Day: January 21, 2020

ಇವತ್ತಿನ ಅಶಾಂತಿಯ ಹಿಂದೆ RSS ಮತ್ತುVHP ಇವೆ | ಕುಮಾರಸ್ವಾಮಿ ಗುರುತರ ಆರೋಪ

ಶಾಂತಿಯನ್ನು ಕದಡುವ ಕೆಲಸವನ್ನು RSS ಮತ್ತುVHP ಗಳು ಮಾಡುತ್ತಿವೆ. ಈ ದೇಶ RSS ಗೆ ಸೇರಿದ್ದಲ್ಲ. ಬಿಜೆಪಿಯ ನೆರಳಿನಲ್ಲಿ ಇವು ಕಾರ್ಯಾಚರಿಸುತ್ತಿವೆ ಎಂದು ಗುರುತರ ಆರೋಪವನ್ನು ಸಂಘ ಪರಿವಾರ ಮತ್ತುಬಿಜೆಪಿಯ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿದ್ದಾರೆ. ಅಲ್ಲದೆ ಮಂಗಳೂರಿನಲ್ಲಿ ನಿನ್ನೆ ನಡೆದಿರುವುದು ಬಾಂಬಿನ ಅಣಕು ಪ್ರದರ್ಶನ. ಕಬ್ಬಿಣದ ಪೆಟ್ಟಿಗೆಯಲ್ಲಿ ಇದ್ದದ್ದುಬಾಂಬ್ ಅಲ್ಲ, ಅದು ಪಟಾಕಿ ಎಂದಿದ್ದಾರೆ. ಅಲ್ಲದೆ, ಮಂಗಳೂರಿನ ಎಸ್ ಪಿ ಹರ್ಷ ಅವರಿಗೆ ” ಇವತ್ತು ಏನೂ ಬಾಂಬ್ ಇಟ್ಟಿಲ್ಲವಾ ?” ಎಂದು ಪೊಲೀಸ್ …

ಇವತ್ತಿನ ಅಶಾಂತಿಯ ಹಿಂದೆ RSS ಮತ್ತುVHP ಇವೆ | ಕುಮಾರಸ್ವಾಮಿ ಗುರುತರ ಆರೋಪ Read More »

Breaking । ಮಂಗಳೂರು ಟೈಮ್ ಬಾಂಬ್ ಆರೋಪಿ ಗುರುತು ಪತ್ತೆ? | ಶೀಘ್ರ ಬಂಧನಕ್ಕಾಗಿ ಸರ್ಪ ವ್ಯೂಹ ರಚನೆ

ಮಂಗಳೂರು ಟೈಮ್ ಬಾಂಬ್ ಆರೋಪಿ ಗುರುತು ಪತ್ತೆಯಾಗಿದೆ. ಆರೋಪಿಯು ಮಣಿಪಾಲದ ಕೃಷ್ಣಮೂರ್ತಿ ಅವರ ಮಗ ಆದಿತ್ಯ ರಾವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಅಧಿಕೃತ ಮಾಹಿತಿ ಇನ್ನೂ ಬರಬೇಕಿದೆ. ಆದರೆ ಸಿಕ್ಕಿರುವ ಮಾಹಿತಿ ನಿಖರವೇ ಎಂದು ಹೇಳಲಾಗುತ್ತಿದೆ. ನಿನ್ನೆ ತಾನೇ ಆರೋಪಿಯು ಉಡುಪಿಯತ್ತ ಚಲಿಸಿದ್ದಾನೆ ಎಂದು ನಾವು ವರದಿ ಮಾಡಿದ್ದೆವು. ಅಂತೆಯೇ, ಆತ ಉಡುಪಿ ಮಾರ್ಗವಾಗಿ ಪರಾರಿಯಾಗಿರುವ ಶಂಕೆ ಇದೆ. ಈತ ಈ ಹಿಂದೆ ಕೂಡಾ ಬೆಂಗಳೂರಿನಲ್ಲಿ ಹುಸಿ ಬಾಂಬ್ ಕರೆ ಮಾಡಿ ಪೋಲೀಸರ ಅತಿಥಿಯಾಗಿದ್ದನೆಂದು …

