ಶಿವಕೃಪಾ ಚಂದ್ರಹಾಸ ಆಳ್ವರಿಗೆ ಶ್ರದ್ಧಾಂಜಲಿ: ವ್ಯಾಪಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದ ಕುಂಬ್ರದ ವರ್ತಕರು

ಶಿವಕೃಪಾ ಚಂದ್ರಹಾಸ ಆಳ್ವರಿಗೆ ಶ್ರದ್ಧಾಂಜಲಿ: ವ್ಯಾಪಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದ ಕುಂಬ್ರದ ವರ್ತಕರು


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಪುತ್ತೂರು: ಫೆ.4 ರಂದು ರಾತ್ರಿ ನಿಧನರಾದ ಪರ್ಪುಂಜ ಕೊಲತ್ತಡ್ಕದ ಶಿವಕೃಪಾ ಶಾಮಯಾನ ಸರ್ವೀಸಸ್ ಮಾಲಕ, ಹಾಗೂ ಶಿವಕೃಪಾ ಆಡಿಟೋರಿಯಂ ಪಾಲುದಾರ ಚಂದ್ರಹಾಸ ಆಳ್ವ ಅವರ ಗೌರವಾರ್ಥ ಬುಧವಾರ ಕುಂಬ್ರ ಹಾಗೂ ಪರ್ಪುಂಜದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ 11 ಗಂಟೆಯಿಂದ 12 ಗಂಟೆಯವರೆಗೆ ಬಂದ್ ಮಾಡಿ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದರು.


Ad Widget

ಮೃತರ ಅಂತ್ಯಕ್ರಿಯೆಯು ಬುಧವಾರ ಮಧ್ಯಾಹ್ನ ಕಲ್ಲಡ್ಕ ಮನೆಯಲ್ಲಿ ನಡೆಯಿತು. ಸಮಾಜದ ವಿವಿಧ ಗಣ್ಯರು, ಆಳ್ವ ಅವರ ಮಿತ್ರರು ಸೇರಿದಂತೆ ನೂರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದು ಅಗಲಿದ ಬಂಧುವಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಉದ್ಯಮದ ಜತೆಗೆ ಪ್ರಗತಿಪರ ಕೃಷಿಕರಾಗಿ ಕುರಿಯದಲ್ಲಿ ವಾಸವಾಗಿದ್ದ ಆಳ್ವರು ಮೂಲತಃ ಒಳಮೊಗ್ರು ಗ್ರಾಮದ ಕಲ್ಲಡ್ಕದವರು. ಆಳ್ವರು ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡು ಜನಾನುರಾಗಿಯಾಗಿದ್ದರು.

*ಉದ್ಯಮಿ ಚಂದ್ರಹಾಸ ಆಳ್ವ ಇನ್ನಿಲ್ಲ* https://hosakannada.com/2020/02/04/shivakrupa-chandrahas-alva-no-more/

0 thoughts on “ಶಿವಕೃಪಾ ಚಂದ್ರಹಾಸ ಆಳ್ವರಿಗೆ ಶ್ರದ್ಧಾಂಜಲಿ: ವ್ಯಾಪಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದ ಕುಂಬ್ರದ ವರ್ತಕರು”

  1. Pingback: ಉದ್ಯಮಿ ಚಂದ್ರಹಾಸ ಆಳ್ವ ಶಿವಕೃಪಾ ಇನ್ನಿಲ್ಲ - ಹೊಸ ಕನ್ನಡ

error: Content is protected !!
Scroll to Top
%d bloggers like this: