ಭಜನಾ ಸತ್ಸಂಗ ಸಮಾವೇಶದ ಸಿದ್ಧತೆ :ಸಮಿತಿ ಜತೆ ಹರ್ಷ ವ್ಯಕ್ತಪಡಿಸಿದ ಡಾ. ಹೆಗ್ಗಡೆ

ಡಾ.ಹೆಗ್ಗಡೆ ಅವರೊಂದಿಗೆ ಸಮಿತಿಯವರು

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ,ಭಜನ ಸತ್ಸಂಗ ಸಮಾವೇಶ ಸಮಿತಿ 2020, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಇದರ ವತಿಯಿಂದ ಫೆ.8ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ನಡೆಯಲಿರುವ ಭಜನಾ ಸತ್ಸಂಗ ಸಮಾವೇಶ -2020,ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ,ಭಜನಾ ಸಂಕೀರ್ತನಾ ಮೆರವಣಿಗೆಯ ಹಿನ್ನೆಲೆಯಲ್ಲಿ 50 ಸಾವಿರ ಮಂದಿ ಭಜಕರು ಸೇರಿ ಪುತ್ತೂರಿನಲ್ಲಿ ಇತಿಹಾಸ ನಿರ್ಮಾಣವಾಗಲಿರುವ ‘ಭಜನಾ ಸತ್ಸಂಗ ಸಮಾವೇಶ – ಕೋಟಿ ಶಿವ ಪಂಚಾಕ್ಷರಿ ಪಠಣ’ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ಅಂತಿಮ ಹಂತದ ಸಮಾಲೋಚನೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಸಮಿತಿ ಪದಾಧಿಕಾರಿಗಳು ನಡೆಸಿದರು.

ಪೂರ್ವ ಸಿದ್ಧತೆಗಳ ಬಗ್ಗೆ ಅತ್ಯಂತ‌ ಸಂತಸ ವ್ಯಕ್ತಪಡಿಸಿರುವ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ಸಮಾವೇಶ ಅತ್ಯಂತ ಯಶಸ್ವಿಯಾಗಲಿದೆ.ದೇವತಾ ಕಾರ್ಯಗಳಿಗೆ ಎಂದೆಂದೂ ಜಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Ad Widget

Ad Widget

Ad Widget

Ad Widget

Ad Widget

Ad Widget

ಫೆ. 7 ರಂದು ಬೆಳಿಗ್ಗೆ ಧರ್ಮಾಧಿಕಾರಿಯವರನ್ನು ಸತ್ಸಂಗ ಸಮಾವೇಶ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಅಧ್ಯಕ್ಷ ಅರುಣ್ ಕುಮಾರ್‌ ಪುತ್ತಿಲ, ಆರ್ಥಿಕ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್ ಕೆ ಡಿಆರ್ ಡಿಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಎಲ್.‌ಮಂಜುನಾಥ್, ಆರ್ಥಿಕ ಸಮಿತಿಯ ರಾಜಾರಾಮ್‌ ಶೆಟ್ಟಿ ಕೋಲ್ಪೆಗುತ್ತು ಅವರು ಡಾ.ಹೆಗ್ಗಡೆ ಅವರನ್ನು ಬೇಟಿ ಮಾಡಿದ ತಂಡದಲ್ಲಿದ್ದರು.

error: Content is protected !!
Scroll to Top
%d bloggers like this: