ಕಲರ್ಸ್ ಕನ್ನಡ ಹಾಡು ಕರ್ನಾಟಕ ಮೆಗಾ ಅಡಿಷನ್ ನಲ್ಲಿ ಜಗದೀಶ್ ಪುತ್ತೂರು ಹಾಡಿದ ಸ್ವಾಮಿ ಕೊರಗಜ್ಜ ಹಾಡು ಸಖತ್ ವೈರಲ್ ಯುವಗಾಯಕನ ಬೆಂಬಲಿಸಿದ ಸಾಮಾಜಿಕ ಜಾಲತಾಣಿಗರು.
ಕಲರ್ಸ್ ಕನ್ನಡ ಹಾಡು ಕರ್ನಾಟಕ ಮೆಗಾ ಅಡಿಷನ್ ನಲ್ಲಿ ಜಗದೀಶ್ ಪುತ್ತೂರು ಹಾಡಿದ ಸ್ವಾಮಿ ಕೊರಗಜ್ಜ ಹಾಡು ಸಖತ್ ವೈರಲ್ :ಯುವಗಾಯಕನ ಬೆಂಬಲಿಸಿದ ಸಾಮಾಜಿಕ ಜಾಲತಾಣಿಗರು.
ಜಗದೀಶ್ ಆಚಾರ್ಯ ಪುತ್ತೂರು ಅವರ ಹೆಸರು ಕೇಳದವರು ವಿರಳ.
ತನ್ನ ವಿಶಿಷ್ಟ ಕಂಠ ಸಿರಿಯಿಂದ ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಕನ್ನಡದ ಟಿ.ವಿ.ಮಾಧ್ಯಮದಲ್ಲಿ ಒಂದಾದ ಕಲರ್ಸ್ ಕನ್ನಡ ಚಾನಲ್ ನ ಮೆಗಾ ಅಡಿಷನ್ ನಲ್ಲಿ ತುಳುನಾಡಿನ ಕಾರಣಿಕ ಶಕ್ತಿ, ಭಕ್ತರ ಪಾಲಿನ ರಕ್ಷಕ ಸ್ವಾಮಿ ಕೊರಗಜ್ಜನ ಕುರಿತಾದ ಹಾಡಿನ ತುಣುಕು ಸಖತ್ ವೈರಲ್ ಆಗಿದೆ.
ಈ ಹಾಡಿನ ತುಣುಕನ್ನು ತಮ್ಮ ಸ್ಟೇಟಸ್ ಹಾಕಿ ಜಗದೀಶ್ ಪುತ್ತೂರು ಅವರಿಗೆ ಶುಭ ಕೋರಿದ್ದಾರೆ.
ಈ ಹಾಡಿನ ತುಣುಕು YouTubeನಲ್ಲಿ 60,000 ಕ್ಕೂ ಅಧಿಕ like ಗಳನ್ನು ಪಡೆದುಕೊಂಡಿದೆ.
ಕಳೆದ 16 ವರ್ಷಗಳಿಂದ ದೇಶ ವಿದೇಶಗಳಲ್ಲಿ ಸಾವಿರಾರು ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಮನೆಮಾತಾಗಿರುವ ಗಾಯಕ ಜಗದೀಶ್ ಆಚಾರ್ಯ ಪುತ್ತೂರುರವರು ನಗರದ ದಿ. ಗೋಪಾಲಕೃಷ್ಣ ಆಚಾರ್ಯ ಮತ್ತು ವಾರಿಜರವರ ಪುತ್ರರಾಗಿದ್ದಾರೆ.
ಹಿಂದೂಸ್ತಾನಿ ಮತ್ತು ಕರ್ನಾಟಕ್ ಸಂಗೀತದಲ್ಲಿ ತರಬೇತಿಯನ್ನು ಪಡೆದ ಇವರು ಹಲವಾರು ಧ್ವನಿಸುರಳಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಭಕ್ತಿಗೀತೆ, ಭಾವಗೀತೆ, ಜಾನಪದ, ಸಿನೆಮಾ ಹಾಡುಗಳನ್ನು ಹಾಡಿದ್ದಾರೆ. ಇವರು ಹಾಡಿರುವ ಹಲವಾರು ಧ್ವನಿಸುರಳಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಚಿತ್ರಕಲೆಯಲ್ಲಿಅಪಾರ ಆಸಕ್ತಿಯನ್ನು ಹೊಂದಿದ್ದ ಇವರು ಶಾಲಾ ಕಾಲೇಜಿನಲ್ಲಿರುವಾಗಲೆ ಚಿತ್ರಕಲೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.
