10 ಕೆಜಿ ತೂಕದ ಬೃಹತ್ ಟೈಮ್ ಬಾಂಬ್ ಇಟ್ಟ ಆರೋಪಿ ಉಡುಪಿಯತ್ತ ಪರಾರಿ । ಬೆನ್ನು ಬಿದ್ದ ಪೊಲೀಸರು

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ 10 ಕೆಜಿ ತೂಕದ ಬೃಹತ್ ಸ್ಪೋಟವಾಗುವ ತಾಕತ್ತಿರುವ ಸಜೀವ ಬಾಂಬ್ ಪತ್ತೆಯಾಗಿದೆ. ಈ ಸಜೀವ ಬಾಂಬು ಇಟ್ಟು ಹೆಚ್ಚು ಹೊತ್ತಾಗಿಲ್ಲ. ಬಾಂಬಿಟ್ಟ ಶಂಕಿತ ಉಗ್ರ ಉಡುಪಿಯತ್ತ ಹಾಕಿದ ಹೆಜ್ಜೆಯ ಜಾಡನ್ನು ಹಿಡಿದ ಪೊಲೀಸು ತಂಡ ಬೆನ್ನು ಬಿದ್ದಿದೆ.

ಸಜೀವ ಬಾಂಬು ಸ್ಪೋಟಗೊಂಡರೂ, ಸ್ಪೋಟದ ತೀವ್ರತೆಯನ್ನು ಕಡಿಮೆ ಮಾಡಬಲ್ಲ ವಾಹನ ಈಗಾಗಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

10 ಕೆಜಿ ತೂಕದ ಬೃಹತ್ ಸ್ಫೋಟವನ್ನು ಉಂಟು ಮಾಡಿ, ಸುಮಾರು ಒಂದು ಕಿಲೋಮೀಟರು ವ್ಯಾಪ್ತಿಯಲ್ಲಿ ಡ್ಯಾಮೇಜ್ ಮಾಡಬಲ್ಲ ಶಕ್ತಿಯಿರುವ ಬಾಂಬ್ ಇದಾಗಿದೆ. ಆರೋಪಿಗಳು ಆಟೋದಲ್ಲಿ ಬಂದು ಬಾಂಬಿರುವ ಬ್ಯಾಗ್ ಇರಿಸಿ ಮತ್ತೆ ಅದೇ ರಿಕ್ಷಾದಲ್ಲಿ ವಾಪಸ್ಸಾಗಿದ್ದರು.

ಈ ಬಾಂಬನ್ನು ಬಾಂಬ್ ಪ್ರೂಫ್ ವಾಹನದ ಒಳಗೆ ಈಗಾಗಲೇ ಇರಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳವು, ಇನ್ನು ಕೆಲವೇ ಕ್ಷಣಗಳಲ್ಲಿ ತಲುಪಲಿದ್ದಾರೆ. ಈಗಾಗಲೇ ನ್ಯಾಷನಲ್ ಇನ್ವೆಸ್ಟಿಗೇಟೀವ್ ಏಜನ್ಸಿ ( NIA )ತಂಡ ಮುಂಬಯಿಯಿಂದ ಬಿಟ್ಟಿದ್ದು ಮಂಗಳೂರನ್ನು ಇನ್ನೇನು ತಲುಪುವುದರಲ್ಲಿದೆ.

ಮಂಗಳೂರು ಮತ್ತು ದೇಗುಲ ನಗರಿ ಉಡುಪಿಯ ಎಲ್ಲೆಲ್ಲೂ ಪೊಲೀಸರೇ ಕಂಡುಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದ ಇತರ ನಗರಗಳಲ್ಲೂ, ಚೆಕ್ ಪೋಸ್ಟ್ ಗಳಲ್ಲೂ ತಲಾಶೆ ನಡೆದಿದೆ. ಮಂಗಳೂರಿನ ವಿಮಾನನಿಲ್ದಾಣದ ಪೂರ್ತಿ ಜನರನ್ನು ಸ್ಥಳಾಂತರಿಸಲಾಗಿದೆ.

Leave A Reply