ಭಜನಾ ಸತ್ಸಂಗ ಸಮಾವೇಶದಲ್ಲಿ ಶೈಕ್ಷಣಿಕ ಸ್ಟಾಲ್ ಉದ್ಘಾಟನೆ

Share the Article
ಶಾಸಕರಿಂದ ಉದ್ಘಾಟನೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ನಡೆಯುತ್ತಿರುವ ಭಜನಾ ಸತ್ಸಂಗ ಸಮಾವೇಶ ದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಮಾಹಿತಿಯನ್ನು ಒಳಗೊಂಡ ಶೈಕ್ಷಣಿಕ ಸ್ಟಾಲ್ ನ್ನು ಪುತ್ತೂರು ಶಾಸಕರಾದ ಮಾನ್ಯಸಂಜೀವ ಮಠಂದೂರು ಇವರು ಉದ್ಘಾಟಿಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಜಿ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸೆಲ್ವಮಣಿ , ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು. ಗಣ್ಯರಾದ ಅರುಣ್ ಕುಮಾರ್ ಪುತ್ತಿಲ, ಸುಳ್ಯ ಯೋಜನಾಧಿಕಾರಿ ಸಂತೋಷ ಕುಮಾರ್ ರೈ , ಇಂಜಿನಿಯರ್ ಎ.ವಿ.ನಾರಾಯಣ ಸೇರಿದಂತೆ ಹಲವು ಪ್ರಮುಖರು ಭೇಟಿ ನೀಡಿದರು.

ಈ ಸ್ಟಾಲ್ ನ ಪರಿಕಲ್ಪನೆಯನ್ಬು ಶಿಕ್ಷಕ ತಾರಾನಾಥ ಸವಣೂರು ಮತ್ತು ಬಿ. ಆರ್ ಪಿ. ದಿನೇಶ್ ಮಾಚಾರ್ ಮಾಡಿದ್ದರು. ಶಿಕ್ಷಕರಾದ ಚರಣ್ ಕುಮಾರ್ ,ಶ್ರೀಕಾಂತ್, ಸಿ ಆರ್ ಪಿ ಶಾಲಿನಿ, ಸಿ ಆರ್ ಪಿ ಶಿವಕುಮಾರ್ ನಿರ್ವಹಣೆ ಮಾಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ಸಿ ಮತ್ತು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಇವರು ಮಾರ್ಗದರ್ಶನ ಮಾಡಿದ್ದರು

Leave A Reply

Your email address will not be published.