ದರ್ಭೆ ವೃತ್ತಕ್ಕೆ ನಿವೃತ್ತ ತಹಶಿಲ್ದಾರ್ ಸಿ ಎಚ್ ಕೋಚಣ್ಣ ರೈ ಹೆಸರಿಡಲು ಯುವ ಬಂಟರ ಸಂಘದಿಂದ ಮನವಿ

0 10

ಪುತ್ತೂರು ತಾಲೂಕು ನಿವೃತ್ತ ತಹಶಿಲ್ದಾರ್ ಸಿ ಎಚ್ ಕೋಚಣ್ಣ ರೈ ಯವರು ಪುತ್ತೂರು ಜನರಿಗೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಬೀರಮಲೆ ಬೆಟ್ಟವನ್ನು ಉಳಿಸಿ ಬೆಳೆಸಿ ಪ್ರವಾಸಿ ಕೇಂದ್ರವಾಗಲು ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಗದ್ದೆಯನ್ನು ಉಳಿಸಿದ ಭ್ರಷ್ಟಾಚಾರ ವಿರೋಧಿ , ಪ್ರಾಮಾಣಿಕ‌ ಗಾಂಧೀವಾದಿಯನ್ನು ಮುಂದಿನ‌ ಜನಾಂಗ ನೆನಪಿಸುವಂತಾಗಲು ದರ್ಭೆ ವೃತ್ತಕ್ಕೆ ಸಿ ಎಚ್ ಕೋಚಣ್ಣ ರೈ ವೃತ್ತ ಎಂಬುದಾಗಿ ಹೆಸರಿಡಲು ಪುತ್ತೂರು ತಾಲೂಕು ಯುವ ಬಂಟರ ಸಂಘದಿಂದ ಮನವಿ ನೀಡಲಾಯಿತು.

ಅಧ್ಯಕ್ಷ ಪ್ರಕಾಶ್ ರೈ ಸಾರಕರೆ, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಉಪಾಧ್ಯಕ್ಷ ಕೆ ಸಿ ಅಶೋಕ್ ಶೆಟ್ಟಿ, ಕ್ರೀಡಾ ಸಂಚಾಲಕ ಶಶಿರಾಜ್ ರೈ, ತರಬೇತಿ ಸಂಚಾಲಕ ಸಂತೋಷ ಭಂಡಾರಿ ಚಿಲ್ಮೆತ್ತಾರ್ ನಿಯೋಗದಲ್ಲಿದ್ದರು.

Leave A Reply