ಪಾಲ್ತಾಡಿ ಕೃಷಿಕರಿಂದಲೇ ಕಿಂಡಿ ಅಣೆಕಟ್ಟಿಗೆ ಹಲಗೆ, ತುಂಬಿ ತುಳುಕಿದ ಗೌರಿ ಹೊಳೆ | ಜಿ.ಪಂ.ಸಿಇಓ ಡಾ.ಸೆಲ್ವಮಣಿ ಅವರಿಂದ ಶ್ಲಾಘನೆ

ಸವಣೂರು : ಹೊಳೆಯಲ್ಲಿ ವೃಥಾ ಹರಿದು ಹೋಗುತ್ತಿದ್ದನೀರನ್ನು ಕಿಂಡಿ ಅಣೆಕಟ್ಟಿಗೆ ಊರಿನ ಕೃಷಿಕರುಸೇರಿಕೊಂಡು ಹಲಗೆ ಅಳವಡಿಸುವ ಮೂಲಕ ಗೌರಿ ಹೊಳೆ ತುಂಬುವಂತೆ ಮಾಡಿದ್ದಾರೆ. ಪಾಲ್ತಾಡಿ ಗ್ರಾಮದ ನಾಡೋಳಿ, ಜಾಣಮೂಲೆಯಲ್ಲಿ ಹೊಳೆಯಲ್ಲಿಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸುವ ಮೂಲಕ ಜಲಸಂರಕ್ಷಣೆಯೊಂದಿಗೆ ಕೃಷಿಗೂ ಪೂರಕವಾಗುವಂತೆ ಮಾಡಿದ್ದಾರೆ.


Ad Widget

Ad Widget

ಈ ಕಾರ್ಯಕ್ಕೆ ಖುದ್ದು ದ.ಕ.ಜಿ.ಪಂ.ಸಿಇಓ ಡಾ.ಆರ್ ಸೆಲ್ವಮಣಿ ಅವರೇ ಸ್ಥಳಕ್ಕೆ ಬೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿ, ಎಲ್ಲಾ ಕಡೆಗಳಲ್ಲಿ ಊರಿನವರೇ ಸೇರಿಕೊಂಡು ಇಂತಹ ಕಾರ್ಯ ಮಾಡಿದರೆ ಅಂತರ್ಜಲ ಹೆಚ್ಚಳದ ಜತೆಗೆ ಬೇಸಿಗೆಯಲ್ಲಿ ಕೃಷಿಗೆ ನೀರೋದಗಿಸಲು ನೆರವಾಗಲಿದೆ. ಇಂತಹ ಕಾರ್ಯಗಳು ಹೆಚ್ಚು ಹೆಚ್ಚುನಡೆಯಬೇಕು ಎಂದರು.


Ad Widget

ಅಲ್ಲದೆ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ, ಸವಣೂರು, ಪಾಲ್ತಾಡಿ ಗ್ರಾಮದಲ್ಲಿ ಗ್ರಾ.ಪಂ.ಸದಸ್ಯರೇ ಮುತುವರ್ಜಿ ವಹಿಸಿ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಕಾರ್ಯಮಾಡುತ್ತಿದ್ದಾರೆ ಎಂದು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ಸಿಇಓ ಅವರಲ್ಲಿ ತಿಳಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸವಣೂರು ಗ್ರಾ.ಪಂ. ಸದಸ್ಯ ಸತೀಶ್ ಅಂಗಡಿಮೂಲೆ, ಪಿಡಿಓ ನಾರಾಯಣ ಬಿ, ಲೆಕ್ಕ ಸಹಾಯಕ ಎ.ಮನ್ಮಥ, ಸಿಬಂದಿ ಪ್ರಮೋದ್ ಕುಮಾರ್ ರೈ ಜತೆಗಿದ್ದರು.

