ್ಥಾನ ಗಳಿಸಿದ್ದಾರೆ. ಆಶುಭಾಷಣ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೆ.ಪಿ.ಮನೋಜ್‌ಕುಮಾರ್‌ ಪ್ರಥಮ, ಉಡುಪಿ ಜಿಲ್ಲೆಯ ಸಾಯಿಗಣೇಶ್ ದ್ವಿತೀಯ ಹಾಗೂ ಶಿರಸಿಯ ಸಹನಾ ರಘುಪತಿಹೆಗಡೆ ತೃತೀಯ ಸ್ಥಾನ ಪಡೆದಿದ್ದಾರೆ.

ಮಿಮಿಕ್ರಿ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಶಾಕ್‌ಕುಮಾರ್ ಪ್ರಥಮ, ಕೋಲಾರ ಜಿಲ್ಲೆಯ ಸಿ.ಅನುಪ್ರಿಯಾ ದ್ವಿತೀಯ ಹಾಗೂ ರಾಮನಗರ ಜಿಲ್ಲೆಯ ಶಿವಪ್ರಸಾದ್ ಬಿರಾದಾರ್ ತೃತೀಯ ಸ್ಥಾನ ಗಳಿಸಿದ್ದಾರೆ.

ರಂಗೋಲಿ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲೆಯ ಡಿ.ಎಸ್.ಐಶ್ವರ್ಯ ಪ್ರಥಮ, ಚಿತ್ರದುರ್ಗ ಜಿಲ್ಲೆಯ ಎಸ್.ರಕ್ಷಿತಾ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೇಘಾ ಅಶೋಕ್‌ ರಾಯ್ಕರ್‌ ತೃತೀಯ ಸ್ಥಾನ ಪಡೆದಿದ್ದಾರೆ. ಗಝಲ್‌ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೀಪ್ತಿ ಪ್ರಭು ಪ್ರಥಮ, ಶಿರಸಿ ಜಿಲ್ಲೆಯ ಸಿಮ್ರಾನ್ ಶೇಕ್ ದ್ವಿತೀಯ ಹಾಗೂ ಚಾಮರಾಜನಗರ ಜಿಲ್ಲೆಯ ಮೊಹಮ್ಮದ್‌ ಮಾಜ್ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: