Day: January 30, 2020

ಕೋಡಿ೦ಬಾಳ ಆಸಿಡ್ ಆರೋಪಿಗೆ ಕಠಿಣ ಶಿಕ್ಷೆಆಗಲಿ, ಸಂತ್ರಸ್ತೆಯ ಹೆಣ್ಣು ಮಕ್ಕಳ ಶಿಕ್ಷಣದ ಪೂರ್ತಿ ವೆಚ್ಚವನ್ನು ಸರ್ಕಾರವೇ ಭರಿಸಬೇಕು । ಬಿಜೆಪಿ ಮಹಿಳಾ ಮೋರ್ಚಾ

ಕಡಬ : ಕೋಡಿ೦ಬಾಳ ಆಸಿಡ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಸಂತ್ರಸ್ತರ ಸಂಪೂರ್ಣ ವೈದ್ಯಕೀಯ ವೆಚ್ಚ ಸರ್ಕಾರ ಭರಿಸಬೇಕು ಎಂದು ಸರ್ಕಾರವನ್ನು ಇಂದು ಒತ್ತಾಯಿಸಲಾಯಿತು. ಅಲ್ಲದೆ ಸಂತ್ರಸ್ತೆಯ ಮೂವರು ಹೆಣ್ಣು ಮಕ್ಕಳ ಶಿಕ್ಷಣದ ಪೂರ್ತಿ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕಡಬ ತಹಸೀಲ್ದಾರ್ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಬೆಳ್ತಂಗಡಿಯ ಸರಕಾರಿ ದಂತ ವೈದ್ಯನಿಂದ ಯುವತಿಗೆ ಲೈಂಗಿಕ ಕಿರುಕುಳ : ದಂತ ವೈದ್ಯ ಅಂದರ್

ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೊಠಡಿ ಸಂಖ್ಯೆ 36 ರಲ್ಲಿ ಕರ್ತವ್ಯದಲ್ಲಿದ್ದ ದಂತ ವೈದ್ಯರಾದ ಡಾ: ಸುಧಾಕರ ಎಂಬವರಲ್ಲಿ ಯುವತಿ ಒಬ್ಬರು ಹಲ್ಲಿನ ಚಿಕಿತ್ಸೆಗೆಂದು ಹೋಗಿದ್ದ ಸಮಯ ಆರೋಪಿ ದಂತ ವೈದ್ಯ ಪಿರ್ಯಾದಿದಾರರಿಗೆ ಚಿಕಿತ್ಸೆ ನೀಡುತ್ತಾ ಲೈಂಗಿಕ ಕಿರುಕುಳ ನೀಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 354, 354A(1)(I) IPC ಯಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

error: Content is protected !!
Scroll to Top