ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ : ಸಾಥ್ ನೀಡಿದ ಕೊಳ್ತಿಗೆ ಗ್ರಾ.ಪಂ.

ಕೊಳ್ತಿಗೆ : ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ

ಹರಿಪ್ರಸಾದ್ ಕುಂಟಿಕಾನ

ಪುತ್ತೂರು : ಕಳೆದ ನಾಲ್ಕು ವರ್ಷಗಳ ಹಿಂದೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ರಸ್ತೆ ಬದಿಗಳಲ್ಲಿ ಮೆರವಣಿಗೆಯೊಂದು ಸಾಗುತ್ತಿತ್ತು. ಮೆರವಣಿಗೆಯಲ್ಲಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ಲಾಸ್ಟಿಕ್ ವಿರೋಽ ಘೋಷಣೆಗಳನ್ನು ಕೂಗುತ್ತಿದ್ದರು, ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರ ಅದನ್ನು ಬಳಸಬೇಡಿ, ಬಳಸಿದರೆ ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಸಾಗುತ್ತಿದ್ದರು.

ಈ ಮೆರವಣಿಗೆ ಸ್ಥಳೀಯ ಜಿನಸು ವ್ಯಾಪಾರಿ ಹರಿಪ್ರಸಾದ್ ಕುಂಟಿಕಾನ ಅವರ ಅಂಗಡಿಯ ಮುಂದೆ ಸಾಗುತ್ತಿತ್ತು. ಮೆರವಣಿಗೆಯಲ್ಲಿ ಸಾಗದೇ ಇದ್ದರೂ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹರಿಪ್ರಸಾದ್ ಮನಸ್ಸಲ್ಲೇ ಜ್ಯಕಾರ ಹಾಕುತ್ತಿದ್ದರು.

ಇದೇ ವೇಳೆ ಹರಿಪ್ರಸಾದ್ ರವರ ಅಂಗಡಿಯಲ್ಲಿದ್ದ ವ್ಯಕ್ತಿಯೋರ್ವ ಇದೆಲ್ಲಾ ಆಗುವ ಕೆಲಸವಾ? ಪ್ಲಾಸ್ಟಿಕ್ ನಿಷೇಧ ಮಾಡಲು ಸಾಧ್ಯವುಂಟ? ಎಂದು ತಾತ್ಸಾರ ಮಾಡಿ ಮಾತನಾಡಿದರು. ಈ ಮತು ಹರಿಪ್ರಸಾದ್ ಗೆ ಹಿಡಿಸಲಿಲ್ಲ ಇದಕ್ಕಾಗಿ ಹರಿಪ್ರಸಾದ್ ಮಾಡಿದ್ದು ಕೊಳ್ತಿಗೆ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಪಣ.

ಅವರು ನಾಲ್ಕು ವರ್ಷಗಳ ಹಿಂದೆ ಚಾಲೆಂಜ್ ಆಗಿ ತಗೊಂಡ ಪ್ಲಾಸ್ಟಿಕ್ ಮುಕ್ತ ಆಂದೋಲನ ಬಹುತೇಕ ಯಶ ಕಂಡಿದೆ. ಪಂಚಾಯತ್‌ನ ಪ್ಲಾಸ್ಟಿಕ್ ಸಂಗ್ರಹ ಕೊಠಡಿಯಲ್ಲಿ ಸಂಗ್ರಹ ಆರಂಭದಲ್ಲಿ ಅಂಗಡಿಯಲ್ಲಿ ಶೇಖರಣೆಯಾದ ಪ್ಲಾಸ್ಟಿಕ್ ಅನ್ನು ಸ್ಥಳೀಯ ಪಂಚಾಯತ್‌ನ ಪ್ಲಾಸ್ಟಿಕ್ ಸಂಗ್ರಹ ಕೊಠಡಿಯಲ್ಲಿ ಸಂಗ್ರಹ ಮಾಡುತ್ತಿದ್ದರು.

ಅಂಗಡಿಗೆ ಬರುವ ಗ್ರಾಹಕರು ಎಸೆದ ಪ್ಲಾಸ್ಟಿಕ್ ಹಾಗೂ ಜಿನಸು ಸಾಮಾಗ್ರಿಗಳ ಪ್ಲಾಸ್ಟಿಕ್ ಇತ್ಯಾದಿಗಳನ್ನು ಸಂಗ್ರಹಿಸಿದ ಹರಿಪ್ರಸಾದ್‌ರವರು ಅದನ್ನು ಪಂಚಾಯತ್‌ಗೆ ಕೊಡುತ್ತಿದ್ದರು. ಮೊದ ಮೊದಲಿಗೆ ಪ್ಲಾಸ್ಟಿಕ್ ಸಂಗ್ರಹಿಸುವುದು ಕಷ್ಟವಾಗುತ್ತಿತ್ತು ಎನ್ನುವ ಹರಿಪ್ರಸಾದ್‌ರವರು ಛಲ ಬಿಡಲಿಲ್ಲ. ಹೇಗಾದರೂ ಮಾಡಿ ಗ್ರಾಹಕರಿಗೆ ಪ್ಲಾಸ್ಟಿಕ್‌ನ ತೊಂದರೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂಬ ಹಠ ಹೊಂದಿದ್ದರು.

ಸ್ವಚ್ಛತಾ ಸಮಿತಿ ರಚನೆ ಸ್ವಚ್ಛತೆಯ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವುದರ ಜೊತೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಕ್ಕೆ ಅನುಕೂಲವಾಗುವಂತೆ ಸ್ವಚ್ಛತಾ ಸಮಿತಿ ಕೊಳ್ತಿಗೆ ಎಂಬ ಸಮಿತಿಯೊಂದನ್ನು ರಚಿಸಿಕೊಂಡಿದ್ದಾರೆ. ಸಮಿತಿಯಲ್ಲಿ ಸುಮಾರು ೧೨ ಮಂದಿ ಸಕ್ರೀಯ ಸದಸ್ಯರಿದ್ದಾರೆ. ಮೊದಲ ತಿಂಗಳ ಬುಧವಾರ ಸಂಜೆ ಸಮಿತಿ ಸಭೆ ನಡೆಯುತ್ತದೆ. ಕಳೆದ ೧.೫ ವರ್ಷದಿಂದ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಸಮಿತಿಯ ಮುಖಾಂತರ ಪ್ರತಿ ವಾರ್ಡ್‌ನಲ್ಲಿ ಪ್ಲಾಸ್ಟಿಕ್ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಜೀಪು,ಓಮ್ನಿಯಲ್ಲಿ ಪ್ಲಾಸ್ಟಿಕ್ ಸಂಗ್ರಹ ಹರಿಪ್ರಸಾದ್‌ರವರ ಜಿನಸು ಅಂಗಡಿಗೆ ಪ್ರತಿ ಬುಧವಾರ ರಜಾ ದಿನವಾಗಿರುತ್ತದೆ.

