ಸವಣೂರಿನಲ್ಲಿ ಭಜನಾ ಸತ್ಸಂಗ ಸಮಾವೇಶದ ಆಮಂತ್ರಣ ವಿತರಣೆ

Share the Article

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ,ಭಜನ ಸತ್ಸಂಗ ಸಮಾವೇಶ ಸಮಿತಿ 2020, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಇದರ ವತಿಯಿಂದ ಫೆ.8ರಂದು ನಡೆಯಲಿರುವ ಭಜನಾ ಸತ್ಸಂಗ ಸಮಾವೇಶ -2020,ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ,ಭಜನಾ ಸಂಕೀರ್ತನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಸವಣೂರು ಪೇಟೆಯಲ್ಲಿ ಫೆ.5ರಂದು ಆಮಂತ್ರಣ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು,ಯೋಜನೆಯ ಸವಣೂರು ಒಕ್ಕೂಟದ ಅಧ್ಯಕ್ಷ ನಾರಾಯಣ ಗೌಡ ಪೂವ,ವಲಯ ಮೇಲ್ವಿಚಾರಕಿ ಅಶ್ವಿನಿ ಎಂ.ಜಿ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ದಯಾನಂದ ಮೆದು,ಸದಸ್ಯ ಜಿತಾಕ್ಷ ಮೊದಲಾದವರಿದ್ದರು.

Leave A Reply

Your email address will not be published.