Breaking । ಮಂಗಳೂರು ಟೈಮ್ ಬಾಂಬ್ ಆರೋಪಿ ಗುರುತು ಪತ್ತೆ? | ಶೀಘ್ರ ಬಂಧನಕ್ಕಾಗಿ ಸರ್ಪ ವ್ಯೂಹ ರಚನೆ Read More »

ಸುಳ್ಯದ NMC ಉಪನ್ಯಾಸಕ ಡಾ| ಪೂವಪ್ಪ ಕಣಿಯೂರು ಅಮಾನತ್ತಿಗೆ ಶಿಕ್ಷಣ ಇಲಾಖೆಗೆ ಬಿಜೆಪಿ ಬಿಜೆಪಿ ದೂರು । CAA ಬಗ್ಗೆ ಅಪಪ್ರಚಾರದ ಹಿನ್ನೆಲೆ

ಸುಳ್ಯದ NMC ಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ| ಪೂವಪ್ಪ ಕಣಿಯೂರು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಬಿಜೆಪಿ ಮನವಿ ಸಲ್ಲಿಸಿದೆ. ಡಾ| ಪೂವಪ್ಪ ಕಣಿಯೂರು ಇವರು ಸರಕಾರೀ ಉದ್ಯೋಗದಲ್ಲಿದ್ದು, ಈಗ ತಮ್ಮ ವಾಟ್ಸ್ ಆಪ್ ಮೂಲಕ ದೇಶದ ಸಂವಿಧಾನ ಒಪ್ಪಿಕೊಂಡ ಪೌರತ್ವ ಕಾಯ್ದೆ-2019 ನ್ನು ವಿರೋಧಿಸುತ್ತಾ, ದೇಶದ ಸಂವಿಧಾನದ ಬಗ್ಗೆ ಅಪನಂಬಿಕೆ ಬರುವಂತೆ ಬರೆದಿದ್ದಾರೆ. ಅಲ್ಲದೆ, ಪೌರತ್ವ ಕಾಯ್ದೆ-2019 (CAA) ಬಗ್ಗೆ ಮೂಡುವ ಹಲವು ತಪ್ಪು ಅಭಿಪ್ರಾಯಗಳನ್ನು ನಿಟ್ಟಿನಲ್ಲಿ ಹಲವು …

ಸುಳ್ಯದ NMC ಉಪನ್ಯಾಸಕ ಡಾ| ಪೂವಪ್ಪ ಕಣಿಯೂರು ಅಮಾನತ್ತಿಗೆ ಶಿಕ್ಷಣ ಇಲಾಖೆಗೆ ಬಿಜೆಪಿ ಬಿಜೆಪಿ ದೂರು । CAA ಬಗ್ಗೆ ಅಪಪ್ರಚಾರದ ಹಿನ್ನೆಲೆ Read More »

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನ ಕಳ್ಳರ ಬಂಧನ | ನ್ಯಾಯಾಂಗ ವಶಕ್ಕೆ

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ದೇವಸ್ಥಾನವೊಂದರ ವಠಾರದಲ್ಲಿ ದಿನಾಂಕ 18-01-2020 ರಂದು ಬಂಟ್ವಾಳ ತೆಂಕಕಜೆಕ್ಕಾರು ಗ್ರಾಮದ ನಿವಾಸಿ ಶ್ರೀಮತಿ ಹೊನ್ನಮ್ಮ ಮತ್ತು ಬಂಟ್ವಾಳ ಉಳಿ ಗ್ರಾಮದ ನಿವಾಸಿ ಶ್ರೀಮತಿ ಮೋನಮ್ಮ ಎಂಬವರುಗಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವವನ್ನು ಯಾರೋ ಕಳ್ಳರು ಕಳವು ಮಾಡಿರುವುದಕ್ಕೆ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 04/2020 ಹಾಗೂ 05/2020 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ಆರೋಪಿಗಳಾದ ಹಾಸನ ಜಿಲ್ಲೆ, ಅರಕಲಗೂಡು …