ಪ್ರಸ್ತುತ ಬೋರ್‌ವೆಲ್ 700 ಅಡಿ ಕೊರೆದರೂ ನೀರುಸಿಗುವುದೇ ಅಪರೂಪ. ಇಂತಹ ಸನ್ನಿವೇಶದಲ್ಲಿಹೊಳೆಯಲ್ಲಿ ಹರಿಯುತ್ತಿರುವ ನೀರನ್ನು ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ, ಈ ಮೂಲಕ ಮಾದರಿ ಕಾರ್ಯವನ್ನು ಇಲ್ಲಿನ ಕೃಷಿಕರು ತೋರಿಸಿಕೊಟಿದ್ದಾರೆ. ಜಲಸಂಪನ್ಮೂಲ ಇಲಾಖೆಯಿಂದ ನಿರ್ಮಿಸಿದ ಈ ಅಣೆಕಟ್ಟಿಗೆ ಗ್ರಾ.ಪಂ, ಜಿ.ಪಂ. ಇನ್ನಿತರ ಯಾವುದೋ ಇಲಾಖೆಯವರು ಹಲಗೆ ಅಳವಡಿಸಲಿ ಎಂದು ಕಾಯಲಿಲ್ಲ.ಯಾರಿಗೂ ದುಂಬಾಳು ಬಿದ್ದಿಲ್ಲ. ಕೃಷಿಕರೆಲ್ಲಾಸೇರಿಕೊಂಡು ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿಕೊಂಡು, ನೀರಿನ ಬರವನ್ನು ದೂರಮಾಡಿದ್ದಾರೆ.

Ad Widget

Ad Widget

Ad Widget

ಪಾಲ್ತಾಡಿ ಗ್ರಾಮದ ಮಂಜುನಾಥನಗರದ ನಾಡೋಳಿಯಲ್ಲಿಹರಿಯುವ ಗೌರಿ ಹೊಳೆಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಮೂಲಕ ಸುತ್ತಲಿನ 30 ಕ್ಕೂಹೆಚ್ಚುಕೃಷಿಕರ ತೋಟಗಳಿಗೆ ನೀರುಣಿಸುತ್ತಿದೆ. ಇದರಿಂದಬಿರು ಬೇಸಿಗೆಯಲ್ಲಿ ತೋಟ ಒಣಗುವ ಸಮಸ್ಯೆ ದೂರವಾಗಿದೆ. ಈ ಮೂಲಕ ನೀರಿನ ಬರದಿಂದ ತಪ್ಪಿಸಲು ಇಲ್ಲಿನ ಕೃಷಿಕರು ಪರಿಹಾರ ಕಂಡುಕೊಂಡಿದ್ದಾರೆ.

ಈ ಅಣೆಕಟ್ಟಿನಲ್ಲಿ ಎಪ್ರಿಲ್, ಮೇ ವರೆಗೂ ನೀರುಶೇಖರಣೆಗೊಳ್ಳುತ್ತಿದೆ. ಇದರಿ೦ದ ಅಂತರ್ಜಲ ಮಟ್ಟ ಹೆಚ್ಚಳವಾಗಲೂ ಸಹಕಾರಿಯಾಗಿದೆ. ಜತೆಗೆ ಸುತ್ತ ಮುತ್ತಲಿನ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಗಮನಾರ್ಹವಾಗಿ ಏರಿಕೆ ಕಂಡು ಬಂದಿದೆ.

ಕೃಷಿಕರಿಂದಲೇ ನಿರ್ವಹಣೆ

ಅಡಿಕೆ ಕೃಷಿಕರೇ ಹೆಚ್ಚಿರುವ ಈ ಗ್ರಾಮದಲ್ಲಿ ಕೃಷಿಕರೇ ಸೇರಿಕೊಂಡು ಹಲಗೆ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ರಮೇಶ್ ರಾವ್ ಹಾಗೂ ಸತೀಶ್ಬಂಬಿಲದೋಳ ಅವರ ನೇತೃತ್ವದಲ್ಲಿ ಹಲಗೆ ಅಳಡಿಸುವಕಾರ್ಯ ನಡೆಸಿದ್ದಾರೆ. ರೋಹಿತ್ ರೈ, ಸಂಜೀವರೈ, ಕುಂಜಾಡಿ, ಬೆಳಿಯಪ್ಪಗೌಡ, ಹನೀಫ್,ರಝಾಕ್, ಸೋಮಪ್ಪ ಗೌಡ ಜಾಣಮೂಲೆ ಮೊದಲಾದವರು ಸಹಕಾರ ನೀಡಿದ್ದಾರೆ. ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆಗೆ ಸುಮಾರು 16000 ದಿಂದ 20000 ರೂ ವೆಚ್ಚವಾಗುತ್ತದೆ.