ನಾನಾ ಕಡೆಗಳಲ್ಲಿ ನಡೆಯುತ್ತಿದ್ದ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಬೆಳೆದ ಜಗದೀಶ್ ಆಚಾರ್ಯರವರು ಸಂಗೀತ ಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಸಾಧನೆಯ ಶಿಖರವೇರಿದ್ದು, `ಕಲಾಸಿಂಧು’ ಬಳಗ ಎಂಬ ತಂಡವನ್ನು ಕಟ್ಟಿಕೊಂಡು ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಸುಮಧುರ ಕಂಠಸಿರಿಯಲ್ಲಿ ಸಂಗೀತ ಪ್ರಿಯರನ್ನು ತಲೆತೂಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಭಜನೆಯಿಂದ ಗಾಯನ ಆರಂಭಿಸಿರುವ ಜಗದೀಶ್ ಆವರು ಉಡುಪಿಯ ನಾದ ವೈಭವಂ ವಾಸುದೇವ್ ಭಟ್ ಇವರ ಬಳಿ ಸುಮಾರು ಕಾಲ ಸಂಗೀತ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.
ಗಾನಗಂಧರ್ವ ಡಾ.ಯೇಸುದಾಸ್ ಅವರ ಹಾಡುಗಳನ್ನು ಅವರ ಶೈಲಿಯಲ್ಲಿಯೇ ಹಾಡುವ ಜಗದೀಶ್ ಪುತ್ತೂರುರವರನ್ನು ಕರ್ನಾಟಕ ಕರಾವಳಿಯ ‘ಜ್ಯೂನಿಯರ್ ಯೇಸುದಾಸ್’ ಎಂದೇ ಕರೆಯುತ್ತಾರೆ. ಗಾಯನ ಸ್ಪರ್ಧೆಗಳಲ್ಲಿ 3 ಬಾರಿ ಚಿನ್ನದ ಪದಕ ಪಡೆದ ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಂಗೀತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತನ್ನದೇ ಸ್ವಂತ ಸಂಗೀತ ತಂಡದ ಮೂಲಕ ಕಾರ್ಯಕ್ರಮ ನೀಡುತ್ತಿರುವ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಭೇಟಿ ನೀಡಿದ ಸಂದರ್ಭದಲ್ಲಿ 5 ಬಾರಿ ಮೋದಿಯವರ ಕಾರ್ಯಕ್ರಮದ ವೇದಿಕೆಯಲ್ಲಿ ತನ್ನ ಸ್ವರ ಮಾಧುರ್ಯದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇವರ ಸಂಗೀತ ಸೇವೆಗೆ ಅಂತರರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ರಾಷ್ಟ್ರಮಟ್ಟದಲ್ಲಿ ನಡೆದ ವಂದೇ ಮಾತರಂ ವಿಡಿಯೋ ಆಲ್ಬಮ್ ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸ್ಪರ್ಧಿಸಿದ 182 ಜನ ಸ್ಪರ್ಧಿಗಳಲ್ಲಿ ಮೊದಲ ಸ್ಥಾನ ಹಾಗೂ 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದು ರಾಷ್ಟ್ರದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹಾಡು ಯಾವುದೇ ಇರಲಿ ಸಾಹಿತ್ಯ ಹೇಗೆ ಇರಲಿ ಅದಕ್ಕೆ ಜೀವ ತುಂಬಿ ಹಾಡುವ ಜಗದೀಶ್ ಪುತ್ತೂರುರವರು ತನ್ನದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಂಗೀತವೇ ನನ್ನ ಉಸಿರು ಅನ್ನುವ ಅತ್ಯಂತ ಸರಳ ಸಜ್ಜನಿಕಯೆ ಗಾಯಕರಾಗಿದ್ದಾರೆ. ಇವರು ದೇಶದ ನಾನಾ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದ ಹಲವು ನಗರಗಳಲ್ಲಿ, ರಾಜ್ಯದ ನಾನಾ ಜಿಲ್ಲೆಗಳಲ್ಲಿನ ಪುಣ್ಯ ಕ್ಷೇತ್ರಗಳಲ್ಲಿ,ಕುವೈಟ್ನಲ್ಲಿ ೨ ಬಾರಿ ಹಾಗೂ ಬೆಹರಿನ್ ಸೇರಿದಂತೆ ಹಲವು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಸ್ವಂತ ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ ಹಲವಾರು ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಸ್ವತಃ ಸಾಹಿತ್ಯವನ್ನು ಬರೆದು ಸಂಗೀತ ನಿರ್ದೇಶನ ಮತ್ತು ಹಾಡುಗಳನ್ನು ಹಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಥೀಮ್ ಸಾಂಗ್ ಅನ್ನು ಸಂಗೀತ ನಿರ್ದೇಶನ ಮಾಡಿ ಹಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿರುವ ಇವರು ಈಗಾಗಲೇ ತುಳು ಚಿತ್ರವೊಂದಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಜಗದೀಶ್ ಪುತ್ತೂರು ಅವರಿಗೆ ಶುಭಾಶಯಗಳು