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನ ಕಳ್ಳರ ಬಂಧನ | ನ್ಯಾಯಾಂಗ ವಶಕ್ಕೆ Read More »

ಮಂಡೆಕೋಲು ಸೊಸೈಟಿ ಚುನಾವಣೆ ಎಲ್ಲಾ ಹನ್ನೆರಡು ಕ್ಷೇತ್ರಗಳಿಗೂ ಅವಿರೋಧ ಆಯ್ಕೆ । ಆಡಳಿತ ಮತ್ತೆ ಬಿಜೆಪಿ ತೆಕ್ಕೆಗೆ

ಮಂಡೆಕೋಲು : ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ ಹನ್ನೆರಡು ಕ್ಷೇತ್ರಗಳಿಗೂ ಅವಿರೋಧ ಆಯ್ಕೆಯಾಗುವ ಮೂಲಕ ಚುನಾವಣಾ ರಹಿತವಾಗಿ ನೂತನ ಆಡಳಿತ ಮಂಡಳಿಯ ಆಯ್ಕೆಯಾಗಿದೆ. ಈ ಮೂಲಕ ಮಂಡೆಕೋಲು ಸೊಸೈಟಿ ಚುನಾವಣೆಯಲ್ಲಿ ಹೊಸತೊಂದು ಇತಿಹಾಸ ನಿರ್ಮಾಣವಾಗಿದೆ. ಇದರೊಂದಿಗೆ ಸೊಸೈಟಿ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಮತ್ತೊಮ್ಮೆ ತನ್ನ ಬಗಲಿಗೆ ಹಾಕಿಕೊಂಡು ಬೀಗುತ್ತಿದೆ. ಈಗಾಗಲೇ ಹಿಂದುಳಿದ ವರ್ಗಗಳ ಎರಡು ಕ್ಷೇತ್ರ, ಮಹಿಳಾ ಮೀಸಲು ಕ್ಷೇತ್ರ, ಪ.ಜಾತಿ ಹಾಗೂ ಪ.ಪಂಗಡ ಮೀಸಲು ಕ್ಷೇತ್ರ ಮತ್ತು ಸಾಲಗಾರ ರಹಿತ …

ಮಂಡೆಕೋಲು ಸೊಸೈಟಿ ಚುನಾವಣೆ ಎಲ್ಲಾ ಹನ್ನೆರಡು ಕ್ಷೇತ್ರಗಳಿಗೂ ಅವಿರೋಧ ಆಯ್ಕೆ । ಆಡಳಿತ ಮತ್ತೆ ಬಿಜೆಪಿ ತೆಕ್ಕೆಗೆ Read More »

ಪಾಲ್ತಾಡಿ ಕೃಷಿಕರಿಂದಲೇ ಕಿಂಡಿ ಅಣೆಕಟ್ಟಿಗೆ ಹಲಗೆ, ತುಂಬಿ ತುಳುಕಿದ ಗೌರಿ ಹೊಳೆ | ಜಿ.ಪಂ.ಸಿಇಓ ಡಾ.ಸೆಲ್ವಮಣಿ ಅವರಿಂದ ಶ್ಲಾಘನೆ

