ಎಸ್ ಎಸ್ ಎಲ್ ಸಿ ಮಕ್ಕಳನ್ನು ಓದಿಗೆ ಹಚ್ಚಲು ಖುದ್ದು ಶಾಸಕರೇ ಅಖಾಡಕ್ಕೆ । ನಸುಕಿನ ನಾಲ್ಕು ಗಂಟೆಗೆ ಮಕ್ಕಳ ಮನೆ ಭೇಟಿ ಮಾಡಿದ ಪುತ್ತೂರು ಶಾಸಕ ಮಠ೦ದೂರು
ಬೆಳಗಿನ ಚುಮುಚುಮು ಚಳಿಯಲ್ಲೇ ಪುತ್ತೂರಿನ ಶಾಸಕರು ತಮ್ಮ ಸ್ವಗ್ರಾಮ ಹಿರೇಬಂಡಾಡಿಯ ಶಾಲಾ ಮಕ್ಕಳ ಮನೆ ಬಾಗಿಲು ತಟ್ಟಿ ಮಕ್ಕಳನ್ನು ಎಬ್ಬಿಸಿ ಪರೀಕ್ಷೆಗೆ ಅವರನ್ನು ಓದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಇನ್ನೇನು ಶಾಲಾ ಮಕ್ಕಳ ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನ ಹತ್ತಿರವಾಗುತ್ತಿದ್ದು, ಮಾರ್ಚ್ 27 ರಂದು ಪ್ರಾರಂಭವಾಗುವ ಪರೀಕ್ಷೆಗಳು ಏಪ್ರಿಲ್ 9 ರಂದು ಮುಕ್ತಾಯಗೊಳ್ಳಲಿದೆ. ಮಕ್ಕಳನ್ನು ಓದಿಸಲು ಹಚ್ಚುವ ಮತ್ತು ಮೋಟಿವೇಟ್ ಮಾಡುವ ನಿಟ್ಟಿನಲ್ಲಿ ಸ್ವತಃ ಶಾಸಕರೇ ತಮ್ಮ ಸ್ವಗ್ರಾಮದಲ್ಲಿ ಮಕ್ಕಳ ಮನೆ ತಲುಪಿದ್ದಾರೆ.
ಹಿಂದೆಯೆಲ್ಲ, ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರವಾದಂತೆಲ್ಲ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಮಕ್ಕಳಿಗೆ ಫೋನ್ ಮಾಡಿ ಸಿಹಿನಿದ್ರೆಯಲ್ಲಿರುವ ಮಕ್ಕಳನ್ನು ಎಬ್ಬಿಸಿ ಪರೀಕ್ಷೆಗೆ ತಯಾರು ಮಾಡಲು ಪ್ರಯತ್ನಿಸುತ್ತಿದ್ದರು.
ಈಗ ಹಿರೇಬಂಡಾಡಿಯ ಸರಕಾರೀ ಪ್ರೌಢಶಾಲೆಯಲ್ಲಿರುವ 55 ಮಕ್ಕಳ ಪ್ರತಿ ಮನೆಗೂ ಭೇಟಿ ನೀಡುವ ನಸುಕಿನಲ್ಲಿ ಭೇಟಿಮಾಡುವ ಕಾರ್ಯಕ್ಕೆ ಗ್ರಾಮಸ್ಥರು, ಶಾಲೆಯ ಶಿಕ್ಷಕ ವೃಂದ ಭೇಟಿಯಾಗುತ್ತಿದ್ದಾರೆ. ಇವತ್ತು ಶಾಸಕರು ನಸುಕಿನಲ್ಲಿ ನಾಲ್ಕು ಗಂಟೆಗೆ ಎದ್ದುಊರವರ ಮತ್ತು ಶಿಕ್ಷಕರ ಮಕ್ಕಳ ಮನೆ ಭೇಟಿಗೆ ಹೋಗಿದ್ದಾರೆ.
ಶಾಸಕರ ಜತೆ, ಗ್ರಾಮ ಪಂಚಾಯತ್ ರಾದ ಹಮ್ಮಬ್ಬಶೌಕತ್ ಅಲಿ ಮತ್ತು ಇತರ ಪಂಚಾಯತ್ ಸದಸ್ಯರು, ಹೈಸ್ಕೂಲು ಶಾಲಾ ಕಾರ್ಯಾಧ್ಯಕ್ಷರಾದ ಶ್ರೀಧರ ಮಠ೦ದೂರು , ಗಣಿತ ಶಿಕ್ಷಕರಾದ ಹರಿಕಿರಣ್ , ದೈಹಿಕ ಶಿಕ್ಷಕರಾದ ಸೀತಾರಾಮ್ ಬಂಡಾಡಿ, ಲಕ್ಷ್ಮೀಷ ನಿಡ್ಡೆ೦ಕಿ, ಹರೀಶ್ ಪಾಲೆತ್ತಡಿ ಮತ್ತಿತರ ಗ್ರಾಮಸ್ಥರು ಈ ಸಂಧರ್ಭದಲ್ಲಿ ಹಾಜರಿದ್ದರು.