ಹರಿಪ್ರಸಾದ್ ಕುಂಟಿಕಾನ

ಇವರ ಅಂಗಡಿಯಿಂದ ಸಾಮಾಗ್ರಿಗಳನ್ನು ಹೋಮ್ ಡೆಲಿವರಿ ಮಾಡುವ ವ್ಯವಸ್ಥೆ ಕೂಡ ಇದೆ. ಅಂಗಡಿಗೆ ಬರುವ ಪ್ರತಿ ಗ್ರಾಹಕರಿಗೆ ಇವರು ಪ್ಲಾಸ್ಟಿಕ್ ಅನ್ನು ಮನೆಯಲ್ಲಿಯೇ ಸಂಗ್ರಹ ಮಾಡಿ ಇಡುವಂತೆ ತಿಳಿಸುತ್ತಾರೆ. ಸಾಮಾನುಗಳನ್ನು ತೆಗೆದುಕೊಂಡ ಬಂದ ಜೀಪು ಅಥವಾ ಓಮ್ನಿ ಪುನಃ ತಿರುಗಿ ಅಂಗಡಿಗೆ ಬರುವಾಗ ಮನೆಯಲ್ಲಿದ್ದ ಪ್ಲಾಸ್ಟಿಕ್‌ಗಳನ್ನು ತುಂಬಿಸಿಕೊಂಡು ಬರುವ ವ್ಯವಸ್ಥೆ ಮಾಡಿದ್ದಾರೆ. ಹಾಗೆ ತಂದ ಪ್ಲಾಸ್ಟಿಕ್‌ಗಳನ್ನು ಪಂಚಾಯತ್‌ಗೆ ತೆಗೆದುಕೊಂಡು ಹೋಗಿ ಪ್ಲಾಸ್ಟಿಕ್ ಸೌಧದಲ್ಲಿ ಸಂಗ್ರಹ ಮಾಡಲಾಗುತ್ತದೆ. ಮನೆಗೆ ಸಾಮಾನು ಕೊಟ್ಟು ಬರುವಾಗ ಮನೆಯಲ್ಲಿದ್ದ ಪ್ಲಾಸ್ಟಿಕ್ ಅನ್ನು ಮತ್ತೆ ಅಂಗಡಿಗೆ ತಂದು ಸಂಗ್ರಹಿಸುವ ದೊಡ್ಡ ಕೆಲಸವನ್ನು ಹರಿಪ್ರಸಾದ್ ಮಾಡುತ್ತಿದ್ದಾರೆ.

ಸಂಗ್ರಹವಾದ ಪ್ಲಾಸ್ಟಿಕ್ ಹಾಸನಕ್ಕೆ

ಸಂಗ್ರಹಿಸಿದ ಪ್ಲಾಸ್ಟಿಕ್ ಹಾಸನಕ್ಕೆ ರವಾನೆ ಕಳೆದ ೧.೫ ವರ್ಷಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ಗಳನ್ನು ಹಾಸನದ ವಿನಾಯಕ ಪೈಪ್ಸು ಮತ್ತು ಪ್ಲಾಸ್ಟಿಕ್ ಕಂಪೆನಿಗೆ ನೀಡಲಾಗಿದೆ. ಕಂಪೆನಿಯವರೇ ಸ್ವತಃ ಕೊಳ್ತಿಗೆಗೆ ಲಾರಿ ತೆಗೆದುಕೊಂಡು ಬಂದು ಪ್ಲಾಸ್ಟಿಕ್ ತುಂಬಿಸಿಕೊಂಡು ಹೋಗಿದ್ದಾರೆ.

ಒಂದು ಲೋಡ್ ಪ್ಲಾಸ್ಟಿಕ್ ಅನ್ನು ಹಾಸನಕ್ಕೆ ರವಾನೆ ಮಾಡಲಾಗಿದೆ. ಲಾಭ ಇಲ್ಲ ಪರಿಸರಕ್ಕೆ ಆಗುವ ತೊಂದರೆಯಾಗುವುದನ್ನು ತಪ್ಪಿಸಲು ಮತ್ತು ಪ್ಲಾಸ್ಟಿಕ್ ನೀರು, ಗಾಳಿ, ಮಣ್ಣಿಗೆ ಸೇರಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಹರಿಪ್ರಸಾದ್.