ಅಂತರ್ಜಲ ಮಟ್ಟ ಹೆಚ್ಚಳ,ತುಂಬಿ ತುಳುಕುವ ಕೆರೆ, ಬಾವಿ
ಕೃಷಿಕಾರ‍್ಯಕ್ಕೆ ನೀರೊದಗಿಸುವುದರೊಂದಿಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಸುತ್ತಲಿನ ಕೆರೆ ಬಾವಿಗಳಲ್ಲೂ ನೀರಿನ ಮಟ್ಟ ಹೆಚ್ಚಳವಾಗಿರಯವುದು ಗಮನಿಸಬೇಕಾದ ಅಂಶ. ಈ ಅಣೆಕಟ್ಟಿನಲ್ಲಿ 2 ಕಿ.ಮೀಗೂ ಹೆಚ್ಚು ಉದ್ದದಲ್ಲಿ 40 ಅಡಿ ಅಗಲವಾಗಿದ್ದು 9 ಅಡಿನೀರು ಶೇಖರಣೆಯಾಗಿದೆ. ಸುಮಾರು 10 ಅಡಿ ನೀರು ನಿಲ್ಲುವ ಸಾಮರ್ಥ್ಯವಿದೆ.

ಈ ಅಣೆಕಟ್ಟು ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ರವರ ವಿಶೇಷ ಮುತುವರ್ಜಿಯಿಂದ 10 ವರ್ಷಗಳ ಹಿಂದೆ ಜಲಸಂಪನ್ಮೂಲ ಇಲಾಖೆಯಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಈ ನೀರು ಶೇಖರಿಸುವ ಕಾರ‍್ಯವನ್ನುನಿರಂತರವಾಗಿ ಮಾಡಲಾಗುತ್ತಿದೆ.

ಕಿಂಡಿ ಅಣೆಕಟ್ಟಿನ ಬದಿಯ ಕಾಂಕ್ರೀಟ್ ಕಿತ್ತುಹೋಗಿ ನೀರು ಸೋರಿಕೆಯಾಗುತ್ತಿದ್ದು,ಇದರ ದುರಸ್ತಿ ಕುರಿತು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಿದೆ.

ಗ್ರಾಮ ವಿಕಾಸದ ಪಂಚ ಕಾರ್ಯಗಳಲ್ಲಿ ಜಲಸಂರಕ್ಷಣೆಯೂ ಒಂದು ಈ ನಿಟ್ಟಿನಲ್ಲಿ ಜಲಸಂರಕ್ಷಣೆಯಲ್ಲಿ ಬಂಟ್ವಾಳದ ಇಡ್ಕಿದು ಗ್ರಾಮದ ನಂತರ ಸ್ಥಾನವನ್ನು ಪುತ್ತೂರಿನ ಪಾಲ್ತಾಡಿ ಗ್ರಾಮ ಪಡೆದುಕೊಂಡಿದೆ.

ಈ ಗ್ರಾಮದಲ್ಲಿಹಲವೆಡೆ ಸಣ್ಣ ಸಣ್ಣ ತೊರೆಗಳಿಗೂ ಮಣ್ಣು ಹಾಗೂ ಅಡಿಕೆಮರದ ಹಲಗೆಯನ್ನು ಹಾಕಿ ತಾತ್ಕಾಲಿಕ ಕಟ್ಟಗಳನ್ನುರಚಿಸಿದ್ದಾರೆ. ಅಲ್ಲದೆ ಸಣ್ಣ ಕಿಂಡಿ ಅಣೆಕಟ್ಟಗಳನ್ನು ನಿರ್ಮಿಸಿಜಲಸಂರಕ್ಷಣೆಯ ಕಾರ್ಯವೂ ನಡೆಯುತ್ತಿದೆ.

error: Content is protected !!
Scroll to Top
%d bloggers like this: