ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಹಾಗೂ ಅಷ್ಟಪವಿತ್ರ ನಾಗಮಂಡಲ ಕಾರ್ಯಕ್ರಮ : ಫೆಬ್ರವರಿ 9 ರಂದು ಪುತ್ತೂರಿನಿಂದ ಹೊರೆಕಾಣಿಕೆ

ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶಾಭಿಷೇಕ ಹಾಗೂ ಅಷ್ಟಪವಿತ್ರ ನಾಗಮಂಡಲ ಕಾರ್ಯಕ್ರಮಕ್ಕೆ ಫೆಬ್ರವರಿ 9 ರಂದು ಪುತ್ತೂರಿನಿಂದ ಹೊರೆಕಾಣಿಕೆ ಸಂಗ್ರಹ ಸಮರ್ಪಣೆ ನಡೆಯಲಿದೆ.

ಮೂಡಬಿದಿರೆಯ ಕರಿಂಜೆ ಓಂ ಶ್ರೀ ಶಕ್ತಿಗುರುಮಠ ಶ್ರೀ ಜಗದ್ಗುರು ರಾಘವೇಂದ್ರ ಪೀಠದಲ್ಲಿ ಫೆಬ್ರವರಿ 9 ರಿಂದ ಫೆಬ್ರವರಿ 19 ರ ವರೆಗೆ ನಡೆಯಲಿರುವ ನೂತನ ಗರ್ಭಗುಡಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಅಷ್ಟಬಂಧ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಅಷ್ಟಪವಿತ್ರ ನಾಗಮಂಡಲ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಪುತ್ತೂರಿನ ಭಕ್ತರಿಂದ ಇದೇ ಫೆಬ್ರವರಿ ಭಾನುವಾರ 9 ರಂದು ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕಿ ಸಮರ್ಪಣೆ ನಡೆಯಲಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಬೆಳಿಗ್ಗೆ 11 ಗಂಟೆಗೆ ಉದ್ಯಮಿಗಳಾದ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಇವರಿಂದ ಉದ್ಘಾಟನೆಗೊಂಡು ಪುತ್ತೂರಿನ ಭಕ್ತರು ನೀಡಿದ ಹೊರೆಕಾಣಿಕೆಯು ಮೆರವಣಿಗೆ ಮೂಲಕ ಕರಿಂಜೆ ಕ್ಷೇತ್ರಕ್ಕೆ ಸಾಗಲಿದೆ.

ಕ್ಷೇತ್ರಕ್ಕೆ ಹೊರೆಕಾಣಿಕೆ ನೀಡಲಿಚ್ಚಿಸಲ್ಪಡುವ ಭಕ್ತರು ಪದ್ಮಶ್ರೀ ಸೋಲಾರ್ ದರ್ಬೆ ಬೈಪಾಸ್ ಇಲ್ಲಿ ನೀಡಬಹುದೆಂದು ಕರಿಂಜೆ ಬ್ರಹ್ಮಕಲಶೋತ್ಸವದ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಶ್ರೀ ಕೆದಂಬಾಡಿ ಗುತ್ತು ಸೀತಾರಾಮ ರೈಯವರು ಹಾಗೂ ಸಮಿತಿಯ ಕಾರ್ಯದರ್ಶಿ ಮುರಳಿಕೃಷ್ಣ ಹಸಂತ್ತಡ್ಕರವರು ತಿಳಿಸಿದ್ದಾರೆ.

Leave A Reply

Your email address will not be published.