ಭಜನಾ ಸತ್ಸಂಗ ಸಮಾವೇಶ–2020ಗೆ ಭಾಗವಹಿಸುವ ಭಜಕರಿಗೆ ಹೀಗಿದೆ ಸೂಚನೆ

ಪುತ್ತೂರು: ಫೆ.8ರಂದು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯುವ ಭಜನಾ ಸತ್ಸಂಗ ಸಮಾವೇಶ–2020ಗೆ ಭಾಗವಹಿಸುವ ಭಜಕರಿಗೆ ಹೀಗಿದೆ ಸೂಚನೆ

*(1) ಭಜನಾ ಮಂಡಳಿಯವರು ಬೆಳಿಗ್ಗೆ 9.00 ಗಂಟೆಯೊಳಗೆ ನೊಂದಾವಣೆ ಮಾಡಿಕೊಳ್ಳಬೇಕಾಗಿದೆ ವಿನಂತಿ

*(2) ಬೆಳಿಗ್ಗೆ ಬಂದ ಎಲ್ಲಾ ಭಕ್ತಾದಿಗಳಿಗೆ ಫಲಾಹಾರ ವ್ಯವಸ್ಥೆ ಇದೆ.

*(3) ಎಲ್ಲಾರೂ ಸಮಾರೋಪದ ತನಕ ಉಪಸ್ಥಿತರಿರಬೇಕಾಗಿ ವಿನಂತಿ.

*(4) ಭಾಗವಹಿಸುವ ಎಲ್ಲಾ ಪುರುಷರು ಬಿಳಿ ಅಂಗಿ ಮತ್ತು ಬಿಳಿ ಪಂಚೆ ತೊಟ್ಟು ಬನ್ನಿ.

*(5) ಪ್ರತಿಯೊಬ್ಬರೂ ಕೈಯಲ್ಲಿ ತಾಳ ಇರಲಿ

*(6) ಸಾಧ್ಯವಿದ್ದಷ್ಟು ಬಿಲ್ವ ಪತ್ರೆ ತನ್ನಿ

*(7) ರಥಬೀದಿಯಲ್ಲಿ ಸ್ವಚ್ಚತೆ ಕಾಪಾಡಿ

*(8) ಬೆಲೆ ಬಾಳುವ ವಸ್ತುಗಳನ್ನು ತರಬೇಡಿ

*(9) ವಾಹನ ‌ಚಲಾವಣೆ ಎಚ್ಚರಿಕೆಯಿಂದ ಮಾಡಿ

*(10) ಪಾರ್ಕಿಂಗ್ ಜಾಗದಲ್ಲಿ‌ ವಾಹನ ನಿಲುಗಡೆ ಮಾಡಿ

*(11) ಚಪ್ಪಲಿಗಳನ್ನು ನಿಗದಿತ ಸ್ಥಳದಲ್ಲಿ ಇಡಿ

*(12) ಎಲ್ಲಂದರಲ್ಲಿ ಉಗುಳುವುದನ್ನು ನಿಷೇಧಿಸಿ

*(13) ಭಕ್ತಾದಿಗಳ ಸಂಖ್ಯೆ ಅಧಿಕ ಇರುವುದರಿಂದ ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ

*(14) ಪ್ಲಾಸ್ಟಿಕ್ ನಿಷೇಧಿಸಿ.

*(15) ಶುದ್ಧ ಕುಡಿಯುವ ನೀರಿನ ಸರಬರಾಜು ಇದೆ . ಅದನ್ನೆ ಬಳಕೆ ಮಾಡಿ

*(16) ಊಟದ ಸಮಯ , ಮೆರವಣಿಗೆ, ಸಭಾಕಾರ್ಯಕ್ರಮ, ಶಿವ ಪಂಚಾಕ್ಷರಿ ಪಠಣ ಸಮಯದಲ್ಲಿ ಶಿಸ್ತನ್ನು ಕಾಯ್ದುಕೊಳ್ಳಿ

*(17) ಯಾವುದೇ ಸಂದರ್ಭದಲ್ಲಿ ನಿಮಗೆ ಸಹಕಾರ ನೀಡಲು ಸ್ವಯಂ ಸೇವಕರನ್ನು ಉಪಯೊಗಿಸಿಕೊಳ್ಳಿ

*(18) ಯಾವುದೆ ಮಾಹಿತಿಗಾಗಿ ದೇವಾಲಯ ಬಲ ಬದಿಯಲ್ಲಿರುವ ಕಾರ್ಯಾಲಯ ಸಂಪರ್ಕಿಸಿ.

*(19) ಸೂಚನೆಯನ್ನು ಗಮನಿಸಿ

*(20) ನಿಮ್ಮ ತಂಡದ ಜೊತೆ ಯಲ್ಲಿ ಎಲ್ಲಾರೂ ಒಟ್ಟಿಗೆ ಇದ್ದು ಇಡೀ ಕಾರ್ಯಕ್ರಮ ಶಿಸ್ತು ಬದ್ದ ವಾಗಿರಲು ಸಹಕರಿಸಿ.

*(21) ಬಂದಿರುವ ಎಲ್ಲರೂ ಸ್ವಯಂಸೇವಕರಾಗಿ ದುಡಿದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿ ಇರಲಿ ಎಲ್ಲರ ಸಹಕಾರ

Leave A Reply

Your email address will not be published.