ಫೆ.11-12 : ಕಲ್ಮಡ್ಕ ಶೆಟ್ಟಿಗದ್ದೆ ಶ್ರೀ ಕೊರತ್ತಿ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಟಾ ಮಹೋತ್ಸವ, ಕಲಾಭಿಶೇಕ, ನೇಮೋತ್ಸವ

ಭಾಸ್ಕರ್ ಜೋಗಿಬೆಟ್ಟು

 

ನಮ್ಮ ತುಳುನಾಡಿನಲ್ಲಿ ಆರಾಧನೆ, ಆಚರಣೆ, ಜಾನಪದ, ಪೌರಾಣಿಕ ಕಥೆ, ಸಂಸ್ಕಾರ – ಸಂಸ್ಕೃತಿಗೆ ಎಲ್ಲಿಲ್ಲದ ಮಹತ್ವವಿದೆ.ದೇವರ ಜಾತ್ರೋತ್ಸವದ ರೀತಿಯಲ್ಲಿ ದೈವಗಳ ನಡಾವಳಿ, ನೇಮೋತ್ಸವ ಭಕ್ತಿ ಪೂರ್ವಕವಾಗಿ ನಡೆಯುತ್ತದೆ. ಇದೆ ರೀತಿಯಾಗಿ  ಪುರಾತನ ಹಿನ್ನೆಲೆಯುಳ್ಳ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿ ನೆಲೆಯೂರಿರುವ ಶ್ರೀ ಕೊರತ್ತಿ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಟಾ ಮಹೋತ್ಸವ, ಕಲಾಭಿಶೇಕ, ನೇಮೋತ್ಸವಕ್ಕೆ ಸಿದ್ಧವಾಗುತ್ತಿದೆ. 

ಶ್ರೀ ಕೊರತ್ತಿ ದೈವಸ್ಥಾನದ ಐತಿಹಾಸಿಕ ಹಿನ್ನೆಲೆ

ತುಳುನಾಡಿನ ದೈವಗಳಿಗೆ ಸಾವಿರಾರು ವರ್ಷಗಳ ಹಿನ್ನೆಲೆ ಸಾಮಾನ್ಯ. ಇದಕ್ಕೆ ಸಂಬಂಧ ಪಟ್ಟಂತೆ ಜಾನಪದ ಕಥೆಗಳು ಇವೆ. ಹೀಗೆಯೆ ಶೆಟ್ಟಿಗದ್ದೆಯಲ್ಲಿ ನೆಲೆಯಾಗಿರುವ ಶ್ರೀ ಕೊರತ್ತಿ ದೈವ ಸ್ಥಾನಕ್ಕೂ 125 ರಿಂದ 150 ವರ್ಷಗಳ ಇತಿಹಾಸವಿದೆ ಎಂದು ಊರಿನ ಹಿರಿಯರ ಅಭಿಪ್ರಾಯ ( ಅಧಿಕೃತ ಮಾಹಿತಿ ಇಲ್ಲ). ಈ ದೈವ ಸ್ಥಾನದಲ್ಲಿ ಹಲವಾರು ವರ್ಷಗಳಿಂದ ದೈವಗಳಿಗೆ ತಂಬಿಲ, ಪೂಜಾ ಕಾರ್ಯಗಳು ನಡೆಯುತ್ತಿವೆ. 

ತುಳುನಾಡಿನಲ್ಲಿ ನೆಲೆಯೂರಿರುವ ಅಪರೂಪದ ದೈವ

ಇಲ್ಲಿ ಶ್ರೀ ಕೊರತ್ತಿ ದೈವ ಪ್ರಧಾನ ದೈವವಾಗಿದೆ. ಕೊರತ್ತಿ ದೈವ ಎಂಬುದು ಕೇರಳ ಮೂಲದ ದೈವವಾಗಿದೆ. ಆದ್ದರಿಂದ ತುಳುನಾಡಿನಲ್ಲಿ ಇದು ಅತಿ ವಿರಳವಾಗಿ ಕಂಡು ಬರುತ್ತದೆ. ಈ ದೈವದ ಜೊತೆ ಅಪರೂಪದ ದೈವಗಳು ಎಂಬಂತೆ ಬೊಂಟೆ ಅಂಗಾರ, ಪಂಜುರ್ಲಿ, ಗುಳಿಗ ದೈವಗಳ ಸಾನಿಧ್ಯವಿದೆ. ಶ್ರೀ ಕೊರತ್ತಿ ದೈವವು ಅನೇಕ ಭಕ್ತರ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಹಲವಾರು ರೀತಿಯ ಮಹಿಮೆ ಗಳಿಂದ ಭಕ್ತರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.ಹಾಗಾಗಿ ಕಲ್ಮಡ್ಕ ಗ್ರಾಮದ ಜನರು ಈ ದೈವಗಳನ್ನು ಭಕ್ತಿ ಪೂರ್ವಕವಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ. 

ಉತ್ಸವ ಕಾರ್ಯಕ್ರಮಗಳು

ಪ್ರಸ್ತುತ ಇರುವ ದೈವ ಸ್ಥಾನವು ರಸ್ತೆಯ ಪಕ್ಕದಲ್ಲೆ ಇದ್ದು, ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ ಶ್ರೀ ರಾಮ ಮಂದಿರದ ಕೆಲಗಿರುವ ವಿಶಾಲವಾದ ಪ್ರದೇಶದಲ್ಲಿ ‌ಸಮಸ್ತ ಊರಿನ ಭಕ್ತರ ಸಮ್ಮುಖದಲ್ಲಿ ದೈವಗಳ ಪುನಃ ಪ್ರತಿಷ್ಟಾಪನೆ, ಕಲಾಭಿಶೇಕ, ನೇಮೋತ್ಸವ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳು  11 Feb 2020 – 12 Feb 2020 ರಂದು ನಡೆಯಲಿದೆ. ದೈವತಾ ಕಾರ್ಯಕ್ರಮದ ಯಶಸ್ಸು ಗೆ ಊರಿನ ಸ್ಥಳೀಯ ಸಂಘ ಸಂಸ್ಥೆಗಳು ಕೈ ಜೋಡಿಸಲಿವೆ. ಊರಿನ ಪರವೂರಿನ ಭಕ್ತಾದಿಗಳಿಗೆ ಕಾರ್ಯಕ್ರಮಕ್ಕೆ ಭಕ್ತಿ ಪೂರ್ವಕ ಆಮಂತ್ರಣವಿದೆ. 

ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕೊರತ್ತಿ ದೈವ ಮತ್ತು ಪರಿವಾರ ದೈವಗಳ ಆಶೀರ್ವಾದವು ಊರಿನ ಸಮಸ್ತ ಭಕ್ತರ ಮೇಲೆ ಇರಲಿ ಎಂಬುದೆ ನನ್ನ ಆಶಯ.

1 Comment
  1. arerrywep says

    priligy buy around the mid end of February

Leave A Reply

Your email address will not be published.