Day: January 19, 2020

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ । ಆಡಳಿತ ಮಂಡಳಿ ಬಿಜೆಪಿ ತೆಕ್ಕೆಗೆ

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ,ಕೆದಿಲ ಇದರ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಅವಿರೋಧ ನಡೆದಿದೆ. 13 ಜನ ನಿರ್ದೇಶಕರಿರುವ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ9 ರಲ್ಲಿ ಬಿಜೆಪಿ ಬೆಂಬಲಿತ ಹಾಗೂ 4 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಆನಂತ ಕೃಷ್ಣ ಭಟ್, ಚೆನ್ನಪ್ಪ ಗೌಡ ಕುದುಮಾನ್ , ಜಗದೀಶ ಕುಮಾರ್, ಧರ್ನಪ್ಪ ಗೌಡ , ರಾಮಣ್ಣ ಗೌಡ, ಶಿವರಾಮ ಭಟ್ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಜ್ಯೋತಿ ಆರ್, ಶಿಫಾಲಿ …

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ । ಆಡಳಿತ ಮಂಡಳಿ ಬಿಜೆಪಿ ತೆಕ್ಕೆಗೆ Read More »

ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ ಅಪ್ಪೆಲ, ಗ್ರಾಮಾಭಿವೃದ್ಧಿ ಯೋಜನೆ ನೆರಿಯ ಒಕ್ಕೂಟದ ಸದಸ್ಯರಿಂದ ಶ್ರಮದಾನ

ನೆರಿಯ : ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ, ಅಪ್ಪೆಲ ಇಲ್ಲಿ ಜನವರಿ 24 ಕ್ಕೆ ನಡೆಯುವ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಗ್ರಾಮಾಭಿವೃದ್ಧಿ ಯೋಜನೆ ನೆರಿಯ ಒಕ್ಕೂಟ, ಇದರ ಸದಸ್ಯರಿಂದ ಶ್ರಮದಾನ ನಡೆಯಿತು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರಮದಾನ ನಡೆಯಿತು. ಒಟ್ಟು 30 ಜನ ಗ್ರಾಮಸ್ಥರು ಶ್ರಮ ಸೇವೆಯಲ್ಲಿ ಪಾಲ್ಗೊಂಡಿದ್ದರು. ಸುದ್ದಿ: ಯೋಗರಾಜ್ ಬಯಲು

ಜೀರ್ಣೋದ್ದಾರ ಸಂಭ್ರಮದಲ್ಲಿ ಸರ್ವೆ ಶ್ರೀಸುಬ್ರಾಯ ದೇವಸ್ಥಾನ

ಸವಣೂರು : ಸರ್ವೆ ಗ್ರಾಮದ ಶ್ರೀಸುಬ್ರಾಯ ದೇವಸ್ಥಾನವು ಜೀರ್ಣೋದ್ದಾರದ ಸಂಭ್ರಮದಲ್ಲಿದ್ದು ಈಗಾಗಲೇ ಅಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ.ಸುಮಾರು ೪೦೦ ವರ್ಷಗಳಿಗೂ ಅನೇಕ ವರ್ಷಗಳ ಇತಿಹಾಸವಿರುವ ಈ ದೇವಾಲಯದ ಜಾತ್ರೋತ್ಸವಗಳು ಬಹಳ ಹಿಂದಿನಿಂದಲೂ ವಿಜೃಂಬಣೆಯಿಂದ ನಡೆಯುತ್ತಿತ್ತು ಎಂಬುದಕ್ಕೆ ಸರ್ವೆ ಗೌರಿ ನದಿಯಲ್ಲಿರುವ ಜಳಕದ ಗುಂಡಿ ಹಾಗೂ ದೇವರ ಉತ್ಸವ ಮೂರ್ತಿಗಳು ಸಾಕ್ಷಿಯಾಗಿದೆ. 80ರ ದಶಕದಲ್ಲಿ ದಿ.ಸೀತಾರಾಮ ಶೆಟ್ಟಿ ಸೊರಕೆ ಹಾಗೂ ದಿ.ರಾಮಯ್ಯ ರೈ ಬೊಟ್ಯಾಡಿಗುತ್ತು ಅವರ ನೇತೃತ್ವದಲ್ಲಿ , 2007 ರಲ್ಲಿ ದಿ.ಗೋರ್ವನ ಹೆಗ್ಡೆ ಅವರ ನೇತೃತ್ವದಲ್ಲಿ ಗರ್ಭಗುಡಿಯ …

ಜೀರ್ಣೋದ್ದಾರ ಸಂಭ್ರಮದಲ್ಲಿ ಸರ್ವೆ ಶ್ರೀಸುಬ್ರಾಯ ದೇವಸ್ಥಾನ Read More »

ಶೋಭ ಕರಂದ್ಲಾಜೆ ಕಾಣಿಯೂರು ಶ್ರೀ ಅಮ್ಮನ ಕ್ಷೇತ್ರಕ್ಕೆ ಭೇಟಿ । ಹುಟ್ಟೂರಿನ ಮೇಲೆ ಇದೆ ಅವರಿಗೆ ವಿಶೇಷ ಪ್ರೀತಿ

ಜೀರ್ಣೋದ್ಧಾರಗೊಳ್ಳುತ್ತಿರುವ ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರಕ್ಕೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆಯವರು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಣಿಯೂರು ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ಅವರು ಜೀರ್ಣೋದ್ಧಾರದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶೋಭಕ್ಕ ಪ್ರತಿ ವರ್ಷ ತನ್ನ ಹುಟ್ಟ್ಟೂರಾದ ಚಾರ್ವಾಕದ ಶ್ರೀ ಕಪಿಲೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಬರುತ್ತಾರೆ. ಅಲ್ಲದೆ, ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸುವಾಗಲೂ ಊರಿನ ದೇವಸ್ಥಾನಗಳಿಗೆ ಭೇಟಿ ನೀಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅವರು ವಿಶೇಷವಾಗಿ, ತನ್ನ ಹುಟ್ಟೂರಿನ …

ಶೋಭ ಕರಂದ್ಲಾಜೆ ಕಾಣಿಯೂರು ಶ್ರೀ ಅಮ್ಮನ ಕ್ಷೇತ್ರಕ್ಕೆ ಭೇಟಿ । ಹುಟ್ಟೂರಿನ ಮೇಲೆ ಇದೆ ಅವರಿಗೆ ವಿಶೇಷ ಪ್ರೀತಿ Read More »

error: Content is protected !!
Scroll to Top