ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ । ಆಡಳಿತ ಮಂಡಳಿ ಬಿಜೆಪಿ ತೆಕ್ಕೆಗೆ

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ,ಕೆದಿಲ ಇದರ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಅವಿರೋಧ ನಡೆದಿದೆ.

13 ಜನ ನಿರ್ದೇಶಕರಿರುವ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ9 ರಲ್ಲಿ ಬಿಜೆಪಿ ಬೆಂಬಲಿತ ಹಾಗೂ 4 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಆನಂತ ಕೃಷ್ಣ ಭಟ್, ಚೆನ್ನಪ್ಪ ಗೌಡ ಕುದುಮಾನ್ , ಜಗದೀಶ ಕುಮಾರ್, ಧರ್ನಪ್ಪ ಗೌಡ , ರಾಮಣ್ಣ ಗೌಡ, ಶಿವರಾಮ ಭಟ್ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಜ್ಯೋತಿ ಆರ್, ಶಿಫಾಲಿ ಪಿ. ರೈ, ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನದಿಂದ ಮಹಮ್ಮದ್ ಜಿ, ಲಕ್ಷ್ಮಣ ಎ. ಹಾಗೂ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಧನಂಜಯ, ಕುಞಂಪ್ಪ ಪಿ.ಕೆ. ಹಾಗೂ ಸಾಲಗಾರರಲ್ಲದ ಸ್ಥಾನಕ್ಕೆ ಪದ್ಮನಾಭ ಭಟ್ ಪೆರ್ನಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯನ್ನು ಸಹಕಾರಿ ಸೇವಾ ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ನಡೆಸಿಕೊಟ್ಟರು.

ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾದವರು:

ಪದ್ಮನಾಭ ಭಟ್ ಪೆರ್ನಾಜೆ ,
ಲಕ್ಷ್ಮಣ ಎ.,
ಆನಂತ ಕೃಷ್ಣ ಭಟ್,
ಜಗದೀಶ ಕುಮಾರ್,
ಧರ್ನಪ್ಪ ಗೌಡ,
ಶಿವರಾಮ ಭಟ್ ,
ಧನಂಜಯ ,
ಕುಞಂಪ್ಪ.ಪಿ ಕೆ.,
ಜ್ಯೋತಿ ಕೆ.ಆರ್.

ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾದವರು:

ಚೆನ್ನಪ್ಪ ಗೌಡ ಕುದುಮಾನ್,
ರಾಮಣ್ಣ ಗೌಡ ಕುದುಮಾನ್,
ಶಿಫಾಲಿ ಪಿ. ರೈ ,
ಮಹಮ್ಮದ್ ಜಿ. ಆಯ್ಕೆಯಾಗಿದ್ದಾರೆ.

Leave A Reply