ಫೆ. 13-19 :ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

ಕಡಬ : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ-13 ರಿಂದ 19 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 5 ದಿನಗಳ ಉತ್ಸವಾದಿಗಳು ನಡೆಯಲಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಫೆ.13 ರಂದು ರಾತ್ರಿ ಧ್ವಜಾರೋಹಣ ,ಬಲಿಹೊರಟು ಉತ್ಸವ ,ಶ್ರೀ ರಂಗಪೊಜೆ ,ಮಹಾಪೊಜೆ ,ಪ್ರಸಾದ ವಿತರಣೆ ನಡೆಯಲಿದೆ ಫೆ-14 ರಂದು ರಾತ್ರಿ ಬಲಿ ಹೊರಟು ಉತ್ಸವ ,ಹೊಸಮಜಲು ಕಟ್ಟೆಪೊಜೆ .ಭೂತ ಬಲಿ ,ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ದೈವದ ಜಾಲೆ ಸವಾರಿ .ಶ್ರೀ ನೇಲ್ಕಾರು ನೇಮ ಹಾಗೂ ಉಳ್ಳಾಲ್ತಿ ನೇಮ ಸಡೆಯಲಿದೆ . ಫ-15 ರಂದು ಬೆಳಗ್ಗೆ ಬಲಿ ಹೂರಟು ಉತ್ಸವ ,ಶ್ರೀ ದೇವರ ದರ್ಶನ ಬಲಿ ,ಬಟ್ಟಲು ಕಾಣಿಕೆ ,ಮಹಾ ಪೂಜೆ ನಡೆಯಲಿದೆ .


Ad Widget

ಫೆ-16 ಬೆಳಗ್ಗೆ ಬಲಿ ಹೂರಟು ದೇವರ ಉತ್ಸವ ಬಲಿಯೊಂದಿಗೆ ಕೋಲಾಟ ,ಮಹಾರಥೋತ್ಸವ ಮರೋಳಿ ಶ್ರೀ ಶಿರಾಡಿ ದೈವ ಮತ್ತು ಉದ್ರಾಂಡಿ ದ್ಯವಗಳ ಓಲೆಸವಾರಿ ,ಶ್ರೀ ಭೂತ ಬಲಿ ಮತ್ತು ಶ್ರೀ ದೇವರ ಶಯನೋತ್ಸವ ನಡೆಯಲಿದೆ . ಫೆ-17 ರಂದು ಬೆಳಗ್ಗೆ ಕವಾಟೋತ್ಘಾಟನೆ ತೈಲಾಭಿಷೇಕ ,ಪಂಚಾಮೃತಾಭಿಷೇಕ ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ ಮಿತ್ತುರು ದೈವದ ನೇಮ ನಡೆಯಲಿದೆ ರಾತ್ತಿ ಬಲಿ ಹೊರಡು ಕಟ್ಟೆ ಪೊಜೆ ,ಅವಭೃತ ಸ್ನಾನ ಧ್ವಜಾವರೋಹಣ ನಡೆಯಲಿದೆ. ಫೆ-18 ರಂದು ಬೆಳಗ್ಗೆ ಗಣಪತಿ ಹವನ ,ಕಲಶ ಪೊಜೆ ,ರುದ್ರಾಭಿಷೇಕ ,ಕಲಶಾಭಿಷೇಕ ,ಮಹಾಪೊಜೆ ,ಮಂತ್ರಾಕ್ಷತೆ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ಫೆ-19ರಂದು ಬೆಳಗ್ಗೆ ಮರೋಳಿ ಶಿರಾಡಿ ರಾಜನ್ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೊಜೆ ನಡೆಯಲಿದೆ . ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ-15 ರಂದು ಯಕ್ಷಗಾನ ಬಯಲಾಟ ನಡೆಯಲಿದೆ.

error: Content is protected !!
Scroll to Top
%d bloggers like this: