ಉದ್ಯಮಿ ಚಂದ್ರಹಾಸ ಆಳ್ವ ಶಿವಕೃಪಾ ಇನ್ನಿಲ್ಲ

Share the Article

ಉದ್ಯಮಿ ಚಂದ್ರಹಾಸ ಆಳ್ವ ನಿಧನ

ಪುತ್ತೂರು: ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಪರ್ಪುಂಜದಲ್ಲಿರುವ ಶಿವಕೃಪಾ ಅಡಿಟೋರಿಯಂನ ಪಾಲುದಾರ ಚಂದ್ರಹಾಸ ಆಳ್ವ ಫೆ.4ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.ಅವರಿಗೆ‌ 42 ವರ್ಷ ವಯಸ್ಸಾಗಿತ್ತು.

ಕುಂಬ್ರದಲ್ಲಿ 20 ವರ್ಷಗಳಿಂದ ಶಿವಕೃಪಾ ಲೈಟಿಂಗ್ಸ್ ಹಾಗೂ ಶಾಮಿಯನ ವ್ಯವಹಾರ ಮಾಡುತ್ತಿದ್ದ ಚಂದ್ರಹಾಸ ಆಳ್ವರು ಚಿರಪರಿಚಿತರಾಗಿದ್ಧರು. ತನ್ನ ಗೆಳೆಯರ ಹಾಗೂ ಅತ್ಮೀಯರ ಬಳಗದಲ್ಲಿ ಕುಟ್ಟಿಯಣ್ಣ ಎಂದೇ ಜನಜನಿತರಾಗಿದ್ದರು.

ಶಿವಕೃಪಾ ಆಡಿಟೋರಿಯಂ

2018ರ ಫೆಬ್ರವರಿಯಲ್ಲಿ ಪಾಲುದಾರಿಕೆಯಲ್ಲಿ ಮಾಣಿ ಮೈಸೂರು ಹೆದ್ದಾರಿಯ ಪರ್ಪುಂಜದಲ್ಲಿ ಶಿವಕೃಪಾ ಆಡಿಟೋರಿಯಮ್ ಅನ್ನು ಆರಂಭಿಸಿದರು. ಅತ್ಯಲ್ಪ‌ ಅವಧಿಯಲ್ಲಿ ಈ ಅಡಿ ಟೋರಿಯಂ ಜನಮನ್ನಣೆ ಗಳಿಸಿತ್ತು.

ಇದೇ ಅಡಿಟೋರಿಯಂನಲ್ಲಿ ಕುಳಿತಿದ್ದಾಗ ಹೃದಯಘಾತವಾಗಿದ್ದು ಕೂಡಲೇ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬರಲಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನಹೊಂದಿದರು ಎಂದು ತಿಳಿದು ಬಂದಿದೆ. ಚಂದ್ರಹಾಸ ಆಳ್ವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಆಸ್ಪತ್ರೆ ಬಳಿ ಜಮಾಯಿಸಿದರು.

ಆರ್ಯಾಪು ಗ್ರಾಮದ ಕುರಿಯದಲ್ಲಿ ವಾಸವಿದ್ದ ಆಳ್ವರು ಮೂಲತಃ ಒಳಮೊಗ್ರು ಗ್ರಾಮದ ಕಲ್ಲಡ್ಕದವರು. ಮೃತರು ತಂದೆ ಸಂಕಪ್ಪ ಆಳ್ವ,ತಾಯಿ ರತ್ನಾವತಿ,ಮಕ್ಕಳಾದ ಅವಿನ್,ಅವಿಸ್ಥಾ,ಸಹೋದರ ಉದ್ಯಮಿ ರಮೇಶ್ ಆಳ್ವ,ಸಹೋದರಿ ಗೀತಾ ಅವರನ್ನು ಅಗಲಿದ್ದಾರೆ.

ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಆಳ್ವರು ಸಮಾಜಮುಖಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.

ಶಿವಕೃಪಾ ಚಂದ್ರಹಾಸ ಆಳ್ವರಿಗೆ ಶ್ರದ್ಧಾಂಜಲಿ: ವ್ಯಾಪಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದ ಕುಂಬ್ರದ ವರ್ತಕರು

Leave A Reply

Your email address will not be published.