KFD,PFI, SDPI ನಿಷೇಧಿಸಿ । ಗೃಹಮಂತ್ರಿ, ರಾಜ್ಯಪಾಲರಿಗೆ ಹಿಂದೂ ಮುಖಂಡರ ಮನವಿ

ಕರ್ನಾಟಕ ರಾಜ್ಯದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಮತ್ತು ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನು ತಯಾರಿ ನಡೆಸುವ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸುತ್ತಿರುವ ಮುಸ್ಲಿಂ ಸಂಘಟನೆಗಳಾದ KFD, PFI ಸಂಘಟನೆ ಮತ್ತು ರಾಜಕೀಯ ಪಕ್ಷವಾಗಿ ಮುಸ್ಲಿಂ ಸಂಘಟನೆಗೆ ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ SDPI ಸಂಘಟನೆಗಳನ್ನು ರಾಜ್ಯಾದ್ಯಂತ ನಿಷೇಧ ಹೇರಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ಹಾಗೂ ಪುತ್ತೂರು ಪ್ರಖಂಡ ವತಿಯಿಂದ ಮಾನ್ಯ ಗೃಹಮಂತ್ರಿಗಳಿಗೆ ಹಾಗೂ ರಾಜ್ಯಪಾಲರಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ಮನವಿ ಸಲ್ಲಿಸಲಾಯಿತು.
ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ ಕೃಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ್ ಶ್ರೀಧರ್ ತೆಂಕಿಲ, ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೋಳ್ಪಾಡಿ, ಪ್ರಖಂಡ ಸಹ ಸಂಚಾಲಕ್ ಜಯಂತ ಕುಂಜೂರುಪಂಜ, ಸಹ ಸಂಚಾಲಕ್ ಪ್ರಶಾಂತ್ ಪರ್ಪುಂಜ, ಪ್ರಮುಖರಾದ ಸೋಮನಾಥ ಬ್ರಹ್ಮನಗರ, ಜಯಪ್ರಸಾದ್ ಮುಂಡೂರು, ಚೇತನ್ ಬೊಳ್ವಾರ್, ನವೀನ್ ಬೊಳ್ವಾರ್, ದಿನೇಶ್ ತಿಂಗಳಾಡಿ,ರಂಜಿತ್ ಸವಣೂರು, ಹರಿಪ್ರಸಾದ್ ಪೆರ್ನೆ, ಪ್ರಸನ್ನ ಪೆರ್ನೆ, ಸತೀಶ್ ಸಂಪ್ಯ ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.