ಸವಣೂರು : ಹೊಳೆಯಲ್ಲಿ ವೃಥಾ ಹರಿದು ಹೋಗುತ್ತಿದ್ದನೀರನ್ನು ಕಿಂಡಿ ಅಣೆಕಟ್ಟಿಗೆ ಊರಿನ ಕೃಷಿಕರುಸೇರಿಕೊಂಡು ಹಲಗೆ ಅಳವಡಿಸುವ ಮೂಲಕ ಗೌರಿ ಹೊಳೆ ತುಂಬುವಂತೆ ಮಾಡಿದ್ದಾರೆ. ಪಾಲ್ತಾಡಿ ಗ್ರಾಮದ ನಾಡೋಳಿ, ಜಾಣಮೂಲೆಯಲ್ಲಿ ಹೊಳೆಯಲ್ಲಿಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸುವ ಮೂಲಕ ಜಲಸಂರಕ್ಷಣೆಯೊಂದಿಗೆ ಕೃಷಿಗೂ ಪೂರಕವಾಗುವಂತೆ ಮಾಡಿದ್ದಾರೆ. ಈ ಕಾರ್ಯಕ್ಕೆ ಖುದ್ದು ದ.ಕ.ಜಿ.ಪಂ.ಸಿಇಓ ಡಾ.ಆರ್ ಸೆಲ್ವಮಣಿ ಅವರೇ ಸ್ಥಳಕ್ಕೆ ಬೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿ, ಎಲ್ಲಾ ಕಡೆಗಳಲ್ಲಿ ಊರಿನವರೇ ಸೇರಿಕೊಂಡು ಇಂತಹ ಕಾರ್ಯ ಮಾಡಿದರೆ ಅಂತರ್ಜಲ ಹೆಚ್ಚಳದ ಜತೆಗೆ ಬೇಸಿಗೆಯಲ್ಲಿ ಕೃಷಿಗೆ ನೀರೋದಗಿಸಲು …

ಪಾಲ್ತಾಡಿ ಕೃಷಿಕರಿಂದಲೇ ಕಿಂಡಿ ಅಣೆಕಟ್ಟಿಗೆ ಹಲಗೆ, ತುಂಬಿ ತುಳುಕಿದ ಗೌರಿ ಹೊಳೆ | ಜಿ.ಪಂ.ಸಿಇಓ ಡಾ.ಸೆಲ್ವಮಣಿ ಅವರಿಂದ ಶ್ಲಾಘನೆ Read More »

ಟೈಮ್ ಬಾಂಬರ್ ಉಗ್ರನ ಕೈಲಿ ಆಟೋ ಚಾರ್ಜಿಗೆ ಹಣವಿರಲಿಲ್ಲವಂತೆ !!

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬಿಟ್ಟು ವಾಪಸ್ಸು ಅಲ್ಲಿಂದ ಮರಳುವಾಗ ಆತ ಕದ್ರಿ ದೇವಸ್ಥಾನಕ್ಕೆ ಬಿಡುವಂತೆ ರಿಕ್ಷಾ ಚಾಲಕನಿಗೆ ಕೇಳಿಕೊಂಡಿದ್ದನೆಂದು ಈಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಮೊದಲು ಈ ಟೈಮ್ ಬಾಂಬರ್ ನು ವಿಮಾನ ನಿಲ್ದಾಣದ ಹತ್ತಿರವಿರುವ ಕೆಂಜಾರುಗೆ ಸಾರಿಗೆ ಬಸ್ಸಿನಲ್ಲಿ ಬಂದಿದ್ದ. ಆನಂತರ ವಿಮಾನ ನಿಲ್ದಾಣಕ್ಕೆ ನಡೆದುಕೊಂಡೇ ಹೋಗಿ ಅಲ್ಲಿ ಬಾಂಬಿಟ್ಟು ಬಂದಿದ್ದ. ವಾಪಸ್ಸು ಬರುವಾಗ ನಡಕೊಂಡು ಬರುತ್ತಿದ್ದ. ಮಾರ್ಗಮಧ್ಯೆ ಒಂದು ರಿಕ್ಷಾ ಬಂದಾಗ ಅದಕ್ಕೆ ಕೈ ಅಡ್ಡ ಹಾಕಿ ” ಎಂಕ್ ಕದ್ರಿ …

ಟೈಮ್ ಬಾಂಬರ್ ಉಗ್ರನ ಕೈಲಿ ಆಟೋ ಚಾರ್ಜಿಗೆ ಹಣವಿರಲಿಲ್ಲವಂತೆ !! Read More »

error: Content is protected !!
Scroll to Top