ಪ್ಲಾಸ್ಟಿಕ್ ಸಂಗ್ರಹಕ್ಕೆ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಗಿರಿಜ ಧನಂಜಯ ಪೂಜಾರಿ ಹಾಗೂ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಪ್ಲಾಸ್ಟಿಕ್ ಬದಲು ಬಟ್ಟೆ ಚೀಟ ಇವರು ಜಿನಸು ಅಂಗಡಿಯಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಕೆ ಮಾಡುತ್ತಿಲ್ಲ ಅದರ ಬದಲಿಗೆ ಬಟ್ಟೆ ಚೀಲಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಅದರಲ್ಲೂ ವಿಶೇಷವಿದೆ. ಅಂಗಡಿಗೆ ಬರುವ ಜಿನಸು ಸಾಮಾಗ್ರಿಗಳ ಬ್ಯಾಗ್‌ಗಳನ್ನೇ ಇವರು ಟೈಲರ್‌ಗೆ ಕೊಟ್ಟು ೧೦ ರೂಪಾಯಿಯಲ್ಲಿ ಚೀಲಗಳನ್ನು ತಯಾರಿಸಿಟ್ಟುಕೊಳ್ಳುತ್ತಿದ್ದಾರೆ. ಗ್ರಾಹಕರಿಗೆ ಇದೇ ಬ್ಯಾಗ್‌ಗಳನ್ನು ೧೦ ರೂಪಾಯಿಗೆ ಕೊಡುತ್ತಿದ್ದಾರೆ. ಗ್ರಾಹಕರು ಮನೆಗೆ ಸಾಮಾನು ತಂದ ಬಳಿಕ ಈ ಬ್ಯಾಗ್ ಬೇಡ ಎಂದಾದರೆ ಮತ್ತೆ ಅಂಗಡಿಗೆ ತಂದುಕೊಟ್ಟರೆ ೧೦ ರೂಪಾಯಿಯನ್ನು ವಾಪಾಸ್ ನೀಡುತ್ತಾರೆ. ಆ ಮೂಲಕ ಬಟ್ಟೆ ಚೀಲ ಬಳಕೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪ್ಲಾಸ್ಟಿಕ್ ಸಂಗ್ರಹ ಕೆಲಸ ಮಾಡುತ್ತಿದ್ದೇನೆ. ಕೊಳ್ತಿಗೆಯಲ್ಲಿ ಸ್ವಚ್ಛತಾ ಸಮಿತಿ ರಚಿಸಿಕೊಂಡಿದ್ದೇವೆ. ಗ್ರಾಹಕರು, ಗ್ರಾಮಸ್ಥರು, ಪಂಚಾಯತ್‌ನವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಯಾವುದೇ ಲಾಭಕ್ಕಾಗಿ ಅಲ್ಲ. ಪ್ಲಾಸ್ಟಿಕ್ ಯಾವುದೇ ರೀತಿಯಲ್ಲಿ ಮಣ್ಣು, ಗಾಳಿ, ನೀರಿಗೆ ಸೇರಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ. ಪ್ಲಾಸ್ಟಿಕ್ ನಿಷೇಽಸುವಲ್ಲಿ ನಾವುಗಳು ಗಟ್ಟಿ ಮನಸ್ಸು ಮಾಡಬೇಕಾಗಿದೆ.

-ಹರಿಪ್ರಸಾದ್ ಕುಂಟಿಕಾನ, ಜಿನಸು ವ್ಯಾಪಾರಿ ಪೆರ್ಲಂಪಾಡಿ

ಕೊಳ್ತಿಗೆ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಬೇಕು ಎಂಬ ನಿಟ್ಟಿನಲ್ಲಿ ಹರಿಪ್ರಸಾದ್ ಕುಂಟಿಕಾನ ಅವರು ಮಾಡುತ್ತಿರುವ ಕೆಲಸ ಶ್ಲಾಘನೀಯವಾದದ್ದು, ತನ್ನದೇ ಜೀಪು, ಓಮ್ನಿಯ ಮೂಲಕ ಪ್ಲಾಸ್ಟಿಕ್ ಸಂಗ್ರಹಿಸುತ್ತಿದ್ದಾರೆ. ಇದಲ್ಲದೆ ತನ್ನ ಅಂಗಡಿಗೆ ಬರುವ ಗ್ರಾಹಕರಿಗೆ ಬಟ್ಟೆ ಚೀಟ ಕೊಡುವ ಮೂಲಕ ಪ್ಲಾಸ್ಟಿಕ್ ಬಳಕೆ ದೂರ ಮಾಡುವ ಬಗ್ಗೆ ಜಾಗೃತಿ ಮತ್ತು ಸಮಿತಿ ರಚಿಸಿಕೊಂಡು ಪ್ಲಾಸ್ಟಿಕ್ ಬಳಕೆಯಿಂದಾಗುವ ತೊಂದರೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕಾಗಿದೆ.

ಗಿರಿಜಾ ಧನಂಜಯ

-ಗಿರಿಜಾ ಧನಂಜಯ, ಅಧ್ಯಕ್ಷರು ಕೊಳ್ತಿಗೆ ಗ್ರಾಪಂ

Leave A Reply

Your email address will not be published.