ನೆಲ್ಯಾಡಿ ಗ್ರಾಮದ ಕೂಡುಕಟ್ಟಿನ ಶ್ರೀ ಉಳ್ಳಾಕ್ಲು ಶ್ರೀ ರಾಜನ್ ದೈವ, ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ಕ್ಷೇತ್ರ, ಕುಡ್ತಾಜೆ ಇದರ ವಾರ್ಷಿಕ ನೇಮೋತ್ಸವ : ಫೆ 9 ಮತ್ತು ಫೆ 10

ನೆಲ್ಯಾಡಿ ಗ್ರಾಮದ ಕೂಡುಕಟ್ಟಿನ ಶ್ರೀ ಉಳ್ಳಾಕ್ಲು ಶ್ರೀ ರಾಜನ್ ದೈವ, ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ಕ್ಷೇತ್ರ, ಕುಡ್ತಾಜೆ ಇದರ ವಾರ್ಷಿಕ ನೇಮೋತ್ಸವ ಇದೇ ಭಾನುವಾರ 9/2/2020 ರಿಂದ 10/02/2020 ವರೆಗೆ ನಡೆಯಲಿದೆ.

ವೇದಮೂರ್ತಿ ಶ್ರೀಧರ ನೂಜಿನ್ನಾಯ ಹಾರ್ಪಳ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.

ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾಗುವ ಗಳು ಹೋಮದಿಂದ ಕಾರ್ಯಕ್ರಮಗಳು ಮೊದಲ್ಗೊಂಡು ಆನಂತರ ನಾಗತಂಬಿಲ ಕಲಶಾಭಿಷೇಕ ತಂಬಿಲ ಮತ್ತು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಆನಂತರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಸಂಜೆ 3.30 ಕ್ಕೆ ಹುಚ್ಚೇರಿ ಮನೆಯಿಂದ ಆಭರಣ ಬರುವುದು, ಮುಹೂರ್ತ ಗೊನೆ ಕಡೆಯುವುದು ಬಂಡಾರ ಬಹು ಬರುವುದು ಬಂಡಾರ ತೆಗೆದುಕೊಂಡು ಹೋಗುವುದು ಮುಂತಾದ ಕಾರ್ಯಕ್ರಮಗಳು ನಡೆದು ಎಂಟು ಮೂವತ್ತಕ್ಕೆ ಉಳ್ಳಾಕುಲು ಮತ್ತು ಬಿರ್ಮರ್ ದೈವಗಳ ನೇಮೋತ್ಸವವು ನಡೆಯಲಿದೆ.

ಸೋಮವಾರ ಮುಂಜಾನೆ ಏಳು ಗಂಟೆಗೆ ರಾಜನ್ ದೈವ ಮತ್ತು ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಆ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮದೊಂದಿಗೆ ನೇಮೋತ್ಸವ ಕ್ಕೆ ತೆರೆಬೀಳಲಿದೆ.

Leave A Reply